Saturday, December 9, 2023

Latest Posts

ನನ್ನ ಬೆಂಬಲಿಸಿದ್ರೆ, ಪರವಾಗಿ ಮಾತಾಡಿದ್ರೆ ನೋಟೀಸ್ ಕೊಡ್ತೇನೆ-ಡಿ.ಕೆ.ಶಿವಕುಮಾರ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನನ್ನ ಬೆಂಬಲಿಸಿದ್ರೆ, ಪರವಾಗಿ ಮಾತಾಡಿದ್ರೆ ನೋಟಿಸ್‌ ಕಳುಹಿಸುವುದಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಎಚ್ಚರಿಕೆ ನೀಡಿದ್ದಾರೆ. ಸಿಎಂ ಬದಲಾವಣೆ ವಿಚಾರ ತೀವ್ರ ಸುದ್ದಿಯಾಗುವ ನಡುವೆ ಡಿಕೆಶಿ ಮೌನ ಮುರಿದಿದ್ದಾರೆ.

ಬೆಂಗಳೂರಲ್ಲಿ ಮಾತಾಡಿದ ಅವರು, ಪಕ್ಷದಲ್ಲಿ ಶಿಸ್ತು ಮುಖ್ಯ ಕಳೆದ ಕೆಲವು ದಿನಗಳಿಂದ ಹೀಗೆಲ್ಲಾ ಬೆಳವಣಿಗೆ ಆಗ್ತಿದೆ ಇದು ಸರಿ ಅಲ್ಲ. ಇದೇ ರೀತಿ ಮುಂದುವರಿದರೆ, ನೋಟಿಸ್‌ ಕೊಡುವುದಾಗಿ ಎಚ್ಚರಿಸಿದರು. ʻಡಿಕೆಶಿ ಸಿಎಂ ಆಗಬೇಕು ಎಂದು ಹಲವು ಶಾಸಕರು, ಸಚಿವರು ಬೆಂಬಲ ಸೂಚಿಸುತ್ತಿದ್ದಾರೆ. ನನಗೆ ಯಾರ ಬೆಂಬಲವೂ ಬೇಡ, ಇನ್ನೊಮ್ಮೆ ನನಗೆ ಬೆಂಬಲ ನೀಡುತ್ತಾ ಮಾತನಾಡಯವುದು ಕಂಡುಬಂದರೆ, ನೋಟಿಸ್‌ ಎದುರಿಸಬೇಕಾಗುತ್ತದೆ. ಪಕ್ಷದಲ್ಲಿ ಶಿಸ್ತು ಎಂಬುದು ಮುಖ್ಯ, ಬಾಯಿಗೆ ಬಂದಂತೆ ಮಾತನಾಡುವುದು ಶೋಭೆಯಲ್ಲ ಎಂದರು.

ಶುಕ್ರವಾರ ರಾಮನಗರದಲ್ಲಿ ಡಿಕೆಶಿ ಬೆಂಬಲಿಸಿ ಮಾತನಾಡಿದ ಎಚ್‌.ಎ.ಇಕ್ಬಾಲ್‌ ಹುಸೇನ್‌ಗೆ ನೋಟಿಸ್‌ ಕಳಿಸಬೇಕೆಂದಿದ್ದೇನೆ. ನನಗೆ ಯಾರ ಇನ್ಫ್ಲುಯೆನ್ಸ್‌ ಬೇಡ ಎಂದು ಖಾರವಾಗಿ ನುಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!