ಕ್ರೀಡಾ ಅಭಿಮಾನಿಗಳಿಗೆ ನಿರಾಶೆ ಸುದ್ದಿ: ಕಾಮನ್‌ವೆಲ್ತ್ ಗೇಮ್ಸ್​ನಿಂದ ನೀರಜ್ ಚೋಪ್ರಾ ಔಟ್

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ 

ಕಾಮನ್‌ವೆಲ್ತ್ ಗೇಮ್ಸ್​ನಿಂದ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಹೊರಬಿದ್ದಿದ್ದಾರೆ.

ಗಾಯದ ಸಮಸ್ಯೆಗೆ ಒಳಗಾದ ನೀರಜ್​ ಬರ್ಮಿಂಗ್​ಹ್ಯಾಮ್​ನಲ್ಲಿ ನಡೆಯುವ ಕ್ರೀಡಾಕೂಟವನ್ನು ತಪ್ಪಿಸಿಕೊಳ್ಳಲಿದ್ದಾರೆ.
ಈ ಬಗ್ಗೆ ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ ಮಾಹಿತಿ ನೀಡಿದ್ದು, ಹಾಲಿ ಒಲಿಂಪಿಕ್ ಚಾಂಪಿಯನ್‌ ಗಾಯಗೊಂಡಿದ್ದಾರೆ. ಹೀಗಾಗಿ ಅವರಿಗೆ ಒಂದು ತಿಂಗಳ ಕಾಲ ವಿಶ್ರಾಂತಿ ಬೇಕಾಗಿದೆ. ಹೀಗಾಗಿ ಕಾಮನ್‌ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾಗವಹಿಸುವುದಿಲ್ಲ ಎಂದು ತಿಳಿಸಿದರು.

2 ದಿನಗಳ ಹಿಂದಷ್ಟೇ ಮುಗಿದ ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ನೀರಜ್​ ಚೋಪ್ರಾ ಅವರು ಗಾಯಗೊಂಡ ಬಗ್ಗೆ ಮಾಹಿತಿ ನೀಡಿದರು. ಫೈನಲ್​ಗೂ ಮುನ್ನ ಅವರು ಗಾಯಕ್ಕೀಡಾಗಿದ್ದರು ಎಂದು ರಾಜೀವ್ ಮೆಹ್ತಾ ಹೇಳಿದರು.

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಫೈನಲ್​ನಲ್ಲಿ ನೀರಜ್​ ಚೋಪ್ರಾ 88.13 ಮೀ ಭರ್ಜಿ ಎಸೆಯುವ ಮೂಲಕ ಎರಡನೇ ಸ್ಥಾನ ಪಡೆದು ಐತಿಹಾಸಿಕ ಬೆಳ್ಳಿ ಜಯಿಸಿದ್ದರು.

ಚೋಪ್ರಾ ಅವರು ಸೋಮವಾರ ಎಂಆರ್​ಐ ಸ್ಕ್ಯಾನ್​ಗೆ ಒಳಗಾಗಿದ್ದಾರೆ. ಅದರ ಆಧಾರದ ಮೇಲೆ ವೈದ್ಯಕೀಯ ತಂಡ ಅವರಿಗೆ ಒಂದು ತಿಂಗಳ ವಿಶ್ರಾಂತಿಗೆ ಸಲಹೆ ನೀಡಿದೆ. ಬರ್ಮಿಂಗ್​ಹ್ಯಾಮ್​ನಲ್ಲಿ ಕಾಮನ್​ ವೆಲ್ತ್​ ಗೇಮ್ಸ್-2022 ಜುಲೈ 28 ರಿಂದ ಆಗಸ್ಟ್ 8 ರವರೆಗೆ ನಡೆಯಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!