RELATIONSHIP | ಈಗಿನ ಹೆಣ್ಮಕ್ಕಳಿಗೆ ಗಂಡನ ಮೇಲೆ ಎಕ್ಸ್‌ಪೆಕ್ಟೇಷನ್ಸ್ ಜಾಸ್ತಿ ಅಂತೀರಾ? ಹಾಗಿದ್ರೆ ಇನ್ನು ಓದಲೇಬೇಕು..

  • ಮೇಘನಾ ಶೆಟ್ಟಿ, ಶಿವಮೊಗ್ಗ

ಹುಡುಗ ಎತ್ತರಕ್ಕಿರಬೇಕು, ನೋಡೋಕೆ ಚೆನ್ನಾಗಿರಬೇಕು, ತಲೆ ತುಂಬಾ ಕೂದಲಿರಬೇಕು, ಸಿಕ್ಕಾಪಟ್ಟೆ ಸಂಬಳ ಬರಬೇಕು, ಸ್ವಂತ ಮನೆ ಬೇಕೇ ಬೇಕು, ಓಡಾಡೋಕೆ ಕಾರು, ಬೈಕ್ ಇರಬೇಕು..

ಸಾಮಾನ್ಯವಾಗಿ ಮದುವೆಗೆ ಹುಡುಗನನ್ನು ಹುಡುಕಲು ಬ್ರೋಕರ್ ಮನೆಗೆ ಬಂದಾಗ ಹುಡುಗಿಯಿಂದ ಇಷ್ಟಂತೂ ನಿರೀಕ್ಷೆ ಇರುತ್ತದೆ, ಅವರ ಪ್ರಕಾರ ಇದೆಲ್ಲವೂ ‘ಬೇಸಿಕ್’.

Legal benefits of getting married in India | The Times of Indiaಆದರೆ ಈ ಎಲ್ಲ ನಿರೀಕ್ಷೆಗಳನ್ನು ಹೇಳಿದ್ರೆ ಹುಡುಗಿ ತುಂಬಾ ಆಸೆಬುರುಕಿ, ಇಷ್ಟೆಲ್ಲಾ ಗುಣ ಒಟ್ಟಿಗೇ ಇರೋರು ಎಲ್ಲಿ ಸಿಕ್ತಾರೆ, ಬರೀ ದುಡ್ಡಿನ ಹಿಂದೆ ಬಿದ್ದಿದ್ದಾಳೆ ಅಂತೆಲ್ಲಾ ಅಂದುಕೊಳ್ಳೋದುಂಟು..

ಆದರೆ ಒಮ್ಮೆ ಯೋಚ್ನೆ ಮಾಡಿ ಆಕೆ ಕೇಳೋದ್ರಲ್ಲಿ ತಪ್ಪೇನಿದೆ? ನಿಮ್ಮ ಮಗಳನ್ನು ಮದುವೆ ಮಾಡಿಕೊಡುವಾಗ ನೀವು ಇದೆಲ್ಲವನ್ನೂ ನೋಡೋದಿಲ್ವಾ?
ಹಾಗಿದ್ರೆ ನಿಮ್ಮ ಪ್ರಶ್ನೆ ಕಡಿಮೆ ಬ್ಯಾಂಕ್ ಬ್ಯಾಲೆನ್ಸ್ ಇರೋದು, ಸ್ವಂತ ಮನೆ ಇಲ್ಲದೆ ಇರೋರು ಮದುವೆಯೇ ಆಗೋ ಹಾಗಿಲ್ಲ, ನಾವೆಲ್ಲಾ ಏನ್ ಮಾಡ್ಬೇಕು?

Happy Couple Images - Free Download on Freepikಹೌದು, ಜಗತ್ತಿನಲ್ಲಿ ಎಲ್ಲಾ ರೀತಿ ಗಂಡಸರೂ ಇದ್ದಾರೆ, ಹಾಗೆ ಅವರನ್ನು ಇರುವ ಹಾಗೆ ಒಪ್ಪುವ ಹುಡುಗಿಯರೂ ಇದ್ದಾರೆ. ಎಲ್ಲವೂ ನಿಮ್ಮ ನಿಮ್ಮ ಆಯ್ಕೆಗೆ ಬಿಟ್ಟಿದ್ದು, ಅರೇಂಜ್ ಮ್ಯಾರೇಜ್‌ನಲ್ಲಿ ಹುಡುಗಿ ಹುಡುಗನ ರೂಪ, ಹಣ, ಕೆಲಸ, ವಿದ್ಯೆ ನೋಡಿ ಮದುವೆಯಾಗ್ತಾರೆ. ಇನ್ನೂ ಕೆಲವರು ಮನೆಯಲ್ಲಿ ಒಕೆ ಮಾಡಿದ್ದಕ್ಕಾಗಿ ಮದುವೆಯಾಗ್ತಾರೆ.

My Story: I Have No Regrets Even Though We Are Poor. He Takes Cares For Our  Daughter When I Workಈ ಎಲ್ಲ ಹೆಣ್ಣುಮಕ್ಕಳೂ ಗಂಡನಲ್ಲಿ ನಿರೀಕ್ಷೆ ಮಾಡೋದು ಇದನ್ನು..

ಸಮಯ ಕೊಡಿ, ಎಷ್ಟೇ ಬ್ಯುಸಿಯಾಗಿರಿ, ಏನೇ ಮಾಡಿ, ಸಂಬಳ ಜೀವನಕ್ಕಾದ್ರೆ ಸಾಕು, ಇನ್ನೂ ಹೆಚ್ಚು ದುಡಿಯುವ ಭರದಲ್ಲಿ ಅಮೂಲ್ಯವಾದ ಸಮಯವನ್ನು ಕಳ್ಕೋಬೇಡಿ. ಇಂದನ್ನು ಎಂಜಾಯ್ ಮಾಡಿ.

Give Time Giving - Free photo on Pixabay - Pixabayಮಾತನಾಡಿ, ಯಾವಾಗ್ಲೂ ಮಾತಾಡ್ತಾನೆ ಇರ‍್ತೀವಲ್ಲ ಅನಿಸಬಹುದು, ಸಿಲ್ಲಿ ಅಂತಲೂ ಅನಿಸಬಹುದು. ಆದರೆ ಮಾತನಾಡಿ, ನಿಮಗೆ ಇಷ್ಟವಿಲ್ಲದ್ದು, ಇಷ್ಟವಾದ್ದು ಏನೇ ಆಗಲಿ ಮಾತನಾಡಿ. ಮಾತನಾಡಿದ್ರೆ ತಾನೆ ಅರ್ಥವಾಗೋಕೆ, ಮಾತನಾಡದೇ ಎಲ್ಲವನ್ನೂ ಅರ್ಥಮಾಡಿಕೊಳ್ಳೋ ಪ್ರೀತಿ ಜಗತ್ತಲ್ಲಿ ಇಲ್ಲ.

6 Conversation Topics You Need to Cover with Your Wife Every Week - All Pro  Dadಅಡುಗೆ ಸೂಪರ್ ಆಗಿದೆ, ಕಬೋರ್ಡ್ ಎಷ್ಟು ನೀಟಾಗಿದೆ, ಇವತ್ ರಂಗೋಲಿ ನೀನು ಹಾಕಿದ್ಯಾ? ಚೆನ್ನಾಗಿದೆ, ನೀವು ಆ ಸಂದರ್ಭದಲ್ಲಿ ಮಾತನಾಡಿದ್ದು ಖುಷಿಯಾಯ್ತು, ಮಗಳ ಸಮಸ್ಯೆಯನ್ನು ಹ್ಯಾಂಡಲ್ ಮಾಡಿದ ರೀತಿ ನಿನ್ನ ಮೇಲೆ ಗೌರವ ಹೆಚ್ಚು ಮಾಡ್ತು. ಇಷ್ಟು ಹೇಳೋಕೆ ಕಷ್ಟ ಏನು? ಮನಸಲ್ಲಿದೆ ಸರಿ, ಆಕೆಗೆ ಗೊತ್ತಾಗೋದು ಹೇಗೆ?

10 Specific Compliments to Give Your Wife - All Pro Dadಮನೆಕೆಲಸ ಅವಳೊಬ್ಬಳದೇ ಅಲ್ಲ ಅನ್ನೋದನ್ನು ಈಗಲೇ ಮನಸ್ಸಿಗೆ ತೊಗೊಳ್ಳಿ, ಲೋಟ ಇಟ್ಟು ಅರ್ಧ ಗಂಟೆ ಆಯ್ತು, ಯಾರೂ ಸಿಂಕ್‌ಗೆ ಹಾಕಿಲ್ಲ! ಯಾರೋ ಬಂದು ಯಾಕೆ ಹಾಕಬೇಕು, ನೀವೆ ಎದ್ದು ಹೋಗಿ ಹಾಕಬಹುದಲ್ವಾ? ಅಡುಗೆ ಮಾಡು ನಾನು ಎರಡು ಪಾತ್ರೆ ತೊಳೆದುಬಿಡ್ತೇನೆ ಎಂದರೆ ಏನಾಗುತ್ತದೆ?

lockdown | The kitchen, a most vital part of the household, was overlooked  till men got into it during lockdown - Telegraph Indiaನಿಮ್ಮ ತಂದೆ ತಾಯಿ ಮುಖ್ಯ ಅಲ್ಲ ಎಂದು ಹೇಳೋದಿಲ್ಲ, ಅದು ನೀವು ಹುಟ್ಟುತ್ತಲೇ ನಿಮ್ಮ ಜೊತೆಗೆ ಬಂದ ಸಂಬಂಧ, ಆದರೆ ಬುದ್ಧಿ ಬಂದಮೇಲೆ ನೀವು ಮಾಡಿಕೊಂಡ ಸಂಬಂಧ, ನಿಮ್ಮನ್ನು ನಂಬಿ ಬಂದ ಪತ್ನಿಗೂ ತಂದೆತಾಯಿಯಷ್ಟೇ ಬೆಲೆ ಕೊಡಿ.

Joint family Advantages: न समझे ज्वॉइंट फैमिली को सिरदर्द, एक नहीं बल्कि कई  सारे फायदे हैं संयुक्त परिवार के - advantages of living in a joint familyಅವಳ ಮಾತಿಗೇಕೆ ಬೆಲೆ ಇಲ್ಲ? ನಿಮ್ಮ ಕಷ್ಟದ ಬಗ್ಗೆ ಅವಳೊಂದು ಸೊಲ್ಯೂಷನ್ ಕೊಟ್ಟಾಗ, ಅದು ಸರಿಯಿದ್ರೂ ಅದನ್ನೇಕೆ ತೆಗೆದುಕೊಳ್ಳೋದಿಲ್ಲ. ಕೆಲವರಂತೂ ಗಂಭೀರ ಸಮಸ್ಯೆಗಳ ಸಂದರ್ಭದಲ್ಲಿ ಹೆಂಡತಿಯನ್ನು ಮಾತನಾಡೋದಕ್ಕೂ ಬಿಡೋದಿಲ್ಲ. ಇದು ಸರಿಯಾ?

How Female Centric Coworking Spaces Improve Working Environment for Women?ನಿಮಗೆ ಹೇಗೆ ನಿಮ್ಮ ತಂದೆ ತಾಯಿ ಬಂಧು ಬಳಗ ಮುಖ್ಯವೋ ಹಾಗೆ ಆಕೆಗೂ ಅವಳ ತವರು ಮನೆಯೇ ಜೀವ. ಅಮ್ಮನ ಮನೆಗೆ ಹೋಗ್ತೀನಿ ಅಂದಾಗ ತಡೆಯಬೇಡಿ, ನೀವು ಜೊತೆಯಲ್ಲಿ ಹೋಗಿಬನ್ನಿ. ನೀವು ಬರೀ ಅಳಿಯ ಅಲ್ಲ, ಅವಳು ಬರೀ ಸೊಸೆಯಲ್ಲ, ಎರಡೂ ಮನೆಗೂ ಇಬ್ಬರೂ ಮಕ್ಕಳು ನೆನಪಿರಲಿ.

Mother's Day – Sacred Space and Profound Place - Focus on the Familyಆಗಾಗ ಹೊರಗೆ ಕರೆದುಕೊಂಡು ಹೋಗೋದು, ಟ್ರಿಪ್ ಮಾಡೋದು, ಅಪರೂಪಕ್ಕೊಮ್ಮೆ ಸರ್ಪೈಸ್ ನೀಡೋದು, ಗಿಫ್ಟ್ ಕೊಡೋದು ಕಷ್ಟದ ಕೆಲಸ ಅಲ್ಲ.

Tips for Traveling as a Couple Without Killing Each Other - Mapping Meganಇದೆಲ್ಲಾ ಮಾತಿಗೆ ಹೇಳಬಹುದಷ್ಟೇ, ನಿಮ್ಮ ಸಂಸಾರ, ನಿಮ್ಮ ಅಂಡರ್‌ಸ್ಟಾಂಡಿಂಗ್ ಬೇರೆಯೇ ಇರಬಹುದು, ಹೆಣ್ಣುಮಕ್ಕಳಿಗೆ ಸಣ್ಣ ವಿಷಯಗಳೇ ಹೆಚ್ಚು ಖುಷಿ ನೀಡ್ತವೆ ಅನ್ನೋದನ್ನು ಮರೆಯಬೇಡಿ. ಆಕೆ ಖುಷಿಯಾಗಿದ್ದರೆ ನಿಮ್ಮ ಜೀವನದಲ್ಲಿ ಬೆಳಕು. ಆಕೆ ಇಲ್ಲದ ಮನೆಯನ್ನೊಮ್ಮೆ ಇಮ್ಯಾಜಿನ್ ಮಾಡಿನೋಡಿ? ಮದುವೆಯೂ ಒಂದು ಕೆಲಸವೇ, ನೀವು ಶ್ರಮ ಪಟ್ಟು ಉಳಿಸಿಕೊಂಡರೆ ಮದುವೆ ಉಳಿಯುತ್ತದೆ, ಪ್ರೀತಿ ಕಳೆದ ಮೇಲೆ ಅಲ್ಲಿ ಬರೀ ಹೊಂದಾಣಿಕೆ ಜೀವನ ಮಾತ್ರ ಉಳಿದಿರುತ್ತದೆ. ಇದರಲ್ಲಿ ಯಾವುದೇ ಸಾರ ಇಲ್ಲ!

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!