Monday, December 11, 2023

Latest Posts

ರಾಸಾಯನಿಕ ಮಿಶ್ರಿತ ಅರಿಶಿಣ-ಕುಂಕುಮ ಬಳಕೆಗೆ ನಿಷೇಧ: ಸ್ಪಷ್ಟನೆ ಕೊಟ್ಟ ಸಿಎಂ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಕಾಸಸೌಧ, ವಿಧಾನಸೌಧ ಬಹುಮಹಡಿ ಕಟ್ಟಡಗಳಲ್ಲಿ ರಾಸಾಯನಿಕಯುಕ್ತ ರಂಗೋಲಿ, ಅರಿಶಿಣ ಹಾಗೂ ಕುಂಕುಮಗಳನ್ನು ಆಯುಧ ಪೂಜೆ ಹಾಗೂ ದಸರಾ ಸಮಯದಲ್ಲಿ ಬಳಸಬಾರದು ಎಂದು ಸರ್ಕಾರ ಆದೇಶ ಹೊರಡಿಸಿದೆ.

ಆಯುಧ ಪೂಜೆ ಸಮಯದಲ್ಲಿ ಪ್ರತಿಯೊಬ್ಬರೂ ಕುಂಬಳಕಾಯಿ ಒಡೆಯುತ್ತಾರೆ, ಇದರೊಳಗೆ ರಾಸಾಯನಿಕ ತುಂಬಿದ ಬಣ್ಣಗಳು, ಅರಿಶಿಣ, ಕುಂಕುಮ ಹಾಗೂ ಸುಣ್ಣ ಬಳಕೆ ಮಾಡಲಾಗುತ್ತದೆ. ಆದರೆ ಈ ಬಾರಿ ಕೆಮಿಕಲ್ಸ್ ಬಳಕೆ ಸರ್ಕಾರ ನಿಷೇಧ ಹೇರಿದೆ.

ಕೆಲವರು ಈ ಆದೇಶವನ್ನು ವಿರೋಧಿಸಿದ್ದು, ಸಿಎಂ ಸಿದ್ದರಾಮಯ್ಯ ಈ ಹಿಂದೆಯೂ ಇವುಗಳನ್ನು ಬ್ಯಾನ್ ಮಾಡಲಾಗಿತ್ತು ಎಂದು ಹೇಳಿದ್ದಾರೆ. ವಿಕಾಸಸೌಧ, ವಿಧಾನಸೌಧ ಬಹುಮಹಡಿ ಕಟ್ಟಡಗಳಲ್ಲಿ ಆಯುಧಪೂಜೆ ಸಮಯದಲ್ಲಿ ಕಚೇರಿ ಒಳಗೂ, ಹೊರಗೂ, ಕಾರಿಡಾರ್‌ಗಳಲ್ಲಿಯೂ ಕೆಮಿಕಲ್ಸ್‌ಯುಕ್ತ ಬಣ್ಣ ಬಳಸುವಂತಿಲ್ಲ. ಈ ಬಣ್ಣ ತಿಂಗಳುಗಳಾದರೂ ನೆಲದಲ್ಲಿ ಹಾಗೆಯೇ ಉಳಿದಿರುತ್ತವೆ ಎಂದು ಹೇಳಲಾಗಿದೆ.

ಈ ಬಗ್ಗೆ ವಿರೋಧಗಳು ವ್ಯಕ್ತವಾದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದು,
ಈ ಹಿಂದೆ ಬಿಜೆಪಿ ಸರ್ಕಾರ ಕೂಡ ಇದೇ ನಿರ್ಣಯವನ್ನು ಕೈಗೊಂಡಿತ್ತು. ಸಂಪ್ರದಾಯದಂತೆ ನಾವು ಮುಂದುವರಿಸಿದ್ದೇವೆ. ಯಾವುದೇ ಅಪಪ್ರಚಾರಗಳಿಗೆ ಕಿವಿಗೊಡಬೇಡಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!