ರಾಜ್ಯದ ಹಲವು ಜಿಲ್ಲೆಗಳಲ್ಲಿ ಈವರೆಗೂ ಮಳೆ ಬಂದಿಲ್ಲ, ಮಳೆಯಿಲ್ಲದೆ ಜನ ಹೈರಾಣಾಗಿದ್ದು, ಬಿಸಿಲಿನ ಹೊಡೆತಕ್ಕೆ ನಲುಗುತ್ತಿದ್ದಾರೆ. ಉಷ್ಣದಿಂದಾಗಿ ದೇಹದ ತಾಪಮಾನ ಕೂಡ ಹೆಚ್ಚಾಗುತ್ತದೆ. ಗಂಟಲಲ್ಲಿ ಹಾಗೂ ಬಾಯಲ್ಲಿ ಹುಣ್ಣು, ಪಾದಗಳು ಉರಿಯುವುದು, ಮಲದಲ್ಲಿ ರಕ್ತ, ಕೂದಲು ಉದುರುವುದು ಇವೆಲ್ಲವೂ ಉಷ್ಣದ ಲಕ್ಷಣವೇ ನೈಸರ್ಗಿಕವಾಗಿ ಉಷ್ಣವನ್ನು ಹೀಗೆ ಓಡಿಸಿ..
ಬಿಸಿಲಿನಿಂದ ಬಂದ ನಂತರ ಅಥವಾ ಬಿಸಿ ಅನಿಸಿದಾಗ ಬಕೆಟ್‌ನಲ್ಲಿ ತಣ್ಣನೆಯ ನೀರು ಹಾಕಿಕೊಂಡು ಕಾಲು ಇಟ್ಟು ಕುಳಿತುಕೊಳ್ಳಿ. ಬೇಕಿದ್ದಲ್ಲಿ ಐಸ್ ಕ್ಯೂಬ್ಸ್ ಸೇರಿಸಿ.
ಎಳನೀರು ರಿಫ್ರೆಶ್‌ಮೆಂಟ್‌ಗೆ ಅಷ್ಟೆ ಅಲ್ಲ, ದೇಹದ ಉಷ್ಣತೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ದಿನವೂ ಎಳನೀರು ಕುಡಿಯಿರಿ.
ಪುದೀನಾದಲ್ಲಿ ಮೆಂಥಾಲ್ ಅಂಶವಿದ್ದು ದೇಹವನ್ನು ತಂಪಾಗಿ ಇಡುತ್ತದೆ. ಪುದೀನಾ ಟೀ, ಜ್ಯೂಸ್ ಹೀಗೆ ದಿನವಿಡೀ ಸೇವನೆ ಮಾಡುತ್ತಲೇ ಇರಿ.
ಹೈಡ್ರೇಟಿಂಗ್ ಆಹಾರಗಳಾದ ಸೌತೆಕಾಯಿ, ಕಲ್ಲಂಗಡಿ, ಸ್ಟ್ರಾಬೆರಿ, ಮಜ್ಜಿಗೆ ಸೇವನೆ ಮಾಡಿ.
ಇದ್ದಕ್ಕಿದ್ದಂತೆಯೇ ದೇಹದಲ್ಲಿ ಹೀಟ್ ಹೆಚ್ಚಾಗಿದೆ ಎನಿಸುತ್ತಿದ್ದರೆ ಸಿತಾಲಿ ಯೋಗ ಟ್ರೈ ಮಾಡಿ.
ಬಿಸಿಲಿಗೆ ತಕ್ಕಂತ ಬಟ್ಟೆ ಹಾಕಿ, ಆದಷ್ಟು ಕಾಟನ್ ಬಟ್ಟೆಗಳನ್ನೇ ಹಾಕಿ.
ಖಾಲಿ ಹೊಟ್ಟೆಗೆ ಜೀರಿಗೆ ನೀರು ಕುಡಿಯುವುದು, ಮೆಂತ್ಯೆ ನೀರು ಕುಡಿಯಬಹದು.
ನೆತ್ತಿಗೆ ಹರಳೆಣ್ಣೆ ಹಚ್ಚಿ ಮಸಾಜ್ ಮಾಡಿ.