ಬೇಕಾಗುವ ಸಾಮಾಗ್ರಿ
ದಪ್ಪ ಅವಲಕ್ಕಿ ಕಾಲು ಕೆಜಿ, ತೆಂಗಿನ ಕಾಯಿ ತುರಿ ಒಂದು ಕಪ್, ದೊಡ್ಡ ಗಾತ್ರದ ಈರುಳ್ಳಿ 2, ಹಸಿಮೆಣಸಿನ ಕಾಯಿ 4, ಶುದ್ಧ ತೆಂಗಿನೆಣ್ಣೆ 5 ಟೀ ಸ್ಪೂನ್, ಉದ್ದಿನ ಬೇಳೆ2 ಟೀಸ್ಪೂನ್, ಸಾಸಿವೆ ಅರ್ಧ ಟೀ ಸ್ಪೂನ್, ಶೇಂಗಾ ಸ್ವಲ್ಪ, ಕರಿಬೇವು ಸ್ವಲ್ಪ, ರುಚಿಗೆ ಬೇಕಾದಷ್ಟು ಉಪ್ಪು
ಮಾಡುವ ವಿಧಾನ: ಅವಲಕ್ಕಿಯನ್ನು ನೀರಿನಲ್ಲಿ ನೆನೆಯಲು ಹಾಕಿ. ಈರುಳ್ಳಿಯನ್ನು ಸಿಪ್ಪೆ ತೆಗೆದು ಸಣ್ಣಗೆ ಹೆಚ್ಚಿಟ್ಟುಕೊಳ್ಳಿ. ಹಸಿಮೆಣಸನ್ನು ನಾಲ್ಕಾಗಿ ಕತ್ತರಿಸಿ. ಬಾಣಲೆಗೆ ಎಣ್ಣೆ ಹಾಕಿ ಒಲೆಯಲ್ಲಿ ಬಿಸಿಗಿಡಿ. ಬಿಸಿಯಾದ ಎಣ್ಣೆಗೆ ಶೇಂಗಾ ಹಾಕಿ ಫ್ರೈ ಮಾಡಿ. ನಂತರ ಹಸಿಮೆಣಸು ಹಾಗೂ ಈರುಳ್ಳಿ ಹಾಕಿ ಬಣ್ಣ ಬದಲುವ ತನಕ ಮಗುಚಿ. ಒಗ್ಗರಣೆಯ ಸಾಮಾಗ್ರಿಗಳನ್ನು ಸೇರಿಸಿ. ಜೊತೆಗೆ ಉಪ್ಪು ಸೇರಿಸಿ ಸರಿಯಾಗಿ ಮಿಶ್ರ ಮಾಡಿ. ನಂತರ ಅವಲಕ್ಕಿಯನ್ನು ಸೇರಿಸಿ ಸರಿಯಾಗಿ ಮಿಶ್ರ ಮಾಡಿ. ಕೆಳಗಿಳಿಸಿದ ನಂತರ ಕಾಯಿ ತುರಿ ಹಾಕಿ ಮಿಶ್ರ ಮಾಡಿ. ರುಚಿ ರುಚಿಯಾದ ದಪ್ಪ ಅವಲಕ್ಕಿಯ ಉಪ್ಪಿಟ್ಟು ರೆಡಿ