February 16, 2026
Monday, February 16, 2026
spot_img

ಪಾಕಿಸ್ತಾನಕ್ಕೆ ತಲೆನೋವು ತಂದ ಹಿರಿಯ ಆಟಗಾರರ ನೀರಸ ಪ್ರದರ್ಶನ: ಮುಂದಿನ ಪಂದ್ಯದಿಂದ ಬಾಬರ್‌, ಅಫ್ರಿದಿಗೆ ಗೇಟ್‌ ಪಾಸ್‌?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಟಿ20 ವಿಶ್ವಕಪ್‌ನಲ್ಲಿ ಹಿರಿಯ ಆಟಗಾರರ ನೀರಸ ಪ್ರದರ್ಶನದಿಂದ ಅಸಮಾಧಾನಗೊಂಡಿರುವ ಪಾಕಿಸ್ತಾನ ಕ್ರಿಕೆಟ್ ತಂಡವು ನಮೀಬಿಯಾ ವಿರುದ್ಧ ಬುಧವಾರ ನಡೆಯಲಿರುವ ಪಂದ್ಯಕ್ಕೆ ಮಾಜಿ ನಾಯಕರಾದ ಬಾಬರ್ ಅಜಮ್ ಮತ್ತು ಶಾಹೀನ್ ಅಫ್ರಿದಿ ಅವರನ್ನು ಕೈಬಿಡುವ ಲಕ್ಷಣಗೋಚರಿಸುತ್ತಿದೆ.

ಭಾನುವಾರ ಭಾರತ ವಿರುದ್ಧ ನಡೆದ್ದ ಪಂದ್ಯದಲ್ಲಿ ಪಾಕಿಸ್ತಾನ ತಂಡ 61 ರನ್‌ಗಳ ಸೋಲು ಕಂಡಿತ್ತು. ಪಾಕಿಸ್ತಾನ ತಂಡ ಸೂಪರ್‌-8 ಹಂತಕ್ಕೆ ಪ್ರವೇಶಿಸಬೇಕಿದ್ದರೆ ನಮೀಬಿಯಾ ವಿರುದ್ಧ ಗೆಲ್ಲಲೇ ಬೇಕು. ಹೀಗಾಗಿ ಕಳಪೆ ಪ್ರದರ್ಶನ ತೋರುತ್ತಿರುವ ಅಜಂ ಮತ್ತು ಅಫ್ರೀದಿ ಅವರನ್ನು ತಂಡದಿಂದ ಕೈಬಿಡುವ ಚಿಂತನೆ ನಡೆದಿದೆ.

ಪಾಕ್‌ ಮಾಜಿ ಆಟಗಾರರು ಮತ್ತು ಅಭಿಮಾನಿಗಳು ಈಗಾಗಲೇ ಕ್ರಿಕೆಟ್‌ ಮಂಡಳಿ ವಿರುದ್ಧ ಟೀಕೆಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಬಾಬರ್ ಅಜಂ ಭಾರತ ವಿರುದ್ಧದ ಪಂದ್ಯದಲ್ಲಿ ನಾಲ್ಕನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಲು ಬಂದು ಏಳು ಎಸೆತಗಳಲ್ಲಿ ಕೇವಲ ಐದು ರನ್ ಗಳಿಸಿದರು. ಬೌಲಿಂಗ್‌ನಲ್ಲಿ ಅಫ್ರೀದಿ ಯಾವುದೇ ಕಮಾಲ್‌ ಮಾಡಲಿಲ್ಲ. ತಮ್ಮ ಎರಡು ಓವರ್‌ಗಳಲ್ಲಿ 15.50 ಎಕಾನಮಿ ದರದಲ್ಲಿ 31 ರನ್‌ಗಳನ್ನು ಬಿಟ್ಟುಕೊಟ್ಟು ಅತ್ಯಂತ ದುಬಾರಿಯಾದರು.

ಪಾಕಿಸ್ತಾನವು ಬಾಬರ್ ಮತ್ತು ಶಾಹೀನ್ ಅವರನ್ನು ಕೈಬಿಟ್ಟರೆ, ತಂಡ ಫಖಾರ್ ಜಮಾನ್ ಮತ್ತು ವೇಗಿ ನಸೀಮ್ ಶಾ ಅವರನ್ನು ಆಯ್ಕೆ ಮಾಡಿಕೊಳ್ಳಬಹುದು. ನಮೀಬಿಯಾ ವಿರುದ್ಧದ ಪಂದ್ಯವು ಪಾಕ್‌ಗೆ ನಿರ್ಣಾಯಕ ಪಂದ್ಯವಾಗಿದೆ. ಸೋತರೆ ತಂಡ ಲೀಗ್‌ ಹಂತದಲ್ಲೇ ಹೊರಬೇಳಲಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !