ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಪತ್ತೆಯಾಗಿದ್ದ ನೇಪಾಳದ ವಿಮಾನ ಸುಮಾರು ಆರು ಗಂಟೆಗಳ ಬಳಿಕ ಪತ್ತೆಯಾಗಿದೆ.
ನಾಲ್ವರು ಭಾರತೀಯರು ಸೇರಿದಂತೆ 22 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ತಾರಾ ಏರ್ 9-ಎನ್ಎಇಟಿ ವಿಮಾನವು ಇಂದು ಬೆಳಗ್ಗೆ 9:55ಕ್ಕೆ ಪೋಖರಾದಿಂದ ಜೋಮ್‌ಸಮ್‌ಗೆ ಟೇಕ್ ಆಫ್ ಆದ ಬಳಿಕ ಸಂಪರ್ಕ ಕಳೆದುಕೊಂಡಿತ್ತು.
ಇದೀಗ ಪತನಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಾರಾ ಏರ್ ವಿಮಾನವು ಬೆಳಿಗ್ಗೆ 9.55 ಕ್ಕೆ ಪೋಖರಾದಿಂದ ಟೇಕಾಫ್ ಆಗಿದ್ದು, 15 ನಿಮಿಷಗಳ ನಂತರ ನಿಯಂತ್ರಣ ಗೋಪುರದೊಂದಿಗಿನ ಸಂಪರ್ಕವನ್ನು ಕಳೆದುಕೊಂಡಿದೆ ಎಂದು ವಿಮಾನಯಾನ ವಕ್ತಾರರು ತಿಳಿಸಿದ್ದಾರೆ. ನಂತರ ವಿಮಾನವು ಕೋವಾಂಗ್ ಗ್ರಾಮದಲ್ಲಿ ಪತ್ತೆಯಾಗಿದೆ.
‘ನಾವು ನೇಪಾಳ ಸೇನೆ ಮತ್ತು ನೇಪಾಳ ಪೊಲೀಸ್ ಸಿಬ್ಬಂದಿಯನ್ನು ಹುಡುಕಾಟಕ್ಕಾಗಿ ಕಾಲ್ನಡಿಗೆಯಲ್ಲಿ ಕಳುಹಿಸಿದ್ದೇವೆ’ ಎಂದು ತ್ರಿಭುವನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಜನರಲ್ ಮ್ಯಾನೇಜರ್ ಪ್ರೇಮನಾಥ್ ಠಾಕೂರ್ ಹೇಳಿದರು.