ಹೊಸ ದಿಗಂತ ವರದಿ, ಕಲಬುರಗಿ:
ಕೇಂದ್ರ ಸರ್ಕಾರದ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸಿಥರಾಮನ್,ರವರು ಮಂಡಿಸಿದ ಕೇಂದ್ರ ಬಜೆಟ್ ಸಾಮಾನ್ಯ ಜನರಿಗೆ ಹೊರೆ ಇಲ್ಲದ ಜನಪರ ಬಜೆಟ್ ಆಗಿದೆ ಎಂದು ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ ಹರ್ಷ ವ್ಯಕ್ತಪಡಿಸಿದ್ದಾರೆ.
ದೇಶಾದ್ಯಂತ 1.5 ಲಕ್ಷ ಪೋಸ್ಟ ಆಫೀಸ್‍ಗಳನ್ನು ಬ್ಯಾಂಕ್ ಸ್ವರೂಪಕ್ಕೆ ಬದಲಾವಣೆ, ಎಟಿಎಂ, ಡಿಜಿಟಲ್ ಸೇವೆಗಳು ಎಂಬ ವಿನೂತನ ಯೋಜನೆಯ ಘೋಷಣೆ, ಒನ್ ನೇಷನ್ ಒನ್ ರಜಿಷ್ಟ್ರೇಶನ್, ಗುತ್ತಿಗೆದಾರರಿಗೆ ಬಿಲ್ ಮಂಡಿಸಿದ 10 ದಿನಗಳಲ್ಲಿ ಶೇ 75%ರಷ್ಟು ಮೊತ್ತ ಪಾವತಿ, ಎರಡು ಲಕ್ಷ ಅಂಗನವಾಡಿಗಳನ್ನು ಉನ್ನತಿಕರಣ, ಎರಡು ವರ್ಷದಲ್ಲಿ ನದಿಗಳ ಜೋಡಣೆ, ಸರ್ಕಾರಿ ಮಕ್ಕಳಿಗೆ ಒನ್‍ಕ್ಲಾಸ್ ಒನ್ ಟಿ.ವಿ ಕಾರ್ಯಕ್ರಮ ಯೋಜನೆ, ರಕ್ಷಣಾ ಸಾಮಾಗ್ರಿಯ ಖರೀದಿಗೆ ಶೇ 68% ಸ್ಥಳೀಯ ಖರೀದಿ ಕಡ್ಡಾಯ ನೀಡುವ ಯೋಜನೆ ನೀಡುತ್ತಿರುವುದು ಒಳ್ಳೆಯ ನಿಧಾರವಾಗಿದೆ ಎಂದರು.
2022 5 ಜಿ ತರಂಗಾಂತರ ಹರಾಜು ಸೋಲಾರ್ ಯೋಜನೆ ಪೋತ್ಸಾಹ ಧನಸಹಾಯ, 8 ಭಾಷಣಗಳಲ್ಲಿ ಜಮೀನು ದಾಖಲೆಗಳ ಡಿಜಿಟಲ್ ಮಾಡುವುದು, ರಕ್ಷಾಣಾ ಬಜೆಟ್ ಶೇ 25% ಸಂಶೋಧನೆಗೆ ಮೀಸಲು, ಪ್ರತಿಯೊಂದು ಗ್ರಾಮಕ್ಕೂ ಅಪ್ಟಿಕಲ್ ಫೈಬರ ಮೂಲಕ ಇಂಟರನೇಟ್ ಸೇವೆ ಒದಗಿಸುವುದು, ಎಸ್.ಎಸಿ/ಎಸ್.ಟಿ ರೈತರಿಗೆ ಆರ್ಥಿಕ ನೇರವು, ರಾಜ್ಯ ಸರ್ಕಾರಗಳಿಗೆ ಬಡ್ಡಿರಹಿತ ಸಾಲ ರೂ 1.ಲಕ್ಷಕೋಟಿ, ಸಹಕಾರ ಸಂಘಗಳ ಮೇಲೆ ಶೇ 18% ರಿಂದ ಶೇ15% ಇಳಿಕೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಿ ನೌಕರರಿಗೆ ಏಕರೂಪದ, ಸ್ಪಾರ್ಟ ಆಪಗಳಿಗೆ ತೆರಿಗೆ ವಿನಾಯಿತಿ, ಪಿಎಂ ಆವಾಸ ಯೋಜನೆಗೆ 48 ಸಾವಿರ ಕೋಟಿ ಇಟ್ಟಿದ್ದು ದೇಶದ ಅಭಿವೃದ್ಧಿಗೆ ಪುರಕವಾಗಿದೆ ಎಂದರು.
ಒಟ್ಟಾರೆಯಾಗಿ ಕೇಂದ್ರ ಬಜೆಟ್‍ನಲ್ಲಿ ಹಲವಾರು ಜನಪರ ಯೋಜನೆಗಳನ್ನು ಪ್ರಕಟಿಸಿದ ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್, ಸನ್ಮಾನ್ಯ ಪ್ರಧಾನ ಮಂತ್ರಿಗಳಾದ ಮಾನ್ಯ ನರೇಂದ್ರ ಮೋದಿಜಿ ಯವರಿಗೂ ಹಾಗೂ ಕೇಂದ್ರ ಸರ್ಕಾರಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆಂದು ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.