Saturday, December 2, 2023

Latest Posts

ದ್ವೇಷ ಭಾವನೆ ಮಾಡದೇ, ಪ್ರೀತಿ ವಿಶ್ವಾಸದಿಂದ ಕೆಲಸ ಮಾಡ್ತೀನಿ: ಆರ್. ಅಶೋಕ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಎಲ್ಲರ ಸಹಕಾರ, ವಿಶ್ವಾಸ ತೆಗೆದುಕೊಂಡು. ದ್ವೇಷ ಭಾವನೆ ಮಾಡದೇ, ಪ್ರೀತಿ ವಿಶ್ವಾಸದಿಂದ ಕೆಲಸ ಮಾಡ್ತೀನಿ ಎಂದು ನೂತನವಾಗಿ ಆಯ್ಕೆಯಾದ ವಿಪಕ್ಷ ನಾಯಕ ಆರ್. ಅಶೋಕ್ (R Ashok) ಹೇಳಿದ್ದಾರೆ.

ಶಾಸಕಾಂಗ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಆದೇಶ, ಎಲ್ಲರ ಸಹಕಾರದಿಂದ ನಾಯಕನಾಗಿ ಆಯ್ಕೆ ಮಾಡಿದ್ದಾರೆ. ನಾನು ನಾಯಕ ಆದರೂ 66 ಜನ ಶಾಸಕರು ನಾಯಕರೇ. ನೀವೆಲ್ಲರೂ ನನಗೆ ನಾಯಕರು. 66 ಶಾಸಕರು ಕಳೆದ ಅಧಿವೇಶನದಲ್ಲಿ ವಿಪಕ್ಷ ನಾಯಕರಾಗಿದ್ದರು. 10 ಜನ ಸಸ್ಪೆಂಡ್ ಮಾಡಿದ್ದರು ಎಂದರು.

ಯಡಿಯೂರಪ್ಪ (BS Yediyurappa) ಮಾರ್ಗದರ್ಶನ, ಬೊಮ್ಮಾಯಿ (Basavaraj Bommai) ಸಹಕಾರ ಪಡೆದು ಮುನ್ನಡೆಯಬೇಕು. ಸೋತಿದ್ದೇವೆ ಅನ್ನೋದು ಬಿಟ್ಟು ಮತ್ತೆ ಕಮಲ ಅರಳುತ್ತೆ. ನಮಗೆ ಲೋಕಸಭಾ ಚುನಾವಣೆ, ಬಿಬಿಎಂಪಿ, ಸ್ಥಳೀಯ ಸಂಸ್ಥೆ ಚುನಾವಣೆ ನಮಗೆ ಟಾಸ್ಕ್ ಇದೆ. ನರೇಂದ್ರ ಮೋದಿಯಂತಹ ನಾಯಕತ್ವ ಸಿಕ್ಕಿದೆ ಎಂದು ತಿಳಿಸಿದರು.

ಸಬ್ ಕಾ ಸಾಥ್… ಸಬ್ ಕಾ ವಿಕಾಸ್ ಮೋದಿ (Narendra Modi) ಹೇಳಿಕೆಯಂತೆ ಕೆಲಸ ಮಾಡೋಣ. ಭ್ರಷ್ಟಾಚಾರ ಕಾಂಗ್ರೆಸ್ ತೊಲಗಿಸೋಣ. ಮತ್ತೆ ಬಿಜೆಪಿ ಅಧಿಕಾರಕ್ಕೆ ತರೋಕೆ ಕೆಲಸ ಮಾಡೋಣ. ಕರ್ನಾಟಕದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರ (BJP Govt) ತರೋಕೆ ಕೆಲಸ ಮಾಡೋಣ ಎಂದು ಹೇಳಿ ಆಯ್ಕೆ ಮಾಡಿದ ಎಲ್ಲರಿಗೂ ಧನ್ಯವಾದಗಳನ್ನು ಆರ್. ಅಶೋಕ್ ಅರ್ಪಿಸಿದರು.

ಕಳೆದ 6 ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ (Congress Govt) ಭ್ರಷ್ಟಾಚಾರದಲ್ಲಿ ಮುಳುಗಿದೆ. ಸಿಎಂ ಮಗನೇ ವರ್ಗಾವಣೆ ದಂಧೆಯಲ್ಲಿ ತೊಡಗಿದ್ದಾರೆ. ಈ ಸ್ಥಿತಿಯಲ್ಲಿ 28 ಸ್ಥಾನ ಗೆಲ್ತೀವಿ. ಬೆಂಗಳೂರು ಗ್ರಾಮಾಂತರ ಸೇರಿ ಕನಕಪುರ ಸೇರಿ 28 ಕ್ಷೇತ್ರ ಗೆಲ್ತೀವಿ. ಎಲ್ಲರ ಸಹಕಾರ, ವಿಶ್ವಾಸ ತೆಗೆದುಕೊಂಡು ಕೆಲಸ ಮಾಡ್ತೀನಿ. ಬೆಳಗಾವಿ ಅಧಿವೇಶನದಲ್ಲಿ ನಮ್ಮ ಹೋರಾಟ ಶುರು ಮಾಡೋಣ. ದ್ವೇಷ ಭಾವನೆ ಮಾಡದೇ, ಪ್ರೀತಿ ವಿಶ್ವಾಸದಿಂದ ಕೆಲಸ ಮಾಡ್ತೀನಿ ಎಂದು ಹೇಳಿದರು.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!