May 29, 2026
Friday, May 29, 2026
spot_img

ಡಿಕೆಶಿ ಕ್ಯಾಬಿನೆಟ್ ಕಸರತ್ತು: ಸಿದ್ದರಾಮಯ್ಯ ಸಂಪುಟದ 20 ಸಚಿವರಿಗೆ ಹೈಕಮಾಂಡ್ ಕೊಕ್?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕರ್ನಾಟಕ ಕಾಂಗ್ರೆಸ್ ವಲಯದಲ್ಲಿ ಸದ್ಯ ಸಂಪುಟ ಪುನಾರಚನೆಯ ತಲ್ಲಣ ಮತ್ತು ಭಾರಿ ಸಂಚಲನ ಸೃಷ್ಟಿಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಹಾಲಿ ಕ್ಯಾಬಿನೆಟ್‌ನಲ್ಲಿದ್ದ ಬರೋಬ್ಬರಿ 17 ರಿಂದ 20 ಸಚಿವರು ಈ ಬಾರಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದ ನೂತನ ಸಂಪುಟದಲ್ಲಿ ಸ್ಥಾನ ಕಳೆದುಕೊಳ್ಳುವ ದಟ್ಟ ಮುನ್ಸೂಚನೆಗಳು ಲಭ್ಯವಾಗಿವೆ.

ದೆಹಲಿ ಹೈಕಮಾಂಡ್ ಮೂಲಗಳ ಪ್ರಕಾರ, ಸಿದ್ದರಾಮಯ್ಯ ಕ್ಯಾಬಿನೆಟ್‌ನಲ್ಲಿದ್ದ ಕೇವಲ 10 ರಿಂದ 12 ಹಿರಿಯ ಸಚಿವರಿಗಷ್ಟೇ ಈ ಬಾರಿ ಅದೃಷ್ಟ ಒಲಿಯಲಿದೆ. ಬಾಕಿ ಉಳಿದ ಸಚಿವರನ್ನು ಕೈಬಿಡಲು ಹೈಕಮಾಂಡ್ ಗಂಭೀರ ಚಿಂತನೆ ನಡೆಸಿದ್ದು, ಇದರಲ್ಲಿ ಪ್ರಮುಖವಾಗಿ ಬೆಂಗಳೂರು ಭಾಗದ ಮೂವರು ಪ್ರಭಾವಿ ನಾಯಕರಿಗೆ ಮಂತ್ರಿಗಿರಿ ಕೈತಪ್ಪುವ ಸಾಧ್ಯತೆ ದಟ್ಟವಾಗಿದೆ.

ತಮ್ಮ ಆಪ್ತ ವಲಯದ ಹಲವು ನಾಯಕರಿಗೆ ಸಚಿವ ಸ್ಥಾನ ಸಿಗದೇ ಇರುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅಲರ್ಟ್ ಆಗಿದ್ದಾರೆ. ತಮ್ಮ ಬೆಂಬಲಿಗರಲ್ಲಿ ಕನಿಷ್ಠ 6 ರಿಂದ 7 ಜನರಿಗಾದರೂ ಹೊಸ ಸಂಪುಟದಲ್ಲಿ ಕಡ್ಡಾಯವಾಗಿ ಅವಕಾಶ ನೀಡಬೇಕು ಎಂದು ಸಿದ್ದರಾಮಯ್ಯ ಅವರು ಹೈಕಮಾಂಡ್ ನಾಯಕರ ಮುಂದೆ ಬಿಗಿ ಪಟ್ಟು ಹಿಡಿದಿದ್ದಾರೆ ಎಂದು ತಿಳಿದುಬಂದಿದೆ.

ಈ ಬಾರಿಯ ನೂತನ ಕ್ಯಾಬಿನೆಟ್ ಕೇವಲ ಪ್ರಭಾವದ ಆಧಾರದ ಮೇಲಲ್ಲದೆ, ಮೂರು ಪ್ರಮುಖ ಫಾರ್ಮುಲಾಗಳ ಅಡಿಯಲ್ಲಿ ರಚನೆಯಾಗಲಿದೆ:

ಸಿದ್ದರಾಮಯ್ಯ ಬೆಂಬಲಿಗರು (ಮುಖ್ಯಮಂತ್ರಿಗಳ ಆಪ್ತ ವಲಯ)

ಡಿ.ಕೆ. ಶಿವಕುಮಾರ್ ಆಪ್ತರು (ಕೆಪಿಸಿಸಿ ಅಧ್ಯಕ್ಷರ ನಿಷ್ಠಾವಂತರು)

ಹೈಕಮಾಂಡ್ ಒಲವುಳ್ಳ ನಾಯಕರು (ದೆಹಲಿ ನಾಯಕರ ನೇರ ಆಯ್ಕೆ)

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !