ಹೆಣ್ಣುಮಕ್ಕಳಿಗೆ ತಮ್ಮ ಸೀರೆಯ ಮೇಲೆ ವಿಶೇಷವಾದ ಪ್ರೀತಿ ಇರುತ್ತದೆ. ಅದರಲ್ಲಿಯೂ ದುಬಾರಿಯಾದಂತಹ ರೇಷ್ಮೆ ಸೀರೆಗಳೆಂದರೆ ಪಂಚಪ್ರಾಣ. ರೇಷ್ಮೆ ಸೀರೆಗಳನ್ನು ಉಡುವ ನೀರೆಯರು ಅದನ್ನು ಹೇಗೆ ಇಟ್ಟುಕೊಳ್ಳಬೇಕು ಎಂದು ಕೂಡ ತಿಳಿದುಕೊಳ್ಳಬೇಕು.. ಡೀಟೇಲ್ಸ್ ಇಲ್ಲಿದೆ
ಯಾವುದಾದರೂ ಕಾರ್ಯಕ್ರಮಕ್ಕೆ ಹೋಗಿ ಬಂದ ಮೇಲೆ ನೀವು ಧರಿಸಿದ್ದ ಸಿಲ್ಕ್ ಸೀರೆಯನ್ನು ಹಾಗೇ ಮಡಚಿ ಇಡಬೇಡಿ. ಬರೋಬ್ಬರಿ 20 ನಿಮಿಷಗಳ ಕಾಲ ಒಣಗಿ ಹಾಕಿ.
ಸೀರೆಯ ಮೇಲೆ ಎಣ್ಣೆಯ ಕಲೆಗಳು ಬಿದ್ದಿದ್ದರೇ ಅದರ ಮೇಲೆ ಟಾಲ್ಕಮ್ ಪೌಡರ್ ಹಾಕಿ ಟೀಶೂ ಪೇಪರ್ನಿಂದ ಅಥವಾ ಕಾಟನ್ ಬಟ್ಟೆಯಿಂದ ಸರಿಯಾಗಿ ಒರೆಸಿಕೊಳ್ಳಿ.
ಇನ್ನೂ ಸಿಲ್ಕ್ ಸೀರೆಗಳಿಗೆ ಇಸ್ತ್ರಿ ಮಾಡುವಾಗ ಗಮನವಿರಲಿ. ಇಸ್ತ್ರಿ ಮಾಡುವಾಗ ಸೀರೆಯನ್ನು ಉಲ್ಟಾ ಮಾಡಿ ಹೊಡೆಯಬೇಕು. ಉಲ್ಟಾ ಮಾಡಿ ಇಸ್ತ್ರಿ ಮಾಡಿದರೆ ಬಣ್ಣ ಮಾಸುವುದಿಲ್ಲ. ಜೊತೆಗೆ ಸೀರೆಯ ಜರಿ ಹಾಳಾಗುವ ಸಂಭವ ಇರುತ್ತದೆ.
ಮೈಸೂರ್ ಸಿಲ್ಕ್ ಸೀರೆಯನ್ನು ಹಾಕಿದ ಬಳಿಕ ಭಿನ್ನ ವಿಭಿನ್ನವಾಗಿ ಮಡಚಿ ಇಡಬೇಕು. ಉದಾಹರಣೆಗೆ ಒಮ್ಮೆ ಸೀತಾ ಮಡಚಿಟ್ಟರೆ, ಮತ್ತೊಮ್ಮೆ ಉಲ್ಟಾ ಮಡಚಿ ಇಡಬೇಕು.
ಮುಖ್ಯವಾಗಿ ಬೀರುವಿನಲ್ಲಿ ಸಿಲ್ಕ್ ಸೀರೆಯನ್ನು ಇಡುವಾಗ ಯಾವುದಾದರೂ ಕಾಟನ್ ಬ್ಯಾಗ್ನಲ್ಲಿಯೇ ಮಡಚಿ ಇಡಿ. ಜೊತೆಗೆ ಫಂಗಸ್ನಿಂದ ತಪ್ಪಿಸಲು ಆ ಕಾಟನ್ ಬ್ಯಾಗ್ನಲ್ಲಿ ಒಂದು ಪಲಾವ್ ಎಲೆ, ಲವಂಗ ಹಾಗೂ ಏಲಕ್ಕಿ ಹಾಕಿ ಇಟ್ಟರೆ ಫಂಗಸ್ ಅಟ್ಯಾಕ್ ಆಗೋದಿಲ್ಲ.