ಅಂಗಡಿಗೆ ಹೋಗಿ ಬಟ್ಟೆ ತೆಗೆದುಕೊಳ್ಳೋದೆ ಒಂದು ಖುಷಿ, ಮದುವೆ ಹತ್ತಿರ ಬಂತೆಂದರೆ ಮನೆಯವರೆಲ್ಲ ಕೂಡಿ ಬಟ್ಟೆ ಸೆಲೆಕ್ಷನ್ ಮಾಡೋದಿಲ್ವಾ? ಅಲ್ಲಿ ಎಷ್ಟೆಲ್ಲಾ ಖುಷಿ ಇರುತ್ತದೆ, ಈ ಮುಂಚೆ ಹಬ್ಬ ಹರಿದಿನಗಳಿಗೂ ಅಂಗಡಿಗೇ ಹೋಗಿ ಬಟ್ಟೆ ಕೊಳ್ಳೋದೇ ಒಂದು ಖುಷಿ, ಆದರೆ ಈಗ ಹಾಗಿಲ್ಲ, ಆನ್‌ಲೈನ್‌ನಲ್ಲಿಯೇ ಬಟ್ಟೆ ಖರೀದಿ ಮಾಡಲಾಗುತ್ತದೆ. ಆದರೆ ಆನ್‌ಲೈನ್‌ನಲ್ಲಿ ಕೆಲ ಅಡ್ವಾಂಟೇಜ್ ಇದೆ, ಹಾಗೇ ಜಾಗರೂಕರೂ ಆಗಿರಬೇಕು, ಶಾಪಿಂಗ್ ಮುನ್ನ ಈ ಟಿಪ್ಸ್ ಗಮನದಲ್ಲಿಡಿ..
- ಆನ್‌ಲೈನ್‌ನಲ್ಲಿ ಸಿಗುವಷ್ಟು ಆಯ್ಕೆಗಳು ಆಫ್‌ಲೈನ್‌ನಲ್ಲಿ ಸಿಗೋದಿಲ್ಲ ಆದರೆ ಬಟ್ಟೆಯ ಕ್ವಾಲಿಟಿ ಬಗ್ಗೆ ಗಮನ ಇರಲಿ, ನಿಮಗೆ ಯಾವ ಕ್ವಾಲಿಟಿ ಬಟ್ಟೆ ಬೇಕೋ ಅದನ್ನೇ ಆಯ್ಕೆ ಮಾಡಿ.
- ಆನ್‌ಲೈನ್‌ನಲ್ಲಿ ಕೆಲ ಬ್ರ್ಯಾಂಡ್‌ಗಳ ಬಟ್ಟೆಗಳಲ್ಲಿ ಸೈಝ್ ವಿಭಿನ್ನವಾಗಿ ಇರುತ್ತದೆ. ಒಂದು ಬ್ರ್ಯಾಂಡ್‌ನಲ್ಲಿ ಎಮ್ ಸೈಝ್ ಆದರೆ ಇನ್ನೊಂದು ಬ್ರ್ಯಾಂಡ್‌ನಲ್ಲಿ ಎಕ್‌ಎಲ್ ಕೂಡ ಟೈಟ್ ಆಗಬಹುದು. ಎಲ್,ಎಸ್ ಸೈಝ್ ನೋಡದೇ ಸೆಂಟಿಮೀಟರ್‌ನಲ್ಲಿ ಬರೆದ ಸೈಝ್ ನೋಡಿ ಬಟ್ಟೆ ಖರೀದಿಸಿ.
- ಆನ್‌ಲೈನ್‌ನಲ್ಲಿ ಲಕ್ಷಾಂತರ ವೆಬ್‌ಸೈಟ್‌ಗಳಿವೆ, ನಂಬಿಕರ್ಹ ವೆಬ್‌ಸೈಟ್‌ನಿಂದ ಮಾತ್ರ ಬಟ್ಟೆ ತರಿಸಿ. ಯಾವುದೋ ವೆಬ್‌ನಿಂದ ತರಿಸಿ ಬಟ್ಟೆಯೂ ಚೆನ್ನಾಗಿರದೆ ವಾಪಾಸ್ ಕೊಡಲೂ ಆಗದೆ ಹಣ ಕಳೆದುಕೊಳ್ಳಬೇಡಿ.
- ಯಾವುದೇ ಬ್ರ್ಯಾಂಡ್ ಆಗಿರಲಿ, ಎಕ್ಸ್‌ಚೇಂಜ್ ಹಾಗೂ ರಿಟರ್ನ್ ಆಪ್ಷನ್ ಇದೆಯಾ ಗಮನಿಸಿ, ಮನೆಗೆ ಬಂದ ಮೇಲೆ ಪ್ರಾಡಕ್ಟ್ ಚೆನ್ನಾಗಿಲ್ಲದಿದ್ದರೂ ಇಟ್ಟುಕೊಳ್ಳಬೇಕಾದ ಪರಿಸ್ಥಿತಿ ಬಂದೀತು.
- ಯಾವಾಗಲೂ ಕ್ಯಾಶ್ ಆನ್ ಡೆಲಿವರಿ ಆಪ್ಷನ್ ನೀಡಿ. ಆಗ ಪ್ರಾಡಕ್ಟ್ ಮನೆಗೆ ಬಂದರೆ ದುಡ್ಡು ಕೊಡಬಹುದು, ಪ್ರಾಡಕ್ಸ್ ಬಾರದೇ ಹೋದರೆ, ಅಥವಾ ನಿಮ್ಮ ಸಮಯಕ್ಕೆ ಬಾರದೇ ಹೋದರೆ, ದುಡ್ಡು ನಿಮ್ಮ ಕೈಲಿ ಇರೋದಿಲ್ಲ, ಹಾಗೇ ಪ್ರಾಡಕ್ಟ್ ಕೂಡ. ಸದಾ ಕ್ಯಾಶ್ ಆನ್ ಡೆಲಿವರಿ ಆಪ್ಷನ್ ನೀಡಿದ್ರೆ ಬೇಡ ಎಂದಾಗ ಕ್ಯಾನ್ಸಲ್ ಮಾಡಿಬಿಡಬಹುದು.