ಸಂಘದ ಎರಡನೆಯ ಸರಸಂಘಚಾಲಕರ ಜೀವನಾಧಾರಿತ ಕೃತಿ ‘ರಾಷ್ಟ್ರತಪಸ್ವಿ ಶ್ರೀಗುರೂಜಿ’ ಲೋಕಾರ್ಪಣೆ

 

ಹೊಸ ದಿಗಂತ ಡಿಜಿಟಲ್ ಡೆಸ್ಕ್

ವ್ಯಕ್ತಿಪೂಜೆ ಮಾಡದೇ ಒಂದು ತತ್ವವನ್ನು ಆಧರಿಸಿ ಗುರುವನ್ನಾಗಿ ಸ್ವೀಕಾರ ಮಾಡಿರುವುದೇ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ದ ವಿಶೇಷತೆ ಎಂದು ಸಂಘದ ಜ್ಯೇಷ್ಠ ಪ್ರಚಾರಕ ಸು.ರಾಮಣ್ಣ ತಿಳಿಸಿದರು.

ಬೆಂಗಳೂರಿನ ಜಯನಗರದ ಯುವಪಥದಲ್ಲಿ ರಾಷ್ಟ್ರೋತ್ಥಾನ ಸಾಹಿತ್ಯ ಆಯೋಜಿಸಿರುವ ರಾಷ್ಟ್ರತಪಸ್ವಿ ಶ್ರೀಗುರೂಜಿ ಪುಸ್ತಕ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು. ರಾಷ್ಟ್ರದ ಒಳಿತಿಗಾಗಿ, ರಾಷ್ಟ್ರೀಯತೆಯ ಉನ್ನತಿಗಾಗಿ ಹಗಲಿರುಳು ಶ್ರಮಿಸಿದ, ಸಂಘದ ಎರಡನೆಯ ಸರಸಂಘಚಾಲಕರ ಜೀವನಾಧಾರಿತ ಕೃತಿ ಬಾಗಲಕೋಟೆಯ ಭೋವಿ ಗುರುಪೀಠದ ಪೂಜ್ಯ ಶ್ರೀ ಇಮ್ಮಡಿ ಸಿದ್ಧಾರಾಮೇಶ್ವರ ಸ್ವಾಮೀಜಿಯ ದಿವ್ಯ ಸಾನ್ನಿಧ್ಯದಲ್ಲಿ ಬಿಡುಗಡೆಯಾಯಿತು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ವರಿಷ್ಠರು ಹಾಗೂ ಹಿರಿಯ ಲೇಖಕರಾದ ರಂಗಹರಿಯವರು ಹಿಂದಿಯಲ್ಲಿ ರಚಿಸಿದ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದವರು ಸಂಘದ ಹಿರಿಯರಾದ ಚಂದ್ರಶೇಖರ ಭಂಡಾರಿಯವರು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ವಿಶ್ವವಾಣಿ ದಿನಪತ್ರಿಕೆಯ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್ ಹೇಳಿದ್ದು: “ಗುರೂಜೀ ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ ವೈಚಾರಿಕ ಸ್ಪಷ್ಟತೆ ನೀಡಿದರು. ಗುರೂಜಿ ಸರಸಂಘಚಾಲಕರಾದ ಬಳಿಕ ಸಂಘವು ಸಾರ್ವಜನಿಕ ವಲಯದಲ್ಲಿ‌ ಹೆಚ್ಚು ಪ್ರಸಿದ್ಧಿ ಪಡೆಯಿತು. ಅವರು ಸಂಘವನ್ನು ಎಲ್ಲಾ ಕಾಲಕ್ಕೂ ಎಲ್ಲಾ ಪೀಳಿಗೆಗೂ ಹೊಂದುವಂತೆ ಪೋಷಿಸಿದರು. ”

ಪೂಜ್ಯ ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿಯವರು ತಮ್ಮ ಆಶೀರ್ವಚನದಲ್ಲಿ ಹೇಳಿದ್ದು-

“ಗುರೂಜಿ ವ್ಯಕ್ತಿತ್ವದಲ್ಲಿ ಅತ್ಯಂತ ಪ್ರಬುದ್ಧರು. ಸಮಸ್ತ ಭಾರತವನ್ನು ಒಂದು ಕುಟುಂಬ ಎಂದವರು ಗುರೂಜಿ. ಅವರ ಮಾರ್ಗದರ್ಶನದಲ್ಲಿ ನಾವು ನಡೆಯಬೇಕು.‌ ಯಾವ ವ್ಯಕ್ತಿ ತನ್ನ ಸಂಸ್ಕಾರವನ್ನು ಉಳಿಸಿಕೊಳ್ಳುತ್ತಾನೋ ಅವನು ರಾಷ್ಟ್ರದ ಸಂಸ್ಕೃತಿಯನ್ನು ಉಳಿಸುತ್ತಾನೆ. ಯಾವ ವ್ಯಕ್ತಿಯ ಜೀವನದ ಉದ್ದೇಶ ಆಕಾಶದೆತ್ತರಕ್ಕೆ ಇರುತ್ತದೋ ಅವನ್ನು ದೇಶ, ಧರ್ಮವನ್ನು ರಕ್ಷಿಸುತ್ತಾನೆ.”

ಗೂರೂಜಿಯವರ ಅಡ್ರೆಸ್ ಯಾವುದು?
ಒಮ್ಮೆ ಗುರೂಜಿಗೆ ಯಾರೋ ಕೇಳಿದರಂತೆ, ನಿಮ್ಮ ವಿಳಾಸ ಯಾವುದೂ ಎಂದು? ಆಗ ನನ್ನ ವಿಳಾಸವೇ ರೈಲ್ವೆ ಬೋಗಿ ಎಂದು ಉತ್ತರಿಸಿದ್ದರಂತೆ. ಸಂಘಟನೆಗಾಗಿ ಗುರೂಜಿಯವರು ದೇಶವನ್ನು 70 ಬಾರಿ ಸುತ್ತಿದ್ದಾರೆ. 1943ರಿಂದ 73ರ ವರೆಗೆ ಎಲ್ಲಾ ಪ್ರಾಂತಗಳಿಗೆ ಪ್ರತಿ ವರ್ಷ ಸಂಚರಿಸುತ್ತಿದ್ದರು. ಅವರ ಜೀವನವನ್ನು ಗಂಗಾ ಹರಿ ಅವರು ಗ್ರಂಥವನ್ನು ರಚಿಸಿದ್ದಾರೆ. ಈಗ ಈ ಪುಸ್ತಕವನ್ನು ಕನ್ನಡಕ್ಕೆ ಚಂದ್ರಶೇಖರ್‌ ಭಂಡಾರಿ ಅನುವಾದಿಸಿ ಸ್ವಯಂಸೇವಕರಿಗೆ ನೀಡಿದ್ದಾರೆ. ಹೊಸ ಕೃತಿಯಿಂದ ಗುರೂಜಿ ಅವರ ವ್ಯಕ್ತಿತ್ವದ ಅನಾವರಣವನ್ನು ನಮ್ಮ ಮುಂದೆ ಬಿಚ್ಚಿಟ್ಟಿದ್ದು, ನಾವು ಎಷ್ಟು ಸಾಧ್ಯವೂ ಅಷ್ಟು ಕಲಿತುಕೊಳ್ಳಬೇಕಾಗಿದೆ ಎಂದು ಸು.ರಾಮಣ್ಣ ವಿವರಿಸಿದರು.

ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಜ್ಯೇಷ್ಠ ಪ್ರಚಾರಕ ಚಂದ್ರಶೇಖರ್ ಭಂಡಾರಿ, ರಾಷ್ಟ್ರೋತ್ಥಾನ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಎಂ. ಪಿ. ಕುಮಾರ್, ಪ್ರಧಾನ ಕಾರ್ಯದರ್ಶಿ ಶ್ರೀ ಎನ್. ದಿನೇಶ್ ಹೆಗ್ಡೆ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ವರಿಷ್ಠರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!