ಲೋಕಸಭೆಯಲ್ಲಿ ಮೋದಿ ಮಾತಿಗೆ ಅಡ್ಡಿ: ವಿಪಕ್ಷಗಳ ವಿರುದ್ಧ ಗುಡುಗಿದ ಸ್ಪೀಕರ್ ಓಂ ಬಿರ್ಲಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣ ವಂದನಾ ನಿರ್ಣಯ ಮೇಲೆ ಭಾಷಣ ಮಾಡುತ್ತಿದ್ದು, ವಿಪಕ್ಷಗಳು ತೀವ್ರ ಅಡ್ಡಿಪಡಿಸಿದೆ. ವಿಪಕ್ಷಗಳ ಗದ್ದಲ ತೀವ್ರಗೊಳ್ಳುತ್ತಿದ್ದಂತೆ ಸ್ಪೀಕರ್ ಓಂ ಬಿರ್ಲಾ ಕೆರಳಿದ್ದಾರೆ. ವಿಪಕ್ಷಗಳ ನಾಯಕರನ್ನು ತರಾಟೆಗೆ ತೆಗೆದುಕೊಂಡು ಮೋದಿಗೆ ಮಾತನಾಡಲು ಅವಕಾಶ ಮಾಡಿಕೊಟ್ಟಿದ್ದಾರೆ.

ರಾಷ್ಟ್ರಪತಿಗಳ ಭಾಷಣ ಮೇಲೆ ವಂದನಾ ನಿರ್ಣಯ ಮಾತು ಆರಂಭಿಸಿದ ಪ್ರಧಾನಿ ಮೋದಿಗೆ ವಿಪಕ್ಷಗಳು ಭಾರಿ ಅಡ್ಡಿ ಮಾಡಿತು. ಕೆಲ ಸದಸ್ಯರು ರಾಷ್ಟ್ರಪತಿ ಭಾಷಣದ ಮೇಲೆ ವಿಚಾರ, ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ವೇಳೆ ಮೊದಲ ಬಾರಿಗೆ ಸಂಸದರಾಗಿ ಆಗಮಿಸಿರುವ ಸದಸ್ಯರು, ಎಲ್ಲಾ ನಿಯಮಗಳನ್ನು ಪಾಲನೆ ಮಾಡುತ್ತಾ ಸದನದ ಗೌರವ ಹೆಚ್ಚಿಸಿದ್ದಾರೆ.

ವಿಶ್ವದ ಅತೀ ದೊಡ್ಡ ಚುನಾವಣೆಯಲ್ಲಿ ಜನತೆ ನಮ್ಮನ್ನು ಗೆಲ್ಲಿಸಿದ್ದಾರೆ. ನಾನು ಕೆಲ ಸದಸ್ಯರ ಪರಿಸ್ಥಿತಿ ಅರ್ಥಮಾಡಿಕೊಳ್ಳಬಲ್ಲೆ. ಸುಳ್ಳನ್ನೇ ಮುಂದಿಟ್ಟುಕೊಂಡು ಜನರ ಬಳಿ ತೆರಳಿದ ನಾಯಕರಿಗೆ ತಕ್ಕ ಉತ್ತರ ಸಿಕ್ಕಿದೆ ಎಂದು ಮೋದಿ ಹೇಳಿದ್ದಾರೆ.

ಈ ವೇಳೆ ವಿಪಕ್ಷಗಳ ಗದ್ದಲ ಅತಿಯಾಗಿದೆ ಕೆರಳಿದ ಲೋಕಸಭಾ ಸ್ಪೀಕರ್ ಓಂ ಬಿರ್ಲಾ, ಮಧ್ಯಪ್ರವೇಶಿಸಿ ವಿಪಕ್ಷಗಳ ನಾಯಕರನ್ನು ತರಾಟಗೆ ತೆಗೆದುಕೊಂಡಿದ್ದಾರೆ. ಒಬ್ಬರು ಮಾತನಾಡುತ್ತಿರುವಾಗ ಗದ್ದಲ ಸೃಷ್ಟಿಸಿ ಸದನದ ಗೌರವ ಕಳೆಯಬೇಡಿ ಎಂದು ಎಚ್ಚರಿಸಿದ್ದಾರೆ.

ಮಾತು ಮುಂದುರಿಸಿದ ಮೋದಿ, ನಮಗೆ ಈ ದೇಶದ ಜನತೆ ಜನಾದೇಶ ನೀಡಿದ್ದಾರೆ. ಕಳೆದ 10 ವರ್ಷದ ನಮ್ಮ ಆಡಳಿತ ನೋಡಿದ ಜನ, ಬಡವರ ಕಲ್ಯಾಣಕ್ಕಾಗಿ ನಾವು ಮಾಡಿದ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ನೋಡಿದ್ದಾರೆ. 2014ರಲ್ಲಿ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಾಗ, ಭ್ರಷ್ಟಾಚಾರ ಕುರಿತು ನಾವು ಶೂನ್ಯ ಸಹಷ್ಣುತೆ ಹೊಂದಿದ್ದೇವೆ ಎಂದಿದ್ದೇವೆ. ಕಳೆದ 10 ವರ್ಷದಲ್ಲಿ ನಾವು ಭ್ರಷ್ಟಾಚಾರ ವಿರುದ್ದ ಹೋರಾಡಿದ್ದೇವೆ. ಪಾರದರ್ಶಿಕ ಆಡಳಿತ ನೀಡಿದ್ದೇವೆ ಎಂದು ಮೋದಿ ಹೇಳಿದ್ದಾರೆ.

ದೇಶ ಮೊದಲು, ಇದು ನಮ್ಮ ಮೂಲ ಮಂತ್ರವಾಗಿದೆ.ಕಳೆದ 10 ವರ್ಷ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಮಂತ್ರದೊಂದಿಗೆ ಎಲ್ಲರ ಅಭಿವೃದ್ಧಿಗೆ ಶ್ರಮಿಸಿದ್ದೇವೆ. ಈ ದೇಶ ತುಷ್ಠಿಕರಣದ ಆಡಳಿತ ನೋಡಿದೆ. ನಾವು ತುಷ್ಠೀಕರಣ ಆಡಳಿತ ಮಾಡಿಲ್ಲ, ಜನರ ಸಂತುಷ್ಠಿಕರಣ ಆಡಳಿತ ನೀಡಿದ್ದೇವೆ ಎಂದು ಮೋದಿ ಹೇಳಿದ್ದಾರೆ.

ಕಳೆದ ಹಲವು ದಶಕಗಳಿಂದ ತುಷ್ಟೀಕರಣದ ರಾಜಕೀಯವು ಮನೆ ಮಾಡಿತ್ತು. ಇದರಿಂದ ಸರ್ವರ ಏಳಿಗೆಯು ಸಾಧ್ಯವಾಗಿಲ್ಲ. ಆದರೆ, ನಾವು 10 ವರ್ಷದಿಂದ ತುಷ್ಟೀಕರಣದ ರಾಜಕೀಯ ಮಾಡುವ ಬದಲು, ಜನರ ಸಂತುಷ್ಟೀಕರಣದ ಆಡಳಿತ ನೀಡಿದೆವು. ವಿಕಸಿತ ಭಾರತ ನಿರ್ಮಾಣದ ಗುರಿಯೊಂದಿಗೆ ನಾವು ಆಡಳಿತ ನೀಡಿದ ಕಾರಣ, ವಿಕಸಿತ ಭಾರತದ ಕನಸು ನನಸು ಮಾಡಲು ದೇಶದ ಜನರು ನಮಗೆ ಅವಕಾಶ ನೀಡಿದ್ದಾರೆ. ಭಾರತವು ವಿಕಸಿತವಾದರೆ ಕೋಟಿ ಕೋಟಿ ಜನರ ಆಶೋತ್ತರಗಳು ಈಡೇರಲಿವೆ, ಹೊಸ ಪೀಳಿಗೆಯ ಕನಸುಗಳು ಸಾಕಾರವಾಗಲಿವೆ, ಜಗತ್ತಿನಲ್ಲಿ ದೇಶದ ಘನತೆ, ಸಾಮರ್ಥ್ಯ ಹೆಚ್ಚಾಗಲಿದೆ ಎಂಬುದಾಗಿ ಹೇಳಿದರು.

ಕಳೆದ 10 ವರ್ಷಗಳ ಉತ್ತಮ ಆಡಳಿತವನ್ನು ನೋಡಿ ದೇಶದ ಜನ ನಮಗೆ ಮತಗಳನ್ನು ನೀಡಿ ಗೆಲ್ಲಿಸಿದ್ದಾರೆ. ದೇಶದ ಕೋಟ್ಯಂತರ ಜನರನ್ನು ಬಡತನದಿಂದ ಹೊರಗೆ ತಂದಿದ್ದು ಸೇರಿ ಹಲವು ಉತ್ತಮ ಕೆಲಸಗಳು ನಮ್ಮ ಗೆಲುವಿಗೆ ಕಾರಣವಾಗಿವೆ. 2014ರಲ್ಲಿ ನಾವು ಒಂದು ವಿಷಯ ಹೇಳಿದ್ದೆವು. ಭ್ರಷ್ಟಾಚಾರದ ವಿರುದ್ಧ ನಾವು ಶೂನ್ಯ ಸಹಿಷ್ಣುಗಳಾಗಿರುತ್ತೇವೆ ಎಂದಿದ್ದೇವೆ. ಕಳೆದ 10 ವರ್ಷಗಳಲ್ಲಿ ನಾವು ಭ್ರಷ್ಟಾಚಾರದ ವಿರುದ್ಧ ಹೋರಾಡಿದೆವು. ಶೂನ್ಯ ಸಹಿಷ್ಣುತೆಯನ್ನು ತೋರಿಸಿದ ಕಾರಣಕ್ಕಾಗಿ ಜನ ಬೆಂಬಲ ನೀಡಿದ್ದಾರೆ ಎಂದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!