ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಪಚುನಾವಣೆಯಲ್ಲಿ ಗೆದ್ದ ಖುಷಿಯಲ್ಲಿ ಬಳ್ಳಾರಿ ಜಿಲ್ಲೆಯ ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಅಭಿನಂದನಾ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಸಮಾರಂಭಕ್ಕೆ ಬಂದಿರುವ ಜನರಿಗೆ ಕಾಂಗ್ರೆಸ್ ಮುಖಂಡರು 200 ರೂಪಾಯಿ ಹಂಚಿರುವ ಆರೋಪ ಇದೀಗ ಕೇಳಿಬರುತ್ತಿದೆ.
ಬಳ್ಳಾರಿ ಜಿಲ್ಲೆಯ ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅನ್ನಪೂರ್ಣ ಇ ತುಕಾರಾಂ ಅವರು, ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತು ಅವರ ವಿರುದ್ಧ ಭಾರಿ ಜಯ ಗಳಿಸಿದ್ದರು. ಈ ಹಿನ್ನೆಲೆಯಲ್ಲಿ ಇಂದು ಸಂಡೂರಿನಲ್ಲಿ ಕಾಂಗ್ರೆಸ್ ಪಕ್ಷದಿಂದ ಅಭಿನಂದನಾ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಸಮಾವೇಶಕ್ಕೆ ಬಂದಿದ್ದವರಿಗೆ ಕಾಂಗ್ರೆಸ್ ಮುಖಂಡರು 200 ರೂಪಾಯಿ ಹಂಚಿದ ಆರೋಪ ಕೇಳಿಬಂದಿದೆ.
ಸಂಡೂರಿನ ಅಭಿನಂದನಾ ಸಮಾವೇಶದ ವೇದಿಕೆ ಎಡಭಾಗದಲ್ಲಿ ಸಮಾವೇಶಕ್ಕೆ ಬಂದಿದ್ದವರಿಗೆ ಹಣ ಹಂಚಿಕೆ ಮಾಡಲಾಗಿದೆ. ವೇದಿಕೆಯಿಂದ ಸಿಎಂ ಸಿದ್ದರಾಮಯ್ಯ ಅವರು ನಿರ್ಗಮಿಸುತ್ತಿದ್ದಂತೆ ಹಣ ಹಂಚಿದ್ದಾರೆ.