ಹೊಸದಿಗಂತ ಡಿಜಿಟಲ್ ಡೆಸ್ಕ್:
ಡಿಸಿಎಂ ಡಿಕೆ ಶಿವಕುಮಾರ್ ಅವರು ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ಅನ್ನು ಹೆದರಿಸಲು ಹಿಂದುತ್ವದ ವೇಷ ಹಾಕಿದ್ದಾರೆ ಎಂದು ಶಾಸಕ ಮುನಿರತ್ನ ಟಾಂಗ್ ಕೊಟ್ಟಿದ್ದಾರೆ.
ಡಿಕೆ ಶಿವಕುಮಾರ್ ಹಿಂದೂ ಅಲ್ಲ ಅಂತ ನಾವು ಯಾರು ಹೇಳಿಲ್ಲ. ಅವರು ಹಿಂದೂನೇ. ಡಿಕೆಶಿ ಅವರು ಸಿದ್ದರಾಮಯ್ಯಗೆ ಬ್ಲಾಕ್‌ಮೇಲ್ ಮಾಡೋದಕ್ಕೆ ಹಿಂದುತ್ವದ ವೇಷ ಹಾಕಿದ್ದಾರೆ. ಸಿದ್ದರಾಮಯ್ಯರನ್ನ ಮತ್ತು ಕಾಂಗ್ರೆಸ್ ಅನ್ನ ಬ್ಲ್ಯಾಕ್‌ಮೇಲ್ ಮಾಡಲು ಇವೆಲ್ಲಾ ತಂತ್ರ ಅಷ್ಟೇ ಎಂದು ತಿರುಗೇಟು ನೀಡಿದ್ದಾರೆ.