ಭ್ರಷ್ಟಾಚಾರದ ಬಗ್ಗೆ ಶಿವಕುಮಾರ್‌ ಮಾತು ಭೂತದ ಬಾಯಲ್ಲಿ ಭಗವದ್ಗೀತೆ ಬಂದಂತೆ: ಸಿ.ಟಿ.ರವಿ ಲೇವಡಿ

ಹೊಸದಿಗಂತ ವರದಿ, ವಿಜಯನಗರ
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಬಾಯಿಂದ ಬ್ರಷ್ಟಾಚಾರದ ಬಗ್ಗೆ ಮಾತುಗಳು‌ ಬರುತ್ತಿರುವುದು ಹಾಸ್ಯಾಸ್ಪದವಾಗಿದೆ. ಅದು ಭೂತದ ಬಾಯಿಂದ ಭಗವದ್ಗೀತೆ ಬಂದಂತೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ವಾಗ್ದಾಳಿ ನಡೆಸಿದರು.
ನಗರದ ಬಟ್ರಹಳ್ಳಿ ಆಂಜನೇಯ ಸ್ವಾಮೀ ದೇಗುಲದ ಆವರಣದಲ್ಲಿ  ಶನಿವಾರ ‌ಮಾತನಾಡಿದ ಅವರು, ನಮ್ಮ ವಿರುದ್ದ ಬ್ರಷ್ಟಾಚಾರದ ಬಗ್ಗೆ ಆರೋಪ ಮಾಡುತ್ತಿರುವ ಡಿ.ಕೆ.ಶಿವಕುಮಾರ್, ತಮ್ಮ ಮೇಲೆ ಯ್ಯಾವ ಯ್ಯಾವ ಆರೋಪಗಳಿವೆ, ಜೈಲಿಗೆ ಹೋಗುಬಂದಿದ್ದು ಏಕೆ ಎಂಬುದನ್ನು ಆತ್ಮಾವಲೋಕನೆ ಮಾಡಿಕೊಳ್ಳಲಿ, ಕೆ.ಎಸ್.ಈಶ್ವರಪ್ಪ ತಮ್ಮ ವಿರುದ್ಧ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಪಕ್ಷಕ್ಕೆ ಮುಜುಗರವಾಗಬಾರದು ಎಂದು ರಾಜೀನಾಮೆ ಸಲ್ಲಿಸಿದ್ದಾರೆ. ಅವರ ವಿರುದ್ದ ಬ್ರಷ್ಟಾಚಾರದ ಆರೋಪ ಮಾಡುವುದರೊಂದಿಗೆ ಅವರ ಬಂಧನಕ್ಕಾಗಿ ಕೈ ನಾಯಕರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ. ದೇಶದ್ರೋಹ ಮಾಡಿದ ಆರೋಪ ಹಿನ್ನೆಲೆಯಲ್ಲಿಮಹಾರಾಷ್ಟ್ರದ ಕಾಂಗ್ರೆಸ್‌ ಮಾಜಿ ಸಚಿವ ನವಾಬ್ ಮಲೀಕ್ ಜೈಲುವಾಸ ಅನುಭವಿಸುತ್ತಿದ್ದಾನೆ. ಕೈ ನಾಯಕರ ಒಂದೊಂದು ಪ್ರಕರಣಗಳನ್ನು ಬಯಲಿಗೆಳೆಯಲು ಮುಂದಾದರೇ ಹಲವರು ಜೈಲು ಪಾಲಾಗುತ್ತಾರೆ. ಇನ್ನೂ ಕೆಲವರು ಓಡಿಹೋಗಿ ಜಾಮೀನು ಪಡೆಯಬೇಕಾಗುತ್ತದೆ. ಕೈ ನಾಯಕರಿಗೆ ನಾಚಿಗೆಯಾಗಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂತೋಷ್ ಆತ್ಮಹತ್ಯೆ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ‌ಪರಿಗಣಿಸಿದ್ದು, ತನಿಖೆ ಮುಂದುವರೆದಿದೆ. ಹೀಗಿರುವಾಗ ವಿರೋಧ ಪಕ್ಷದ ಸ್ಥಾನದ ಅರ್ಹತೆ ಕಳೆದುಕೊಂಡಿರುವ ಕೈ‌ನಾಯಕರಿಂದ ನಾವೇನು ಹೇಳಿಸಿಕೊಳ್ಳುವ ಅಗತ್ಯವಿಲ್ಲ. ಸಂತೋಷ್ ಹತ್ಯೆ ಪ್ರಕರಣದಲ್ಲಿ ಯಾರದೇ ತಪ್ಪಿದ್ದರೂ ಖಂಡಿತ ಶಿಕ್ಷೆಯಾಗಲಿದೆ. ಸಂತೋಷ್ ಸಾವಿನ ಮುನ್ನ ಡೆತ್ ನೋಟ್ ನ್ನು ವ್ಯಾಟ್ಸ್ ಅಪ್ ಕಳಿಸಿದ್ರಾ ಅಥವಾ ಮೃತಪಟ್ಟ ಬಳಿಕ ಹರಿದಾಡಿತಾ ಎಂಬುದು ತಬಿಖೆಯಲ್ಲಿ ಬಯಲಾಗಲಿದೆ. ಎಂದರು. ಈ ಸಂದರ್ಭದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಸೇರಿದಂತೆ ಇತರರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!