ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಗತ್ತೇ ಕುತೂಹಲದಿಂದ ಕಾಯುತ್ತಿರುವ ‘ಕಾಂತಾರ ೧’ ಸಿನಿಮಾದ ಶೂಟಿಂಗ್ ಬ್ಯುಸೀಯ ನಡುವೆಯೂ ಬಿಡುವು ಪಡೆದುಕೊಂಡ ನಟ ರಿಷಬ್ ಶೆಟ್ಟಿ, ತಮ್ಮ ಕುಟುಂಬ ಸಮೇತ ದೇವಸ್ಥಾನಕ್ಕೆ ಭೇಟಿ ನೀಡಿ ಯುಗಾದಿ ಹಬ್ಬವನ್ನು ವಿಶಿಷ್ಟವಾಗಿ ಆಚರಿಸಿಕೊಂಡಿದ್ದಾರೆ.
ನಟ ರಿಷಬ್ ಶೆಟ್ಟಿ ಅವರು ಪತ್ನಿ ಪ್ರಗತಿ ಶೆಟ್ಟಿ, ರಣ್‌ವಿಥ್ ಶೆಟ್ಟಿ, ರಾಧ್ಯಾ ಶೆಟ್ಟಿ ಜೊತೆ ಸಾಂಪ್ರದಾಯಿಕ ಉಡುಪಿನಲ್ಲಿ ಇರುವುದು ಅಭಿಮಾನಿಗಳ ಗಮನಸೆಳೆದಿದ್ದು, ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.