Sunday, October 1, 2023

Latest Posts

SHOCKING | ಬಸ್ ಕಿಟಕಿಯಿಂದ ಮಕ್ಕಳು ತಲೆ ಹೊರಗೆ ಹಾಕ್ತಾರಾ? ಈ ದುರ್ಘಟನೆ ಸಂಭವಿಸೀತು ಎಚ್ಚರ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಯಾವುದೇ ಬಸ್ ಆಗಲಿ ಮಕ್ಕಳು, ಕೈ, ತಲೆ ಹೊರಹಾಕುವುದನ್ನು ನೋಡಿ ಸುಮ್ಮನೆ ಇರಬೇಡಿ, ಯಾರ ಮಕ್ಕಳಾದರೂ ಪರವಾಗಿಲ್ಲ ತಲೆ ಒಳಕ್ಕೆ ಹಾಕುವಂತೆ ಗದರಿ!

ಯಾಕೆ ಇಷ್ಟೆಲ್ಲಾ ಹೇಳ್ತಿದ್ದೀವಿ ಅಂತೀರಾ? ಬ್ರೆಜಿಲ್‌ನ ಸ್ಕೂಲ್‌ಬಸ್‌ನಲ್ಲಿ ಬಾಲಕಿ ಕಿಟಕಿಯಿಂದ ತಲೆ ಹೊರಹಾಕಿದ್ದು, ಕಂಬಕ್ಕೆ ತಲೆ ತಗುಲಿ ಮೃತಪಟ್ಟಿದ್ದಾಳೆ.

ಶಾಲೆ ಮುಗಿಸಿ ಮನೆಗೆ ತೆರಳುವಾಗ ಬಾಲಕಿಯ ಸ್ನೇಹಿತರು ಬಸ್ ಇಳಿದಿದ್ದಾರೆ, ತದನಂತರ ಬಸ್ ಚಲಿಸಿದೆ, ಆಗ ಆಕೆ ಸ್ನೇಹಿತರಿಗೆ ಬಾಯ್ ಹೇಳಲು ತಲೆಯನ್ನುm, .ಕಿಟಕಿಯಿಂದ ಹೊರಹಾಕಿದ್ದಾಳೆ, ಪಕ್ಕದಲ್ಲಿ ಹೆಚ್ಚು ವಾಹನಗಳಿದ್ದ ಕಾರ ಡ್ರೈವರ್ ಬಸ್‌ನ್ನು ಕೊಂಚ ಎಡಕ್ಕೆ ತಂದಿದ್ದಾರೆ.

ಈ ವೇಳೆ ಕಂಬಕ್ಕೆ ತಲೆ ಹೊಡೆದಿದೆ. ತಕ್ಷಣವೇ ಅಲ್ಲಿದ್ದವರು ಹೀಗಾಗಿದೆ ಎಂದು ಚಾಲಕನಿಗೆ ಮಾಹಿತಿ ನೀಡಿದ್ದು, ಬಸ್ ನಿಲ್ಲಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಬಾಲಕಿ ಚಿಕಿತ್ಸೆಗೆ ಸ್ಪಂದಿಸಿಲ್ಲ. ತಲೆಗೆ ಗಂಭೀರ ಗಾಯಗಳಾದ ಕಾರಣ ಬಾಲಕಿ ಮೃತಪಟ್ಟಿದ್ದಾಳೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!