ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಕುಟುಂಬ ಸಮೇತ ನೊಣವಿನಕೆರೆ ಕಾಡಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿ ವೃಷಭ ದೇಶಿಕೇಂದ್ರ ಶ್ರೀಗಳ ಆಶೀರ್ವಾದ ಪಡೆದರು.
ನಿನ್ನೆ ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ರಾಜ್ಯದಲ್ಲಿ ಸಂಪೂರ್ಣ ಬಹುಮತದಿಂದ ಕಾಂಗ್ರೆಸ್ ಗೆಲುವು ಸಾಧಿಸಿದೆ. ಈ ಹಿನ್ನಲೆ ಡಿ.ಕೆ ಶಿವಕುಮಾರ್ ತನ್ನ ನೆಚ್ಚಿನ ದೈವ ನೊಣವಿನಕೆರೆ ಅಜ್ಜಯ್ಯನ ದರುಶ ಪಡೆದರು. ಬೆಳಗ್ಗೆ ಈ ಕುರಿತು ಮಾತನಾಡಿದ ಅವರು, ‘ಎಲ್ಲಿ ಶ್ರಮವಿದೆಯೋ ಅಲ್ಲಿ ಪ್ರತಿಫಲ ಇದೆ. ಹಿಂದೆಯೇ ನಾನು 136 ನಂಬರ್ ಬರುತ್ತೆ ಎಂದು ಹೇಳಿದ್ದೆ, ಹಾಗೆಯೇ ಬಂದಿದೆ. ಕುತೂಹಲ ಪಡಬೇಕಿಲ್ಲ, ಯಾರೂ ಟೆನ್ಷನ್ ಮಾಡಿಕೊಳ್ಳಬೇಡಿ. ಎಲ್ಲಿ ಭಕ್ತಿ ಇದೆಯೋ ಅಲ್ಲಿ ಭಗವಂತ ಇದ್ದಾನೆ. ಕಷ್ಟದಲ್ಲಿ ನನ್ನ ಪಾರು ಮಾಡಿದ ನೊಣವಿನಕೆರೆ ಅಜ್ಜಯ್ಯನ ಭೇಟಿಗೆ ನಾನು ಹೋಗುತ್ತಿದ್ದೇನೆʼ ಎಂದರು.
ನಿನ್ನೆಯ ಫಲಿತಾಂಶದಲ್ಲಿ ಡಿಕೆಶಿ ಬಿಜೆಪಿ ಅಭ್ಯರ್ಥಿ ವಿರುದ್ಧ ಒಂದು ಲಕ್ಷ ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದರು.
#WATCH | Tumkuru: Karnataka Congress president DK Shivakumar along with his family visited Nonavinakere Kadasiddeshwara Mutt to take the blessings of Vrishabha Deshikendra Seer after winning the elections. pic.twitter.com/rGKYnlrRZO
— ANI (@ANI) May 14, 2023