ಹೊಸದಿಗಂತ ಶಿವಮೊಗ್ಗ:
ನಗರದ ಫ್ರೀಡಂ ಪಾರ್ಕ್ (ಅಲ್ಲಮಪ್ರಭು ಮೈದಾನ)ನಲ್ಲಿ ಶುಕ್ರವಾರ ವೈವಿಧ್ಯಮಯ ಕರಕುಶಲ ಮತ್ತು ಫಲಪುಷ್ಪಗಳ ಜಗತ್ತು ಅನಾವರಣಗೊಂಡಿದೆ.
ಮೇಳದ ಮುಂಭಾಗ ಐ ಲವ್ ಶಿವಮೊಗ್ಗ ಎಂಬ ಸೆಲ್ಫೀ ಪಾಯಿಂಟ್ ನಿರ್ಮಿಸಲಾಗಿದೆ. ನಂತರ ಜಿಲ್ಲೆಯ ಪ್ರಸಿದ್ಧ
ಚಂದ್ರಗುತ್ತಿ ದೇವಾಲಯ ಹಾಗೂ ರಾಷ್ಟ್ರಕವಿ ಕುವೆಂಪು ಅವರ ಕವಿಶೈಲದ ಮನೆಯನ್ನು ಹೂವುಗಳಿಂದಲೇ ನಿರ್ಮಿಸಲಾಗಿದೆ. ಮತ್ತೊಂದೆಡೆ ವಿವಿಧ ಹೂಗಳನ್ನು ಬಳಸಿ ನವಿಲಿನ ಆಕೃತಿ ರಚಿಸಲಾಗಿದೆ.
ಪ್ರದರ್ಶನ ಮೇಳಕ್ಕೆ ಶುಕ್ರವಾರ ಬೆಳಿಗ್ಗೆ ಚಾಲನೆ ಸಿಗುವ ವೇಳೆಗಾಗಲೇ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು. ಕಲಾಕೃತಿಗಳ ಮುಂದೆ ಜನರು, ವಿದ್ಯಾರ್ಥಿಗಳು, ವಿಶೇಷವಾಗಿ ಮಹಿಳೆಯರು ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.
ಉತ್ಸವದಲ್ಲಿ ರೈತರು ಬೆಳೆದ ವಿವಿಧ ಫ ಲ-ಪುಷ್ಪಗಳನ್ನು ಪ್ರದರ್ಶನಕ್ಕೆ ಇರಿಸಲಾಗಿದೆ. ದೇಶ-ವಿದೇಶದ ಹಣ್ಣುಗಳು, ಗಾತ್ರದಲ್ಲಿ ಹಿರಿದಾದ ಲಗಳನ್ನು ಇಲ್ಲಿ ಕಾಣಬಹುದಾಗಿದೆ.
ಮೇಳದಲ್ಲಿ ಮಲೆನಾಡ ಕರಕುಶಲತೆ, ಸಹ್ಯಾದ್ರಿ ಕರಕುಶಲತೆ, ಬಂಜಾರ ಲಂಬಾಣಿ ಉಡುಪು, ಕಲ್ಲಿನ ಆ‘ರಣಗಳು, ಮಲೆನಾಡು ಸವಿರುಚಿ ತಿನಿಸು, ಅಕ್ಕ ಕೆೆಫೆ, ಮ್ಯೂರಲ್ ಕಲಾ ಚಿತ್ರಗಳು, ಹಸೆ ಚಿತ್ತಾರೆ, ಮಣ್ಣಿನ ಅಲಂಕಾರಿಕ ಮಳಿಗೆ, ಸ್ವದೇಶಿ, ಕೌದಿ, ಈಚಲು ಚಾಪೆ, ಮರದ ಉತ್ಪನ್ನಗಳು, ಟೆರಾಕೋಟ, ಖಾದಿ ಉಡುಪುಗಳು ಸೇರಿದಂತೆ ಒಳಾಂಗಣದಲ್ಲಿ 30 ಕ್ಕೂ ಹೆಚ್ಚು ಮಳಿಗೆ ಹಾಗೂ ಹೊರಾಂಗಣದಲ್ಲಿ ನರ್ಸರಿ ಗಿಡಗಳು, ವಿವಿಧ ಬ್ಯಾಂಕ್ ಮತ್ತು ಇಲಾಖೆಗಳ ಮಳಿಗೆಗಳು, ಕೃಷಿ ಪರಿಕರಗಳು, ತಿಂಡಿ-ತಿನಿಸು, ಸೀರೆ-ಬಟ್ಟೆ ಇನ್ನೂ ವಿವಿ‘ ರೀತಿಯ 30 ಕ್ಕೂ ಹೆಚ್ಚು ಮಾರಾಟ ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಮೇಳದಲ್ಲಿ ಶುಕ್ರವಾರ ಬೆಳಿಗ್ಗಿನಿಂದಲೇ ಸಾರ್ವಜನಿಕರು, ವಿದ್ಯಾರ್ಥಿಗಳು ಬಂದು ಖರೀದಿಯಲ್ಲಿ ನಿರತರಾಗಿದ್ದರು.