ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಯೋಧ್ಯೆಯಲ್ಲಿ ದೀಪಾವಳಿ ಹಬ್ಬದ ಸಂಭ್ರಮ ಮನೆಮಾಡಿದೆ. ಈ ಬಾರಿ ಉತ್ತರ ಪ್ರದೇಶ ಸರ್ಕಾರ ಬರೋಬ್ಬರಿ 24 ಲಕ್ಷ ದೀಪ ಬೆಳಗಿಸಿ, ಮತ್ತೊಂದು ಗಿನ್ನಿಸ್ ದಾಖಲೆಗೆ ಸಜ್ಜಾಗಿದೆ. ಆಯೋಧ್ಯೆಯ ಸರಯೂ ನದಿ ದಂಡೆ ಮೇಲೆ ಬರೋಬ್ಬರಿ 24 ಲಕ್ಷ ದೀಪ ಬೆಳಗಿಸಿ ದೀಪಾವಳಿ ಹಬ್ಬ ಆಚರಿಸಲಾಗುತ್ತಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕಾರ್ಯಕ್ರಮ ಉದ್ಘಾಟಿಸಿದ್ದಾರೆ.
ಯೋಗಿ ಆದಿತ್ಯನಾಥ್ ಸರಯೂ ಆರತಿ ನೆರವೇರಿಸಿದ್ದಾರೆ.
ಯೋಗಿ ಆದಿತ್ಯನಾಥ್ ಕಾರ್ಯಕ್ರಮ ಉದ್ಘಾಟಿಸಿ ಭಾಷಣ ಮಾಡಿದ್ದು, ಶ್ರೀ ರಾಮ ಮಂದಿರ ಉದ್ಘಾಟನೆಗೆ ಇನ್ನು ಕೇಲವೇ ದಿನಗಳು ಮಾತ್ರ ಬಾಕಿ ಇದೆ. ಇದರ ನಡುವೆ ದೀಪಾವಳಿ ಹಬ್ಬ ಆಗಮಿಸಿರುವುದು ಆಯೋಧ್ಯೆ ಕಳೆ ಹೆಚ್ಚಿಸಿದೆ ಎಂದಿದ್ದಾರೆ.
ಸತತ 6ನೇ ವರ್ಷ ಆಯೋಧ್ಯೆಯಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ಗಿನ್ನಿಸ್ ದಾಖಲೆ ಬರೆಯುತ್ತಿದೆ.ಲಕ್ಷ ಲಕ್ಷ ದೀಪೋತ್ಸವ ಸಂಭ್ರಮದ ಮೂಲಕ ದೀಪಾವಳಿ ಆಚರಿಸಿ ಜಗತ್ತಿಗೆ ಸಂದೇಶ ಸಾರಿದೆ. ಕಳೆದ ವರ್ಷ 15 ಲಕ್ಷ ದೀಪಗಳನ್ನು ಬೆಳಗಿಸಿ ದೀಪಾವಳಿ ಹಬ್ಬ ಆಚರಿಸಲಾಗಿತ್ತು. 20,000 ಸ್ವಯಂ ಸೇವಕರು ದೀಪ ಬೆಳಗಿಸಿದ್ದರು. ಈ ಬಾರಿ 24 ಲಕ್ಷ ದೀಪಗಳನ್ನು ಬೆಳಗಿಸಲಾಗುತ್ತಿದೆ. 25,000ಕ್ಕೂ ಹೆಚ್ಚು ಸ್ವಯಂ ಸೇವಕರು ದೀಪ ಬೆಳಗಿ ಗಿನ್ನಿಸ್ ದಾಖಲೆ ಬರೆದಿದ್ದಾರೆ .