ಇತ್ತೀಚೆಗೆ ಯುವಪೀಳಿಗೆಯನ್ನೂ ಸೇರಿ ಹೆಚ್ಚು ಮಂದಿ ಹಾರ್ಟ್ ಅಟ್ಯಾಕ್‌ನಿಂದ ಜೀವ ಬಿಡುತ್ತಿದ್ದಾರೆ. ಆರೋಗ್ಯಕ್ಕಾಗಿ ಏನೆಲ್ಲಾ ಮಾಡುವ ನಾವು ಹೃದಯದ ಆರೋಗ್ಯದ ಬಗ್ಗೆ ಗಮನ ಹರಿಸೋದಿಲ್ಲ. ಹಾರ್ಟ್ ಅಟ್ಯಾಕ್ ಹತ್ತಿರ ಬರಬಾರದೆಂದರೆ ಈ ಐದು ಕೆಲಸಗಳನ್ನು ತಪ್ಪದೇ ಮಾಡಿ..
ವಾಕಿಂಗ್ ಮಾಡಿ, ವಾರಕ್ಕೆ ಮೂರು ದಿನವಾದರೂ ತಪ್ಪದೇ 45ನಿಮಿಷ ವಾಕಿಂಗ್ ಮಾಡಿ..
ಪ್ರೊಸೆಸ್ಡ್ ಆಹಾರ ಇಂದೇ ಬಿಟ್ಟುಬಿಡಿ, ಬೇಕರಿ, ಬರ್ಗರ್ ಪಿಝಾ ಒಟ್ಟಾರೆ ಮೈದಾ ಹಾಗೂ ಸಕ್ಕರೆ ಇರುವ ಆಹಾರವನ್ನು ತ್ಯಜಿಸಿ
ಅತೀ ಒತ್ತಡದ ಕೆಲಸ ನಿಮ್ಮದಾಗಿದ್ದರೆ ಸ್ಟ್ರೆಸ್ ಮ್ಯಾನೇಜ್‌ಮೆಂಟ್ ಬಗ್ಗೆ ಗಮನಹರಿಸಿ, ಪ್ರತಿದಿನ ಧ್ಯಾನದ ಅಭ್ಯಾಸ ಮಾಡಿಕೊಳ್ಳಿ.
ನಿಮ್ಮ ತೂಕದ ಬಗ್ಗೆ ಗಮನ ಇರಲಿ, ಅತಿಯಾದ ತೂಕ ಫ್ಯಾಟ್ ದೇಹಕ್ಕೆ ಸೇರದಂತೆ ನೋಡಿಕೊಳ್ಳಿ
ಪ್ರತಿದಿನ ನೀವು ಮಾಡುವ ಕೆಲಸದಿಂದ ಬ್ರೇಕ್ ತೆಗೆದುಕೊಳ್ಳಿ, ನಿಮ್ಮ ಮನಸ್ಸಿಗೆ ಬ್ರೇಕ್ ಬೇಕೇಬೇಕು.