HEALTH | ಏನೇ ಮಾಡಿದ್ರೂ ಬೆಳಗ್ಗೆ ಏಳೋಕೆ ಕಷ್ಟಪಡ್ತೀರಾ? ಬೇಗ ಎದ್ರೆ ಎಷ್ಟೆಲ್ಲಾ ಲಾಭ ಇದೆ ಗೊತ್ತಾ ?

ಬೆಳಗ್ಗೆ ಬೇಗ ಏಳೋದು ಒಳ್ಳೆಯದು, ಆದರೆ ಎಲ್ಲರಿಗೂ ಇದು ಸಾಧ್ಯವಾಗೋದಿಲ್ಲ. ರಾತ್ರಿ ಕೆಲಸ ಮುಗಿಸಿ ಲೇಟಾಗಿ ಬಂದವರು, ಟ್ರಾವೆಲ್ ಮಾಡೋರು, ಹಿಂದಿನ ದಿನ ಸರಿಹೊತ್ತಿನವರೆಗೂ ಸಿನಿಮಾ ನೋಡೋರು, ಮಾಮೂಲಿಯಾಗಿಯೇ ಹೆಚ್ಚು ನಿದ್ದೆ ಬೇಕಿರೋರು ಹೀಗೆ ಏನೋ ಒಂದು ಕಾರಣದಿಂದ ಏಳೋದಕ್ಕೆ ಸಾಧ್ಯ ಆಗೋದಿಲ್ಲ. ಬೆಳಗ್ಗೆ ಬೇಗ ಎದ್ರೆ ಏನಾಗುತ್ತದೆ ನೋಡಿ..

  • ಹೆಚ್ಚು ಸಮಯ ಸಿಗುತ್ತದೆ, ಟೈಮೇ ಇಲ್ಲ ತಿಂಡಿ ಬೇಡ, ಟೈಮೇ ಇಲ್ಲ ನಾಳೆ ಮಾಡ್ತೀನಿ ಅನ್ನೋದು ತಪ್ಪತ್ತೆ
  • ವ್ಯಾಯಾಮ ಮಾಡೋ ಇಷ್ಟ ಇದೆ ಆದರೆ ಸಮಯ ಆಗ್ತಿಲ್ಲ ಅಂದರೆ ಸ್ವಲ್ಪ ಸಮಯ ಬೇಗ ಎದ್ದು ನೋಡಿ
  • ಟ್ರಾಫಿಕ್ ಕಥೆ ಗೊತ್ತೇ ಇದೆ, ಸ್ವಲ್ಪ ಬೇಗ ಎದ್ದು ಬೇಗ ಹೊರಟರೆ ಟ್ರಾಫಿಕ್‌ನಲ್ಲಿ ಸಿಕ್ಕಿಹಾಕಿಕೊಳ್ಳದೆ ನೆಮ್ಮದಿಯಾಗಿ ಆಫೀಸ್‌ಗೆ ಹೋಗಬಹುದು.
  • ಬೆಳಗ್ಗೆ ಬೇಗ ಎದ್ದು ದಣಿದರೆ ರಾತ್ರಿ ಚೆನ್ನಾಗಿ ನಿದ್ದೆ ಬರುತ್ತದೆ.
  • ಬೆಳಗ್ಗೆ ಬೇಗ ಎದ್ದವರಿಗೆ ಹೆಚ್ಚು ಎನರ್ಜಿ ಇರುತ್ತದೆ.
  • ಆರೋಗ್ಯಕರವಾದ ಚರ್ಮ ನಿಮ್ಮದಾಗುತ್ತದೆ
  • ಪಫ್ಫಿ ಕಣ್ಣುಗಳು ದೂರಾಗಿ ಆರೋಗ್ಯಕರವಾಗಿ ಕಾಣುತ್ತೀರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!