ದೇವಾಲಯಗಳ ಬಳಿ ಬಹುಮಹಡಿ ಕಟ್ಟಡಗಳನ್ನು ನಿರ್ಮಿಸಬಾರದು: ಯುಪಿ ಸಿಎಂ ಯೋಗಿ ಆದಿತ್ಯನಾಥ್‌ ಸೂಚನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಗೋರಖ್‌ಪುರ, ವಾರಣಾಸಿ ಮತ್ತು ಮಥುರಾ-ವೃಂದಾವನದಂತಹ ಧಾರ್ಮಿಕ ನಗರಗಳ ಪ್ರತಿಷ್ಠಿತ ದೇವಾಲಯಗಳ ಬಳಿ ಬಹುಮಹಡಿ ಕಟ್ಟಡಗಳನ್ನು ನಿರ್ಮಿಸಬಾರದು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ (Yogi Adityanath) ಸೂಚನೆ ನೀಡಿದ್ದಾರೆ.

ಧಾರ್ಮಿಕ ನಗರಗಳ ಪುರಾತನ ಮತ್ತು ಐತಿಹಾಸಿಕ ಸಾರವನ್ನು ಕಾಪಾಡುವ ಸಲುವಾಗಿ ಈ ತೀರ್ಮಾನ ಕೈಗೊಳ್ಳಲಾಗಿದೆ. ದೇವಾಲಯಗಳ ಎತ್ತರವನ್ನು ಮೀರಿದ ಯಾವುದೇ ರೀತಿಯ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡದಂತೆ ಆಡಳಿತ ವಲಯಕ್ಕೆ ಸೂಚಿಸಿದ್ದಾರೆ.

ಗೋರಖ್‌ಪುರ, ವಾರಣಾಸಿ ಮತ್ತು ಮಥುರಾ-ವೃಂದಾವನದ ಯೋಜಿತ ಅಭಿವೃದ್ಧಿಗಾಗಿ ಸಂಬಂಧಿಸಿ ಅಧಿಕಾರಿಗಳು ಸಿದ್ಧಪಡಿಸಿದ ಜಿಐಎಸ್ ಆಧಾರಿತ ಮಾಸ್ಟರ್ ಪ್ಲಾನ್-2031 ಅನ್ನು ಸಿಎಂ ಪರಿಶೀಲಿಸಿದರು. ಜೊತೆಗೆ ಅಗತ್ಯ ಮಾರ್ಗಸೂಚಿಗಳನ್ನು ನೀಡಿದರು.

ಧಾರ್ಮಿಕ ನಗರಗಳ ದೇವಾಲಯಗಳು ಮಹತ್ವದ ರಚನೆಗಳಿಗೆ ಹೆಸರುವಾಸಿಯಾಗಿವೆ. ಈ ದೇವಾಲಯಗಳು ಮತ್ತು ಪವಿತ್ರ ಕಟ್ಟಡಗಳ ಎತ್ತರವನ್ನು ಮೀರಿದ ರಚನೆಗಳಿಗೆ ಅನುಮತಿಸಬಾರದು. ನಿಯಂತ್ರಣಕ್ಕೆ ಮಾಸ್ಟರ್‌ ಪ್ಲ್ಯಾನ್‌ ಅಳವಡಿಸಬೇಕು. ನಾವು ಸಂಘಟಿತ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!