ತನ್ನ ಅನುಮತಿ ಇಲ್ಲದೆ GRAP-4ನ್ನು ಸಡಿಲಿಸಬೇಡಿ: ದೆಹಲಿ ಸರಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದ ಸುಪ್ರೀಂ ಕೋರ್ಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೆಹಲಿ ಸರ್ಕಾರವನ್ನು ಸೋಮವಾರ ಸುಪ್ರೀಂ ಕೋರ್ಟ್ GRAP-4 ಅಡಿಯಲ್ಲಿ ಕಟ್ಟುನಿಟ್ಟಾದ ಮಾಲಿನ್ಯ ನಿಯಂತ್ರಣ ಕ್ರಮಗಳ ಅನುಷ್ಠಾನದಲ್ಲಿ ವಿಳಂಬವಾಗುತ್ತಿರುವ ಕುರಿತು ಪ್ರಶ್ನಿಸಿದ್ದು, ತನ್ನ ಪೂರ್ವಾನುಮತಿಯಿಲ್ಲದೆ ತಡೆಗಟ್ಟುವ ಕ್ರಮಗಳನ್ನು ಜಾರಿಗೆ ತರಲು ಅವಕಾಶ ನೀಡುವುದಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದೆ.

ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಅಗಸ್ಟಿನ್ ಜಾರ್ಜ್ ಮಸಿಹ್ ಅವರನ್ನೊಳಗೊಂಡ ಪೀಠವು , ರಾಷ್ಟ್ರೀಯ ಮಟ್ಟದಲ್ಲಿ ವಾಯು ಗುಣಮಟ್ಟ ಸೂಚ್ಯಂಕ (AQI) ಆತಂಕಕಾರಿ ಮಟ್ಟವನ್ನು ಮುಟ್ಟಿದ ನಂತರವೂ ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ (GRAP) ಹಂತ 4 ರ ಅಡಿಯಲ್ಲಿ ತಡೆಗಟ್ಟುವ ಕ್ರಮಗಳ ಅನುಷ್ಠಾನದಲ್ಲಿ ವಿಳಂಬವಾಗಿದೆ ಎಂದು ತಿಳಿಸಿದೆ.

ದೆಹಲಿ ಸರ್ಕಾರದ ಪರ ವಕೀಲರು ಸೋಮವಾರದಿಂದ ಜಿಆರ್ ಎಪಿ 4 ನೇ ಹಂತವನ್ನು ಜಾರಿಗೊಳಿಸಲಾಗಿದೆ. ಭಾರೀ ವಾಹನಗಳನ್ನು ರಾಷ್ಟ್ರ ರಾಜಧಾನಿಗೆ ಪ್ರವೇಶಿಸುವುದನ್ನು ನಿಷೇಧಿಸಲಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಎಕ್ಯುಐ 300 ಮತ್ತು 400 ರ ನಡುವೆ ತಲುಪಿದಾಗ, ಹಂತ 4 ನ್ನು ಜಾರಿಗೆ ತರಬಹುದು. ಮಾಲಿನ್ಯ ಮಟ್ಟಗಳ ಅಪಾಯಕಾರಿ ಏರಿಕೆಯನ್ನು ತಡೆಯಲು ನ್ಯಾಯಾಲಯವು ಯಾವ ಕ್ರಮಗಳನ್ನು ತೆಗೆದುಕೊಂಡಿದೆ ಎಂಬುದನ್ನು ತಿಳಿಯಲು ಬಯಸುತ್ತದೆ ಎಂದು ನ್ಯಾಯಪೀಠ ದೆಹಲಿ ಸರ್ಕಾರಕ್ಕೆ ಕೇಳಿದೆ.

ಈ ವೇಳೆ ದೆಹಲಿ ಸರ್ಕಾರದ ಪರ ವಕೀಲರು ಅಗತ್ಯ ವಸ್ತುಗಳನ್ನು ಸಾಗಿಸುವ ಅಥವಾ ಶುದ್ಧ ಇಂಧನ (LNG/CNG/BS-VI ಡೀಸೆಲ್/ಎಲೆಕ್ಟ್ರಿಕ್) ಬಳಸುವುದನ್ನು ಹೊರತುಪಡಿಸಿ ಯಾವುದೇ ಟ್ರಕ್‌ಗಳನ್ನು ದೆಹಲಿಯೊಳಗೆ ಬಿಡುತ್ತಿಲ್ಲ. EVಗಳು ಮತ್ತು CNG ಮತ್ತು BS-VI ಡೀಸೆಲ್ ವಾಹನಗಳನ್ನು ಹೊರತುಪಡಿಸಿ ದೆಹಲಿಯ ಹೊರಗೆ ನೋಂದಾಯಿಸಲಾದ ಅನಿವಾರ್ಯವಲ್ಲದ ಲಘು ವಾಣಿಜ್ಯ ವಾಹನಗಳನ್ನು ಸಹ ನಿಷೇಧಿಸಲಾಗಿದೆ ಎಂದು ತಿಳಿಸಿದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!