September 27, 2026
Sunday, September 27, 2026
spot_img

ಚಿಂತೆ ಬಿಡಿ, ತಿಂಡಿ ಮಾಡಿ 45 | ಪಾಲಕ್‌ ಸೊಪ್ಪು ತಿನ್ನೋಕೆ ಮಕ್ಕಳು ನಾಟಕ ಆಡ್ತಾರಾ, ಈ ರೈಸ್‌ ಒಮ್ಮೆ ತಿಂದ್ರೆ ಮತ್ತೆ ಕೇಳ್ತಾರೆ

ಸಾಮಾಗ್ರಿಗಳು
ಪಾಲಕ್‌ ಸೊಪ್ಪು
ಈರುಳ್ಳಿ
ಹಸಿಮೆಣಸು
ಶುಂಠಿ
ಕೊತ್ತಂಬರಿ ಸೊಪ್ಪು
ಅನ್ನ
ಸಾಂಬಾರ್‌ ಪುಡಿ

ಮಾಡುವ ವಿಧಾನ
ಮೊದಲು ಪಾತ್ರೆಯಲ್ಲಿ ನೀರು ಹಾಕಿ, ಪಾಲಕ್‌ ಸೊಪ್ಪು ಹಾಕಿ ಬಿಸಿ ಮಾಡಿ, ತಣ್ಣಗಾದ ನಂತರ ಅದನ್ನು ಮಿಕ್ಸಿಗೆ ಹಾಕಿ, ಶುಂಠಿ, ಹಸಿಮೆಣಸು ಹಾಗೂ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸಿಯಲ್ಲಿ ರುಬ್ಬಿ
ಆನಂತರ ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಚಕ್ಕೆ, ಲವಂಗ, ಏಲಕ್ಕಿ ಹಾಕಿ, ನಂತರ ಈರುಳ್ಳಿ ಹಾಕಿ ಬಾಡಿಸಿ
ಉಪ್ಪು ಹಾಕಿ, ಆನಂತರ ಟೊಮ್ಯಾಟೊ ಹಾಕಿ ಬಾಡಿಸಿ
ಕಡೆಗೆ ಪಾಲಕ್‌ ಪ್ಯೂರಿ, ಸಾಂಬಾರ್‌ ಪುಡಿ ಹಾಕಿ
ಎಣ್ಣೆ ಬಿಟ್ಟ ನಂತರ ಆಫ್‌ ಮಾಡಿ, ಬಿಸಿ ಅನ್ನ ಸೇರಿಸಿ ಕಲಸಿದ್ರೆ ಪಾಲಕ್‌ ರೈಸ್‌ ರೆಡಿ

Must Read