PARENTING | ಮಕ್ಕಳೆದುರಲ್ಲಿ ಡ್ರೆಸ್ ಚೇಂಜ್ ಮಾಡ್ತೀರಾ? ತಪ್ಪದೇ ಇದನ್ನು ಓದಿ..

ಎಷ್ಟೋ ಮಂದಿ ಮಕ್ಕಳೆದುರು ಬಟ್ಟೆ ಬದಲಾಯಿಸೋದು, ಮಕ್ಕಳ ಜೊತೆ ಸ್ನಾನ ಮಾಡೋದು ಮಾಮೂಲಿ ಅಭ್ಯಾಸವನ್ನು ಮಾಡಿಕೊಂಡಿರುತ್ತಾರೆ. ಇದರಲ್ಲಿ ಹೆದರುವಂಥದ್ದು ಏನೂ ಇಲ್ಲ, ಮಕ್ಕಳ ಎದುರು ಬಟ್ಟೆ ಬದಲಾಯಿಸಬೇಕಾ? ಅಥವಾ ಇದ್ರಿಂದ ಸಮಸ್ಯೆ ಇದೆಯಾ? ನೋಡೋಣ ಬನ್ನಿ..

ಮಕ್ಕಳೆದುರು ಬಟ್ಟೆ ಬದಲಾವಣೆ ಅಥವಾ ಮಕ್ಕಳ ಜೊತೆಯೇ ಸ್ನಾನ ಮಾಡುವಾಗ ಮಕ್ಕಳಿಗೆ ದೇಹದ ಬಗ್ಗೆ ಕುತೂಹಲ ಮೂಡುತ್ತದೆ, ತಮ್ಮ ದೇಹಕ್ಕೂ ದೊಡ್ಡವರ ದೇಹಕ್ಕೂ ಏನೆಲ್ಲಾ ವ್ಯಾತ್ಯಾಸ ಇದೆ, ಹೀಗ್ಯಾಕೆ ಎನ್ನುವ ಪ್ರಶ್ನೆಗಳು ಬರುತ್ತವೆ. ಅವರ ಪ್ರಶ್ನೆಗಳಿಗೆ ನೀವು ಉತ್ತರಿಸೋದಕ್ಕೆ ತಯಾರಿದ್ದೀರಾ? ಮುಜುಗರವಿಲ್ಲದಂತೆ ಉತ್ತರಿಸಿ, ಮಕ್ಕಳದ್ದು ಕಲಿಯುವ ವಯಸ್ಸು.

ಮಕ್ಕಳ ಮುಂದೆ ನೀವು ನಗ್ನರಾದ ಮೊದಲನೇ ದಿನ ನಿಮ್ಮನ್ನು ಗಮನಿಸುತ್ತಾರೆ, ತದನಂತರ ಎಲ್ಲವೂ ಮಾಮೂಲು ಎನ್ನುವಂತೆ ಸುಮ್ಮನಾಗುತ್ತಾರೆ. ಆದರೆ ಇದರಿಂದ ಒಂದು ಸಮಸ್ಯೆ ಇದೆ, ಬೇರೆಯವರ ಎದುರು ನಗ್ನರಾಗುವುದು ದೊಡ್ಡ ವಿಷಯವಲ್ಲ, ತಪ್ಪಿಲ್ಲ ಎಂದು ಮಕ್ಕಳಲ್ಲಿ ಭಾವನೆ ಬೆಳೆಯುವ ಸಾಧ್ಯತೆ ಇದೆ.

ಇಷ್ಟೇ ಅಲ್ಲ ಮಕ್ಕಳಿಗೆ ಇಷ್ಟವಿಲ್ಲದಿದ್ದರೂ ಹಿಂಸೆ ಕೊಟ್ಟು ಮುದ್ದು ಮಾಡುವುದು, ಬೇಡವೆಂದರೂ ತುಟಿಗೆ ಮುತ್ತು ಕೊಡುವುದು ತಪ್ಪು, ಇನ್ಯಾರೋ ಈ ರೀತಿ ಮಾಡಿದರೆ ತಂದೆ ತಾಯಿಯ ರೀತಿ ಇದು ಕೂಡ ಮಾಮೂಲು ಎನ್ನುವ ಭಾವನೆ ಮಕ್ಕಳಿಗೆ ಬರುತ್ತದೆ.

ಹಾಲ್‌ನಲ್ಲಿ, ಜನರಿದ್ದರೂ ಅಲ್ಲೇ ಮಕ್ಕಳ ಬಟ್ಟೆ ಬದಲಾಯಿಸುವುದು, ಎಣ್ಣೆ ಹಚ್ಚಿ ಬರಿಮೈಯಲ್ಲಿ ಮಕ್ಕಳನ್ನು ಓಡಾಡಿಸುವುದು ಮಾಮೂಲಿ, ಆದರೆ ಗಮನಿಸಿ, ಈ ರೀತಿ ನಡೆದುಕೊಳ್ಳುವುದು ಒಕೆ ಎಂದು ಮಕ್ಕಳಿಗೆ ಅನ್ನಿಸಿದರೆ ಮುಂದೊಂದು ದಿನ ಸಮಸ್ಯೆ ಬರುತ್ತದೆ.

ಈ ವಿಷಯಗಳನ್ನು ಎಲ್ಲ ಪೋಷಕರೂ ಒಪ್ಪುವುದಿಲ್ಲ, ನಾವು ಸ್ನಾನ ಮಾಡುವ ಮುನ್ನ ಮಕ್ಕಳಿಗೆ ಹಾಗೇ ಸ್ನಾನ ಮಾಡಿಸಿ ಕಳುಹಿಸುತ್ತೀವಿ, ಅದರಲ್ಲಿ ತಪ್ಪೇನಿದೆ? ಎಲ್ಲ ಮಕ್ಕಳು ಹೀಗೆ ಬೆಳೆದಿರುತ್ತಾರೆ, ಈ ಆಲೋಚನೆ ನಿಮ್ಮದೂ ಆಗಿದ್ದರೆ, ಮಕ್ಕಳು ಖಾಸಗಿ ಅಂಗಗಳ ಬಗ್ಗೆ ಕುತೂಹಲ ತೋರಿಸಿದಾಗ ಸೂಕ್ತ ರೀತಿಯಲ್ಲಿ ಉತ್ತರ ನೀಡಿ.

ದೇಹದ ಎಲ್ಲ ಅಂಗಗಳಿಗೂ ಹೇಗೆ ಕೆಲಸವಿದೆಯೋ, ಅದೇ ರೀತಿ ಖಾಸಗಿ ಅಂಗಗಳಿಗೂ ಯಾವ ಕೆಲಸ ಇದೆ ಎನ್ನುವ ಮಾಹಿತಿ ನೀಡಿ. ಮಕ್ಕಳನ್ನು ಬೆಳೆಸುವ ರೀತಿ ಪ್ರತಿಯೊಂದು ಮನೆಯಲ್ಲೂ ವಿಭಿನ್ನವಾಗಿರುತ್ತದೆ. ಆದರೆ ಈಗಿನ ಮಕ್ಕಳಿಗೂ ನೀವು ಮಕ್ಕಳಿದ್ದಾಗ ಇದ್ದದ್ದಕ್ಕೂ ಭಾರೀ ಬದಲಾವಣೆ ಇದೆ, ಕಾಲ ಬದಲಾಗಿದೆ ಗಮನದಲ್ಲಿರಲಿ!

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!