VIRAL VIDEO| ನಡುರಸ್ತೆಯಲ್ಲೇ ಜಡೆಜಗಳ: ಗಲಾಟೆ ತಡೆಯಲು ಪೊಲೀಸಪ್ಪನ ಸಖತ್‌ ಐಡಿಯಾ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ನಾರಿಮಣಿಯರು ಜಗಳಕ್ಕಿಳಿದರೆ ಸಾಕು. ಅದು ಮನೆಯಾ, ಬೀದಿಯಾ ಯಾವುದೂ ಲೆಕ್ಕಕ್ಕಿಲ್ಲ. ಅಂತೆಯೇ ಮಿಸೌರಿಯ ಕಾನ್ಸಾಸ್ ಸಿಟಿಯ ಉತ್ಸಾಹಭರಿತ ವೆಸ್ಟ್ ಪೋರ್ಟ್ ಡಿಸ್ಟ್ರಿಕ್ಟ್‌ನಲ್ಲಿ ಮಹಿಳೆಯರು ಒಬ್ಬರನ್ನೊಬ್ಬರು ಹುಚ್ಚುಚ್ಚಾಗಿ ಒದೆಯಲು ಪ್ರಾರಂಭಿಸುತ್ತಾರೆ. ಒಬ್ಬರಿಗೊಬ್ಬರು ಕೂದಲು ಎಳೆದುಕೊಳ್ಳುವುದು.. ಮುಷ್ಟಿ ಹೊಡೆಯುವುದು.. ಸಿನಿಮಾ ಸ್ಟಂಟ್‌ಗಳನ್ನು ಮೀರಿದ ರೀತಿ ಹೊಡೆದಾಟ ಪ್ರಾರಂಭಿಸಿದ್ದಾರೆ.

ಅಲ್ಲಿಗೆ ಬಂದ ಪೊಲೀಸರು ಅವರನ್ನು ತಡೆಯಲು ಸಾಧ್ಯವಾಗದೇ ಪೆಪ್ಪರ್ ಸ್ಪ್ರೇ ಎರಚಿದರು. ಈ ವಿಡಿಯೋ ನೋಡಿದ ನೆಟಿಜನ್ಸ್ ಶಾಕ್ ಆಗಿದ್ದಾರೆ.

@CatchUpFeed ಎಂಬ ಬಳಕೆದಾರರಿಂದ ಟ್ವಿಟರ್‌ನಲ್ಲಿ ಹಂಚಿಕೊಂಡ ಈ ವೀಡಿಯೊ ವೈರಲ್ ಆಗುತ್ತಿದೆ. ಕೆಲವರು ಗಲಾಟೆ ತಡೆಯಲು ಪೊಲೀಸರ ಕೆಲಸವನ್ನು ಶ್ಲಾಘಿಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಪೆಪ್ಪರ್ ಸ್ಪ್ರೇ ಸಿಂಪಡಿಸುವುದು ಎಷ್ಟು ಸುರಕ್ಷಿತ ಎಂದು ಕೆಲವರು ಪ್ರಶ್ನಿಸಿದರು. ಪರಿಸ್ಥಿತಿಯನ್ನು ಹತೋಟಿಗೆ ತರಲು ಪೊಲೀಸರು ಈ ನಿರ್ಧಾರ ಕೈಗೊಂಡಿರುವಂತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!