ಹೊಸದಿಗಂತ ಡಿಜಿಟಲ್ ಡೆಸ್ಕ್:
ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ವಿಜಯ್ ದೇವರಕೊಂಡ ಡೇಟಿಂಗ್‌ನಲ್ಲಿರೋ ವಿಚಾರ ಇದೀಗ ಗುಟ್ಟಾಗಿ ಉಳಿದಿಲ್ಲ. ಈ ಜೋಡಿ ಬಗ್ಗೆ ಜ್ಯೋತಿಷಿಯೊಬ್ಬರು ಮಾತನಾಡಿದ್ದು, ಇವರಿಬ್ಬರೇನಾದ್ರೂ ಮದುವೆ ಆದ್ರೆ ಡಿವೋರ್ಸ್ ಪಕ್ಕಾ ಎಂದು ಹೇಳಿದ್ದಾರೆ. ಜನಪ್ರಿಯ ಜ್ಯೋತಿಷಿ ವೇಣು ಸ್ವಾಮಿ ಈ ರೀತಿ ಹೇಳಿದ್ದಾರೆ ಎನ್ನಲಾಗಿದೆ.
ನಾನು ರಶ್ಮಿಕಾಗೆ ಈ ಭವಿಷ್ಯದ ಬಗ್ಗೆ ಹೇಳಿದ್ದೆ. ಅದಕ್ಕೆ ರಶ್ಮಿಕಾಗೆ ಕೋಪ ಬಂದು ನನ್ನ ಜೊತೆ ಮಾತನಾಡೋದನ್ನು ಬಿಟ್ಟಿದ್ದಾರೆ. ಅವರು ಸೆಲೆಬ್ರಿಟಿ ಇರಬಹುದು ಆದರೆ ನನಗೆ ಕ್ಲೈಂಟ್ ಮಾತ್ರ. ಸೆಲೆಬ್ರಿಟಿ ಆದರೇನು ಗ್ರಹಗತಿ ನೋಡಿಯೇ ಭವಿಷ್ಯ ಹೇಳೋಕೆ ಸಾಧ್ಯ ಅಲ್ವಾ ಎಂದು ಜ್ಯೋತಿಷಿ ಹೇಳಿದ್ದಾರೆ ಎನ್ನಲಾಗಿದೆ.