ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೈಸೂರು ಟ್ರಿಪ್ ಹೊರಟಿದ್ದೀರಾ? ಈ ಬಾರಿ ಎಲ್ಲ ಸ್ಥಳಗಳನ್ನು ನೋಡಬಹುದು ಆದರೆ ಚಿನ್ನದ ಅಂಬಾರಿಯನ್ನು ಮಾತ್ರ ನೋಡಲು ಆಗೋದಿಲ್ಲ ಯಾಕೆ ಗೊತ್ತಾ?
ಮೈಸೂರು ಅರಮನೆಯಲ್ಲಿ ಮೊದಲು ಗಮನ ಸೆಳೆಯುವುದು ಚಿನ್ನದ ಅಂಬಾರಿ. ಆದರೆ, ಅಂಬಾರಿ ವೀಕ್ಷಣೆಗೆ ನಿರ್ಬಂಧ ಹೇರಿದ್ದು ಪ್ರವಾಸಿಗರಲ್ಲಿ ನಿರಾಸೆ ಉಂಟು ಮಾಡಿದೆ. ಅಂಬಾರಿ ಕೆಳಗೆ ಹಾಗೂ ಹಿಂಭಾಗ ಮರದ ಕೆಲಸ, ಸೇರಿದಂತೆ ವಿವಿಧ ರಿಪೇರಿ ಕೆಲಸ ಇರವುದರಿಂದ ವೀಕ್ಷಣೆಗೆ ಬ್ರೇಕ್ ಹಾಕಲಾಗಿದೆ. ಈ ಹಿನ್ನೆಲೆಯಲ್ಲಿ ಚಿನ್ನದ ಅಂಬಾರಿ ವೀಕ್ಷಣೆಗೆ ಅವಕಾಶವಿಲ್ಲ.