ಹೊಸದಿಗಂತ ವರದಿ ಹುಬ್ಬಳ್ಳಿ:
ಸಾಮಾಜಿಕ ಸೇವೆಯಲ್ಲಿ ನಿರಂತರವಾಗಿ ತೊಡಗಿರುವ ನಗರದ ಮಜೇಥಿಯಾ ಫೌಂಡೇಶನ್ ವತಿಯಿಂದ ವೈದ್ಯಕೀಯ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್, ದಿವ್ಯಾಂಗರಿಗೆ ಗಾಲಿ ಕುರ್ಚಿ ವಿತರಿಸಲಾಯಿತು. ಶಾಸಕ ಮಹೇಶ ಟೆಂಗಿನಕಾಯಿ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಬಡ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಹಾಗೂ ದಿವ್ಯಾಂಗರಿಗೆ ಗಾಲಿ ಕುರ್ಚಿ ವಿತರಿಸಿದರು.
ಬಳಿಕ ಮಾತನಾಡಿದ ಅವರು, ಒಬ್ಬ ವ್ಯಕ್ತಿ ತನ್ನ ಕಾಯಕದಲ್ಲಿ ಉನ್ನತ ಶಿಖರ ಏರಿ ಶ್ರೀಮಂತನಾದಾಗ ಇನ್ನೊಬ್ಬರ ಕುರಿತು ಚಿಂತನೆ, ಸಹಾಯ, ಸಹಕಾರ ಕಲ್ಪಿಸಿ ಕೊಡುವ ಶ್ಲಾಘನೀಯ ಕಾರ್ಯದಲ್ಲಿ ತೊಡಗುತ್ತಾರೆ. ಇಂತಹ ಸಾಮಾಜಿಕ ಕಾರ್ಯದಲ್ಲಿ ಜೀತೆಂದ್ರ ಮಜೇಥಿಯಾ ಅವರು ಮುಂಚೂಣಿಯಲ್ಲಿ ಇದ್ದಾರೆ. ಶ್ರೀಯುತರು ಯಾವುದೇ ವ್ಯಕ್ತಿ ತೊಂದರೆಗೊಳಗಾಗಿದ್ದಲ್ಲಿ ಅವರಿಗೆ ಸಹಾಯ ಮಾಡುವುದು ಇವರ ದೊಡ್ಡ ಗುಣವಾಗಿದೆ ಎಂದು ತಿಳಿಸಿದರು.
ಜಿತೇಂದ್ರ ಮಜೇಥಿಯ ಅವರು, ಕಷ್ಟಗಳಿಗೆ ಸ್ಪಂದಿಸುವ, ಮಾನವೀಯ ಸೇವೆಗಳು, ಬಡವರನ್ನು ಕೈಹಿಡಿದು ನಡೆಸುವ ಕಾರ್ಯವನ್ನು ನಾವೆಲ್ಲರೂ ಅಳಡಿಸಿಕೊಳ್ಳುವುದು ಪ್ರಸ್ತುತ ದಿನಕ್ಕೆ ಅತೀ ಅವಶ್ಯವಾಗಿದೆ ಎಂದರು. ಬಡ ವಿದ್ಯಾರ್ಥಿಗಳಿಗೆ, ವಿಶೇಷ ಚೇತನರಿಗೆ, ದಿವ್ಯಾಂಗದವರಿಗೆ ಸದಾ ಸಹಾಯ ಹಸ್ತ ಕಲ್ಪಿಸಿ ಕೊಡುತ್ತಿರುವುದು ಮಜೇಥಿಯ ಫೌಂಡೇಶನ್ ಬಳಗದವರ ಸೇವೆ ನಿಜಕ್ಕೂ ಶ್ಲಾಘೀಯವಾಗಿದೆ ಎಂದು ನುಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಮಜೇಥಿಯಾ ಫೌಂಡೇಶನ ನ ನಿರ್ದೇಶಕರಾದ ಕಶ್ಯಪ್ ಮಜೇಥಿಯಾ ಮಾತನಾಡಿದರು. ಫೌಂಡೇಶನ್ ವತಿಯವರಾದ ಶ್ರೀಧರ ಜೋಶಿ, ಎಚ್.ಆರ್. ಪ್ರಹ್ಲಾದರಾವ್ ಕಾರ್ಯದರ್ಶಿ ಅಮರೇಶ್ ಹಿಪ್ಪರಗಿ ಅಮೃತಬಾಯಿ ಪಟೇಲ್ , ದಯಾ ಪಟೇಲ್, ರೇಷ್ಮಾ ತಡಕೋಡ, ಸುಭಾಷಸಿಂಗ ಜಮಾದಾರ, ರೀತು ಬೆಟಗೇರಿ, ಮಂಜುನಾಥ ಭಟ್, ಶ್ವೇತಾ ಜೈನ್ ಇದ್ದರು. ಮೋಹನ ಬಾಳೆಹೋಸುರ ಲ್ಯಾಪ್ ಟಾಪ್ ಗಾಲಿ ಕುರ್ಚಿಯ ಬಳಕೆ ವಿಧಾನ ತಿಳಿಸಿದರು.