HEALTH| ಬೆಳಗ್ಗೆ ಬ್ರೇಕ್‌ಫಾಸ್ಟ್‌ಗೆ ಇವುಗಳನ್ನು ತಿನ್ನುತ್ತೀರಾ? ಅನಾರೋಗ್ಯ ಖಂಡಿತ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬೆಳಗ್ಗೆ ಒಳ್ಳೆಯ ಆರೋಗ್ಯಕರ ತಿಂಡಿ ಮನಸ್ಸಿಗೂ..ದೇಹಕ್ಕೂ ಹಿತ. ಬದಲಾದ ಜೀವನ ಶೈಲಿಯಲ್ಲಿ ಸಿಕ್ಕ ಸಿಕ್ಕ ಪದಾರ್ಥಗಳನ್ನು ತಿಂದು ಆತುರ ಆತುರವಾಗಿ ಸಮಯದ ಜತೆ ಓಡುವ ಹವ್ಯಾಸ ಹೆಚ್ಚಿನವರಲ್ಲಿ ರೂಢಿಯಾಗಿದೆ. ಹೀಗೆ ತಿನ್ನುವ ಪದಾರ್ಥಗಳಲ್ಲಿ ಕೆಲ ಆಹಾರ ಪದಾರ್ಥಗಳನ್ನು ಬೆಳಗ್ಗೆ ತಿಂಡಿಗೆ ಸೇವಿಸಬಾರದು. ಅವು ಯಾವುವೆಂದು ನೋಡೋಣ.

  •  ಸಿಟ್ರಸ್ ಹಣ್ಣುಗಳನ್ನು ತಿನ್ನುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಆದರೆ ಬೆಳಗ್ಗೆಯೇ ಹಣ್ಣಿನ ರಸವನ್ನು ಕುಡಿದರೆ ಅಲ್ಸರ್, ಎದೆಯುರಿ, ಗ್ಯಾಸ್, ಅಸಿಡಿಟಿ, ಜೀರ್ಣಕ್ರಿಯೆ ಸಮಸ್ಯೆ ಕಾಡಬಹುದು.
  • ಮಸಾಲೆಯುಕ್ತ ಆಹಾರವನ್ನು ತಿನ್ನಲು ಇಷ್ಟಪಡುತ್ತಾರೆ. ಇದು ಜೀರ್ಣಕಾರಿ ಸಮಸ್ಯೆ, ಎದೆಯುರಿ, ಹೊಟ್ಟೆ ನೋವು ಮತ್ತು ಗ್ಯಾಸ್‌ನಂತಹ ಸಮಸ್ಯೆಗಳು ಎದುರಾಗುತ್ತವೆ.
  • ಕೆಲವರು ಉಪಾಹಾರಕ್ಕಾಗಿ ಬ್ರೆಡ್ ಮತ್ತು ಜಾಮ್ ತೆಗೆದುಕೊಳ್ಳುತ್ತಾರೆ.ಇದು ಪ್ರತಿದಿನ ಒಳ್ಳೆಯದಲ್ಲ. ಬ್ರೆಡ್ ಮತ್ತು ಜಾಮ್  ತಿನ್ನುವುದರಿಂದ ಮೆದುಳಿನ ಕಾರ್ಯವು ಕಡಿಮೆಯಾಗುತ್ತದೆ. ದೇಹಕ್ಕೆ ಬೇಕಾದ ಪೋಷಕಾಂಶಗಳು ಸಿಗದೆ ಆಯಾಸ ಬರುವ ಸಾಧ್ಯತೆ ಹೆಚ್ಚು.
  • ಬೆಳಗಿನ ತಿಂಡಿಗೆಂದು ಕೆಲಚರು ಪ್ಯಾಕ್ ಮಾಡಿರುವ ಜ್ಯೂಸ್ ಕುಡಿಯುತ್ತಾರೆ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಏಕೆಂದರೆ ಅದನ್ನು ಸಂರಕ್ಷಿಸಲು ರಾಸಾಯನಿಕಗಳನ್ನು ಸೇರಿಸುವುದರಿಂದ ಆರೋಗ್ಯಕ್ಕೆ ಹಿತವಲ್ಲ.
  • ಬೆಳ್ಳಂಬೆಳಗ್ಗೆಯೇ ಕುರುಕುಲು ತಿಂಡಿ ಆರೋಗ್ಯಕ್ಕೆ ಒಳ್ಳೆಯದಲ್ಲ, ಅಚ್ಚುಕಟ್ಟಾಗಿ ಬೇಯಿಸಿದ ಆಹಾರ ಆರೋಗ್ಯಕ್ಕೆ ಸೂಕ್ತ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!