September 5, 2026
Saturday, September 5, 2026
spot_img

ನಿಮಗೂ ಫೋಟೊಗ್ರಾಫರ್‌ ಆಗುವ ಆಸೆ ಇದೆಯಾ? ಮೊದಲು ಈ ಬೇಸಿಕ್ಸ್‌ ಕಲಿತುಕೊಳ್ಳಿ

ಇಂದು ವಿಶ್ವ ಛಾಯಾಗ್ರಹಣ ದಿನ! ಪ್ರತೀ ವರ್ಷದ ಆಗಸ್ಟ್‌ 19ನ್ನು ಛಾಯಾಗ್ರಾಹಕನಿಗಾಗಿ ಆತನ ನೆಚ್ಚಿನ ಕ್ಯಾಮರಾಗಾಗಿ ಹಾಗೂ ಸಂಪೂರ್ಣ ಫೋಟೊಗ್ರಫಿಗಾಗಿ ಮೀಸಲಿಡಲಾಗುತ್ತದೆ. ಇದು ಅಂದುಕೊಂಡಷ್ಟು ಸಿಂಪಲ್‌ ಅಲ್ಲ, ಹಾಗೆ ಅಂದುಕೊಂಡಷ್ಟು ಕಷ್ಟವೂ ಅಲ್ಲ. ಫೋಟೊ ಎಲ್ಲರೂ ತೆಗೆಯುತ್ತಾರೆ, ಅಪ್‌ಲೋಡ್‌ ಮಾಡುತ್ತಾರೆ. ಆದರೆ ಸರಿಯಾದ ಆಂಗಲ್‌, ಸರಿಯಾದ ನೋಟ, ಸರಿಯಾದ ಎಕ್ಸ್‌ಪೋಶರ್‌ ಗೊತ್ತಾಗುವುದು ಫೋಟೊಗ್ರಾಫರ್‌ಗೆ ಮಾತ್ರ.

ಫೋಟೊಗಳು ಇಲ್ಲದೇ ನಮ್ಮ ಜೀವನ ಹೇಗಿದ್ದೀತು? ಈಗ ಫೋಟೊ ತೆಗೆದು ಅಪ್‌ಲೋಡ್‌ ಮಾಡಿ ಜನರ ಕಮೆಂಟ್‌ ಎಂಜಾಯ್‌ ಮಾಡುವ ಖುಷಿಯ ಬಗ್ಗೆ ಮಾತನಾಡುತ್ತಿಲ್ಲ. ನಿಮ್ಮ ಬಾಲ್ಯದ ಫೋಟೊಗಳನ್ನು ನೋಡಿದಾಗ ಆಗುವ ಖುಷಿ, ಕಸಿನ್ಸ್‌ ಜೊತೆ ಕುಣಿದ ಆ ಒಂದು ಫೋಟೊ ನೋಡಿದರೆ ಈಗಲೂ ನಗು ಬರುತ್ತದೆ. ಇನ್ನು ಶಾಲೆಯ ಆನ್ಯುಯಲ್‌ ಡೇನಲ್ಲಿ ಚಿತ್ರ ವಿಚಿತ್ರ ಬಟ್ಟೆ ತೊಟ್ಟು ನಾಟಕದಲ್ಲಿ ಅಭಿನಯಿಸಿದ ಫೋಟೊ ನೋಡಿದಾಗ ಡೈಲಾಗ್‌ ಸಮೇತ ಎಲ್ಲವೂ ನೆನಪಾಗಿ ಬಿಡುತ್ತದೆ. ನಮ್ಮ ಜೊತೆ ಇಲ್ಲದವರ ಫೋಟೊಗಳನ್ನು ನೋಡಿ ಕಣ್ಣಾಲಿಯಲ್ಲಿ ನೀರು ಜಿನುಗುತ್ತದೆ. ಇದೆಲ್ಲವೂ ಫೋಟೊಗಳ ಜಾದು. ನಮ್ಮನ್ನು ನಗಿಸಲು, ಅಳಿಸಲು ತಾಕತ್ತು ಇರುವ ಜೀವವಿಲ್ಲದ, ಆದರೆ ಸಂಪೂರ್ಣ ಜೀವಿಸುವ ವಸ್ತು ಫೋಟೊ!

ಛಾಯಾಗ್ರಹಣ ದಿನ ಯಾಕೆ?

ಫ್ರಾನ್ಸ್‌ನ ಜೋಸೆಫ್ ನಿಸೋಫರ್ ನೀಸೆಫ್, ಇಂಜಿನ್ ಸುಧಾರಣೆಯ ಪ್ರಯೋಗಗಳಲ್ಲಿ ನಿರತನಾಗಿದ್ದರು. ಇವರ ಪ್ರಯೋಗದ ಬೈ ಪ್ರಾಡಕ್ಟ್ ಆಗಿ‌ ಹುಟ್ಟಿಕೊಂಟಿದ್ದೇ ಫೋಟೋಗ್ರಫಿ. ದೃಶ್ಯಗಳನ್ನು ಸೆರೆಹಿಡಿಯುವ ಯಂತ್ರವನ್ನು ರೂಪಿಸಿ, ಮನೆಯ ಕಿಟಕಿಯ ಬಳಿ ನಿಂತು ಹೊರಗಡೆಯ ಕಟ್ಟಡವೊಂದರ ಫೋಟೋ ಕ್ಲಿಕ್ ಮಾಡಿದರು. ಆ ಕ್ಯಾಮೆರಾಗಳಲ್ಲಿದ್ದ ರೀಲ್ ತೆಗೆದು ಕ್ಲಿಕ್ಕಿಸಿದ ಫೋಟೋ ಡೆವಲಪ್ ಮಾಡಲು ಅವರಿಗೆ 8 ಗಂಟೆ ಹಿಡಿದಿತ್ತಂತೆ. ಕಡೆಗೂ ಆ ಫೋಟೋ ಸಿದ್ಧವಾಯಿತು. ಆ ಫೋಟೋವನ್ನು ಇಡೀ ಜಗತ್ತಿಗೆ ತೋರಿಸಿದ ದಿನವೇ 1826ರ ಆಗಸ್ಟ್ 19. ಹಾಗಾಗಿ, ಅದೇ ದಿನವನ್ನು ವಿಶ್ವ ಛಾಯಾಗ್ರಹಣದ ದಿನಾಚರಣೆ ಎಂದು ಕರೆಯಲಾಗುತ್ತದೆ.

ಫೋಟೊಗ್ರಾಫರ್‌ ಆಗುವ ಆಸೆ ಇದ್ದರೆ ಈ ಟಿಪ್ಸ್‌ ಸಹಾಯಕ್ಕೆ ಬಂದೀತು

ನಿಮ್ಮಲ್ಲಿರುವ ಸ್ಮಾರ್ಟ್‌ ಫೋನ್‌ ಸಹಾಯದಿಂದಲೇ ಫೋಟೊಗ್ರಫಿಯ ಬೇಸಿಕ್ಸ್‌ ಕಲಿಯಬಹುದು. ಇದಕ್ಕಾಗಿಯೇ ಹಲವು ಯುಟ್ಯೂಬ್‌ ವಿಡಿಯೋಗಳಿವೆ ಅದನ್ನು ಫಾಲೋ ಮಾಡುತ್ತಾ ಫೋಟೊ ಕ್ಲಿಕ್ಕಿಸುವುದನ್ನು ಕಲಿತುಬಿಡಿ. ಇನ್ನು ಮೊದಲು ಎಕ್ಸ್‌ಪೋಶರ್‌ ಟ್ರಯಾಂಗಲ್‌ ಬಗ್ಗೆ ತಿಳಿದುಕೊಳ್ಳಿ. ಶಟರ್‌ ಸ್ಪೀಡ್‌, ಐಎಸ್‌ಒ ಹಾಗೂ ಬ್ರೈಟ್‌ನೆಸ್‌ ಕಂಟ್ರೋಲ್‌ ಬಗ್ಗೆ ತಿಳಿದುಕೊಳ್ಳಿ.

ಸೂರ್ಯ ಯಾವ ಕಡೆಗೆ ಇದ್ದಾನೆ, ಯಾವ ಆಂಗಲ್‌ನಿಂದ ಫೋಟೊ ತೆಗೆದರೆ ಚೆನ್ನಾಗಿ ಕಾಣುತ್ತದೆ ಅರಿತುಕೊಳ್ಳಿ. ಸೂರ್ಯ ಉದಯವಾದ ಕೆಲ ಸಮಯ ಹಾಗೂ ಸೂರ್ಯಾಸ್ತವಾಗು ಸಮಯದಲ್ಲಿ ಸಿಗುವ ಅಂದದ ಬೆಳಕು ನಿಮ್ಮ ಫೋಟೊಗೆ ಬೆಸ್ಟ್‌.

ಮೊದಲು ನಿಮ್ಮ ಕೈ ಸ್ಟೆಡಿಯಾಗಿರಬೇಕು. ತೂಕದ ಕ್ಯಾಮರಾ ಹೊರಲು ಕೈಗೆ ಸ್ಟ್ರೆಂಥ್‌ ಬೇಕು ಅದನ್ನು ರೂಢಿ ಮಾಡಿಕೊಳ್ಳಿ. ಕನ್ಸಿಸ್ಟೆನ್ಸಿ ಜೊತೆಗೆ ಸಾವಿರಾರು ಫೋಟೊ ತೆಗೆಯಿರಿ, ಚೆನ್ನಾಗಿಲ್ಲ ಎಂದರೆ ಡಿಲೀಟ್‌ ಮಾಡಿ. ಮತ್ತೆ ಫೋಟೊ ತೆಗೆಯಿರಿ ಡಿಲೀಟ್‌ ಮಾಡಿ. ಪ್ರಾಕ್ಟೀಸ್‌ ಮಾಡಿ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !