ಹೊಸದಿಗಂತ ವರದಿ ಕಲಬುರಗಿ:
ಮುಖ್ಯಮಂತ್ರಿಗಳು ಮಂಡಿಸಿದ 2024-25 ನೇ ಸಾಲಿನ ಬಜೆಟ್ ನೋಡಿದಾಗ ರಾಜ್ಯ ಸರ್ಕಾರ ಸಂಪೂರ್ಣವಾಗಿ ಆರ್ಥಿಕವಾಗಿ ದಿವಾಳಿಯಾಗಿರುವುದು ಸ್ಪಷ್ಟವಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ ಅಭಿಪ್ರಾಯ ತಿಳಿಸಿದ್ದಾರೆ.
ಕೇವಲ ಗ್ಯಾರಂಟಿ ಯೋಜನೆಗಳಿಗೆ ಹಣಕಾಸು ಹೊಂದಿಸಲು ಸರ್ಕಸ್ ಮಾಡಿತ್ತಿದ್ದು, ಶೈಕ್ಷಣಿಕ ಕ್ಷೇತ್ರಕ್ಕೆ ಕೇವಲ ರೂ 44 ಸಾವಿರ ಕೋಟಿಗಳನ್ನು ಹಣ ಇಟ್ಟಿರುವುದನ್ನು ನೋಡಿದರೆ, ಇದು ಯಾವ ಅಭಿವೃದ್ದಿಗೂ ಸಾಲುವುದಿಲ್ಲ. ಅಧಿಕಾರಕ್ಕೆ ಬರುವ ಮುಂಚೆ ಕಾಂಗ್ರೆಸ್ ಸರಕಾರ ತನ್ನ ಪ್ರಣಾಳಿಕೆಯಲ್ಲಿ ಎಲ್ಲಾ ರಾಜ್ಯ ಸರ್ಕಾರಿ ನೌಕರರಿಗೂ ಅನುದಾನಿತ ನೌಕಕರಿಗೂ ನೂತನ ಪಿಂಚಣಿ ಯೋಜನೆ ರದ್ದಗೊಳಿಸಿ ಹಳೆಯ ಪಿಂಚಣಿ ಯೋಜನೆ ಮಾಡುತ್ತವೆ ಎಂದು ಹೇಳಿತ್ತು, ಆದರೆ ಕೇವಲ ಪ್ರಣಾಳಿಕೆಗೆ ಮಾತ್ರ ಸೀಮಿತವಾಗಿದೆ ಎಂದು ದೂರಿದರು.
ಹಿಂದಿನ ಬಿ.ಜೆ.ಪಿ ರಾಜ್ಯ ಸರ್ಕಾರ ಸರ್ಕಾರಿ ನೌಕಕರ ಗಮನದಲ್ಲಿ ಇಟ್ಟು ಕೊಂಡು 7ನೇ ವೇತನ ಆಯೋಗವನ್ನು ರಚನೆ ಮಾಡಿತ್ತು, ಈ ಸರ್ಕಾರ ಬಂದ ನಂತರ 7ನೇ ವೇತನ ಆಯೋಗದ ವರದಿಯನ್ನು ಗ್ಯಾರಂಟಿ ಯೋಜನೆ ಹಣಕಾಸು ಹೊಂದಿಸಲು ಪುನ: ಪುನ: ಮುಂದೂಡುತ್ತಾ ಬಂತು. ಈಗ ಬಜೆಟನಲ್ಲಿ ಅವರ ನಿರೀಕ್ಷೆಗಳನ್ನು ಹುಸಿಗೊಳಿಸಿ ರಾಜ್ಯ ಸರ್ಕಾರಿ ನೌಕಕರ ಬೆನ್ನಿಗೆ ಚೂರಿ ಹಾಕಿದೆ ಎಂದರು.
ಕಲ್ಯಾಣ ಕರ್ನಾಟಕ ಭಾಗಕ್ಕೆ ನಿರೀಕ್ಷೆಣೆಗಳು ಹುಸಿಯಾಗಿವೆ. ಕಲ್ಯಾಣ ಕರ್ನಾಟಕ ಅಭಿವೃದ್ದಿ ಮಂಡಳಿಗೆ ಈ ಭಾಗದ ಶೈಕ್ಷಣಿಕ ಅಭಿವೃದ್ದಿಗೋಸ್ಕರ ಇನ್ನೂ ಹೆಚ್ಚಿನ ಅನುದಾನ ನೀಡಬೇಕಾಗಿತ್ತು. ಈ ಎಲ್ಲಾ ವಿಷಯಗಳು ಬಜೆಟ ಮರೆಚಿಕೆಯಾಯಿತು ಎಂದ ಅವರು, ಕೇವಲ ಲೋಕಸಭಾ ಚುನಾವಣೆ ಬಜೆಟ್ ಇದಾಗಿದ್ದು, ಇದೊಂದು ಸುಳ್ಳಿನ ಕಂತೆಯ ಗ್ಯಾರಂಟಿಯ ಸರ್ಕಾರ ಎಂದು ಹೇಳಿದರು.
ಕೇವಲ ಕೇಂದ್ರ ಸರ್ಕಾರವನ್ನು ದೋಷಣೆ ಮಾಡುವಲ್ಲಿಯೇ ಕಾಲಹರಣ ಮಾಡುತ್ತ ಮಾನ್ಯ ಪ್ರಧಾನಿಗಳನ್ನು ಟಿಕೀಸುತ್ತಾ ಇರುವುದು ಭ್ರಷ್ಟ ಸರ್ಕಾರ, ಇದು ರೈತ ವಿರೋಧಿ ಬಜೆಟ್, ಯುವಕರಿಗಾಗಿ ಯಾವುದೆ ಕಾರ್ಯಕ್ರಮಗಳು ಘೋಷಣೆ ಮಾಡಿಲ್ಲ, ಒಟ್ಟಾರೆ ಹಣಕಾಸಿನ ನಿರ್ವಹಣೆಯಲ್ಲಿ ವೈಫಲ್ಯವಾಗಿದೆ ಆದ್ದರಿಂದ ಇದೊಂದು ಜನ ವಿರೋಧಿ, ರೈತ ಹಾಗೂ ಉದ್ಯಮ ವಿರೋಧಿ ಬಜೆಟ್ ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.