ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಾಸಕರು, ಸಚಿವರಿಗೆ ಡಿಸಿಎಂ ಡಿಕೆ ಶಿವಕುಮಾರ್ ಮತ್ತೊಮ್ಮೆ ಖಡಕ್ ವಾರ್ನಿಂಗ್ ನೀಡಿದ್ದು, ಬಹಿರಂಗ ಹೇಳಿಕೆ ನೀಡಿ ‘ರಾಜಕೀಯ ಭವಿಷ್ಯ’ ಹಾಳು ಮಾಡ್ಕೊಬೇಡಿ ಎಂದು ಸೂಚಿಸಿದ್ದಾರೆ .
ಪಕ್ಷದ ಬಗ್ಗೆ ಸಚಿವರು, ಶಾಸಕರು ಪಕ್ಷದ ಚೌಕಟ್ಟು ಮೀರಿ ಬಹಿರಂಗ ಹೇಳಿಕೆ ನೀಡುತ್ತಿರುವುದು ಕಂಡು ಬಂದ ಬೆನ್ನಲ್ಲೇ ಇಂದು ಕಾವೇರಿ ನಿವಾಸದಲ್ಲಿ ಡಿಕೆಶಿ ಮತ್ತೊಮ್ಮೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.
ಯಾವುದೇ ಹೇಳಿಕೆಗೆ ರಿಯಾಕ್ಟ್ ಮಾಡಬೇಡಿ , ಯಾರೂ ಕೂಡ ರಾಜಕೀಯ ಭವಿಷ್ಯವನ್ನು ಹಾಳು ಮಾಡಿಕೊಳ್ಳಲು ಹೋಗಬೇಡಿ, ಜತೆಗೆ ಪಕ್ಷದ ಭವಿಷ್ಯವನ್ನು ಕೂಡ ಹಾಳು ಮಾಡ್ಬೇಡಿ ಎಂದು ಖಡಕ್ ಸೂಚನೆ ನೀಡಿದರು.