ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಜ್ ಯಾತ್ರೆಗೆ ಪಿಕ್ ಪಾಕೆಟ್ ಮಾಡುವವರು, ಭಿಕ್ಷಕರನ್ನು ಕಳಿಸಬೇಡಿ ಎಂದು ಸೌದಿ ಅರೇಬಿಯಾ ಪಾಕಿಸ್ತಾನಕ್ಕೆ ವಾರ್ನಿಂಗ್ ನೀಡಿದೆ.
ವಿದೇಶಾಂಗ ಸಚಿವಾಲಯದ ಸಭೆಯಲ್ಲಿ ಪಾಕಿಸ್ತಾನದ ಹಜ್ ಕೋಟಾದ ಬಗ್ಗೆ ಸೌದಿ ಅರೇಬಿಯಾ ಕಳವಳ ವ್ಯಕ್ತಪಡಿಸಿದೆ. ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಎಚ್ಚರಿಕೆ ವಹಿಸಿ ಎಂದು ಸೌದಿ ಅರೇಬಿಯಾ ಪಾಕ್‌ಗೆ ಹೇಳಿದೆ.
ಬಂಧಿತ ಭಿಕ್ಷುಕರಲ್ಲಿ ಶೇ.90 ರಷ್ಟು ಪಾಕಿಸ್ತಾನದವರಾಗಿದ್ದಾರೆ. ಉಮ್ರಾ ವೀಸಾದ ಮೇಲೆ ಸೌದಿಗೆ ಬಂದಿದ್ದಾರೆ. ಪದೇ ಪದೆ ಇಂಥವರನ್ನು ಕಳುಹಿಸಬೇಡಿ ಎಂದು ಪಾಕ್‌ಗೆ ಸೌದಿ ಅರೇಬಿಯಾ ಸೂಚನೆ ನೀಡಿದೆ.
ನಮ್ಮ ಜೈಲುಗಳಲ್ಲಿ ಪಾಕಿಸ್ತಾನದ ಕೈದಿಗಳೇ ತುಂಬಿದ್ದಾರೆ. ಮೆಕ್ಕಾದಲ್ಲಿ ಸಿಕ್ಕಿಬಿದ್ದ ಜೇಬುಗಳ್ಳರು ಕೂಡ ಪಾಕಿಸ್ತಾನದವರೇ ಎಲ್ಲರೂ ಉಮ್ರಾ ವೀಸಾದಲ್ಲಿ ಸೌದಿಗೆ ಬರುತ್ತಿದ್ದಾರೆ. ವಾಪಾಸ್ ಹೋಗುತ್ತಿಲ್ಲ. ಈ ಕಾರಣದಿಂದಾಗಿ ಪಾಕಿಸ್ತಾನದ ನುರಿತ ಕಾರ್ಮಿಕರನ್ನೂ ಯಾರೂ ನಂಬುತ್ತಿಲ್ಲ. ಉದ್ಯೋಗ ಪತ್ರ ನೀಡುತ್ತಿಲ್ಲ. ಹಾಗಾಗಿ ಈ ಬಾರಿ ಕಳ್ಳರನ್ನು ಭಿಕ್ಷುಕರನ್ನು ಕಳಿಸಬೇಡಿ ಎಂದಿದ್ದಾರೆ.