ಹೊಸದಿಗಂತ ವರದಿ, ಬೆಳಗಾವಿ:
ಈ ಹಿಂದೆ ತಮ್ಮನ್ನು ಸಿಲುಕಿಸಿದ್ದ ಸಿ.ಡಿ. ಕೇಸ್ ನಲ್ಲಿ ಡಿ.ಕೆ.ಶಿವಕುಮಾರ್ ನೇರ ಕೈವಾಡ ಇದ್ದು ಈ ಕೇಸ್ ನ್ನು ಸಿಬಿಐಗೆ ವಹಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ರವಾನಿಸಿರುವುದಾಗಿ ಶಾಸಕ ರಮೇಶ್ ಜಾರಕಿಹೊಳಿ ತಿಳಿಸಿದರು.
ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ನನ್ನ ಬಳಿ ದಾಖಲೆಗಳಿವೆ. ಸಿ.ಎಂ. ಸಿದ್ದರಾಮಯ್ಯ ಅಗತ್ಯ ಕ್ರಮ ತೆಗೆದುಕೊಳ್ಳುತ್ತಾರೆಂಬ ನಂಬಿಕೆ ಇದೇ ಎಂದರು.
ಗಾಳಿಯಲ್ಲಿ ಗುಂಡು ಹೊಡೆಯುತ್ತಿಲ್ಲ. ಪಕ್ಕಾ ದಾಖಲೆ ಇವೇ. ಸಿಬಿಐಗೆ ವಹಿಸಿದರೆ ದಾಖಲೆಗಳನ್ನು ಕೊಡುತ್ತೇನೆ ಎಂದು ಹೇಳಿದರು.
ನಾನು ಮೊದಲೇ ಹೇಳಿದ್ದೇನೆ. ಡಿ.ಕೆ.ಶಿವಕುಮಾರ್ ಅಂದರೆ ಸಿ.ಡಿ. ಫ್ಯಾಕ್ಟರಿ. ಈಗ ಬಹಿರಂಗವಾಗಿಯೇ ಮಾತನಾಡಿದ ಅಡಿಯೋ ಇದೇ. ಡಿಕೆಶಿ, ವಿಷಕನ್ಯೆ ಹಾಗೂ ಇನ್ನೋರ್ವ ಮಹಾ ವ್ಯಕ್ತಿ ಇದ್ದಾರೆ ಎಂದು ಡಿಕೆಶಿ ಹೇಳಿದ್ದಾರೆ. ಎಲ್ಲವನ್ನೂ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ವಿವರಿಸಲಿದ್ದೇನೆ ಎಂದು ಜಾರಕಿಹೊಳಿ ಹೇಳಿದರು.
ನಾನೇನು ಆಪರೇಷನ್ ಕಮಲ ಮಾಡುತ್ತಿಲ್ಲ. ನಿನ್ನೆ ಆದರೂ ಅದನ್ನೇ ಹೇಳಿದ್ದೇನೆ. ಆದರೆ ಮಹಾರಾಷ್ಟ್ರ ಮಾದರಿ ಆಗಬೇಕೆಂದು ಹೇಳಿದ್ದೇನೆ. ಡಿ ಕೆ ಶಿವಕುಮಾರ್ ಇಲ್ಲವೇ ಸಿದ್ದರಾಮಯ್ಯ ಬಂಡೇಳಬೇಕು. ಅದು ಅಸಾಧ್ಯವಾದ ಮಾತು ಎಂದು ಹೇಳಿದರು.