ಶೀತ,ಜ್ವರಕ್ಕೆ ವೈದ್ಯರ ಸಲಹೆ ಇಲ್ಲದೆ ಮಾತ್ರೆ ಕುಡೀತೀರಾ? ಇದನ್ನು ಓದಿ ನೋಡಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಸಾಮಾನ್ಯವಾಗಿ ತಲೆನೋವು, ಗಂಟಲುನೋವು, ಶೀತ ಹಾಗೂ ಕೆಮ್ಮು ಸಮಸ್ಯೆ ಇದ್ದರೆ ಎಷ್ಟೋ ಮಂದಿ ವೈದ್ಯರ ಬಳಿ ಹೋಗದೇ ಸೀದ ಮೆಡಿಕಲ್ಸ್‌ಗೆ ತೆರಳಿ ಮಾತ್ರೆ ತೆಗೆದುಕೊಳ್ಳುತ್ತಾರೆ. ಇದರಿಂದ ಎಷ್ಟೋ ಬಾರಿ ಆರೋಗ್ಯ ಸುಧಾರಣೆಯೂ ಆಗುತ್ತದೆ. ಆದರೆ ಪ್ರತೀ ಬಾರಿ ಹಾಗೆ ಆಗೋದಿಲ್ಲ. ಕೆಲವರ ದೇಹಕ್ಕೆ ಕೆಲವು ಮಾತ್ರೆಗಳು ಒಗ್ಗೋದಿಲ್ಲ. ಮೆಡಿಕಲ್‌ ಸ್ಟೋರ್‌ನಲ್ಲಿ ಮಾತ್ರೆ ತೆಗೆದುಕೊಳ್ಳೋರು ನೀವಾದರೆ ಈ ಸ್ಟೋರಿ ನೋಡಿ..

ಇರಾಕ್‌ನ ಮಹಿಳೆಯೊಬ್ಬರು ಐಬುಪ್ರೊಫೆನ್‌ ಎನ್ನುವ ಮಾತ್ರೆ ಸೇವನೆ ಮಾಡಿದ್ದಾರೆ. ಶೀತ ಕೆಮ್ಮು ಇದ್ದ ಕಾರಣ ಪೇನ್‌ಕಿಲ್ಲರ್‌ ಬಳಸಿದ್ದಾರೆ.

ಇದರಿಂದಾಗಿ ಅವರ ದೇಹದಲ್ಲಿ ಸಾಕಷ್ಟು ರಿಯಾಕ್ಷನ್ಸ್‌ ಆಗಿವೆ. ಮುಖ ಹಾಗೂ ಕಣ್ಣು ಕೆಂಪಾಗಿದ್ದು, ಮುಖದ ಚರ್ಮದ ಪ್ಯಾಟರ್ನ್‌ ಬದಲಾಗಿದೆ.

Woman, 45, suffers horrific and rare reaction to IBUPROFEN - causing snake-like  scales on her face and discharge to ooze from her EYES | Daily Mail Onlineಸ್ವಲ್ಪ ಹೊತ್ತಿನ ನಂತರ ಇಡೀ ಮುಖ ಹಾವಿನ ಚರ್ಮದಂತೆ ಆಗಿದೆ, ಜೊತೆಗೆ ಕಣ್ಣಿನಿಂದ ರಕ್ತ ಸುರಿದಿದೆ. ಇಷ್ಟೇ ಅಲ್ಲದೆ ತುಟಿಯಿಂದ ಹಳದಿ ದ್ರವ್ಯವೊಂದು ಹೊರಬಂದಿದೆ.

ಸದ್ಯ ಅವರನ್ನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಈ ಮಾತ್ರೆಗಳು ಎಷ್ಟೋ ಮಂದಿಗೆ ಸಹಾಯವಾಗಿದೆ. ಆದರೆ ಕೆಲವರ ದೇಹಕ್ಕೆ ಅಥವಾ ಬೇರೆ ಹೆಲ್ತ್‌ ಕಂಡೀಷನ್‌ ಜೊತೆ ರಿಯಾಕ್ಟ್‌ ಆಗುತ್ತದೆ.

ಈ ಸಮಸ್ಯೆಯಲ್ಲಿ ಸ್ಟೀವನ್‌ ಜಾನ್ಸನ್‌ ಸಿಂಡ್ರೋಮ್‌ ಎಂದು ಕರೆಯಲಾಗುತ್ತದೆ. ಮಹಿಳೆ ಆರೋಗ್ಯ ಸ್ಥಿತಿ ಸುಧಾರಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!