ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಲು ತನಗೆ ಅವಕಾಶ ನೀಡಿದ ಪಕ್ಷಕ್ಕೆ ಇವತ್ತು ಒದಗಿಬಂದಿರುವ ಸ್ಥಿತಿ ಒಂದು ದುರಂತ ಮತ್ತು ನೋವಿನ ಸಂಗತಿ ಎಂದು ಬಿಜೆಪಿ ಹಿರಿಯ ನಾಯಕ ಡಿವಿ ಸದಾನಂದಗೌಡ ಅವರು ಹೇಳಿದ್ದಾರೆ,
ಬಸನಗೌಡ ಪಾಟೀಲ್ ಯತ್ನಾಳ್ ತಂಡದ ವಕ್ಫ್ ಹೋರಾಟಕ್ಕಿಂತ ಪಕ್ಷದ ನಾಯಕರ ನಡುವಿನ ಭಿನ್ನಾಭಿಪ್ರಾಯವೇ ಹೆಚ್ಚು ಗಮನ ಸೆಳೆಯುತ್ತಿದ್ದು, ಇದು ತಪ್ಪು ಎಂದರು.
ಪಕ್ಷದ ಕೋರ್ ಕಮಿಟಿ ಅಧ್ಯಕ್ಷನಾಗಿ ಹೈಕಮಾಂಡ್ ಗೆ ಎರಡು ಬಾರಿ ಪತ್ರ ಬರೆದರೂ ಅವರಿಂದ ಯಾವುದೇ ಕ್ರಮ ಜರುಗಿಲ್ಲ ಎಂದು ತಿಳಿಸಿದ್ದಾರೆ. .