ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಸಿಸ್ ಉಗ್ರ ಸಂಘಟನೆ ಪರವಾಗಿ ಕೆಲಸ ಮಾಡಿದ ಆರೋಪದಲ್ಲಿ ಉತ್ತರ ಪ್ರದೇಶದಲ್ಲಿರುವ (Uttar Pradesh) ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ (Aligarh Muslim University) ಆರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ.
ಐಸಿಸ್ ಉಗ್ರ ಸಂಘಟನೆ ಪರವಾಗಿ ಕೆಲಸ ಮಾಡುತ್ತಿರುವ ಕುರಿತು ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಹಲವೆಡೆ ರಾಜ್ಯದ ಭಯೋತ್ಪಾದನೆ ನಿಗ್ರಹ ದಳದ (Anti-Terror Squad) ಅಧಿಕಾರಿಗಳು ದಾಳಿ ನಡೆಸಿ ಆರು ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ನಾಲ್ವರು ಆರೋಪಿಗಳನ್ನು ರಕೀಬ್ ಇನಾಮ್, ನಾವೆದ್ ಸಿದ್ದಿಕಿ, ಮೊಹಮ್ಮದ್ ನೊಮಾನ್ ಹಾಗೂ ಮೊಹಮ್ಮದ್ ನಾಜಿಮ್ ಎಂಬುದಾಗಿ ಗುರುತಿಸಲಾಗಿದೆ.
ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳದ ಪ್ರಕಾರ, ಆರೋಪಿಗಳು ದೇಶದಲ್ಲಿ ದೊಡ್ಡ ಭಯೋತ್ಪಾದಕ ದಾಳಿ ನಡೆಸಲು ಯೋಜಿಸಿದ್ದರು ಎಂದು ಹೇಳಿದ್ದಾರೆ. ಯುಪಿ ಎಟಿಎಸ್ ಆರು ವ್ಯಕ್ತಿಗಳನ್ನು ಬಂಧಿಸುವುದರೊಂದಿಗೆ ಅಲಿಘರ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಟನೆಯ ಭಯೋತ್ಪಾದಕ ಜಾಲವು ಬೆಳಕಿಗೆ ಬಂದಿದೆ.