HEALTH | ಮಧ್ಯಾಹ್ನದ ನಿದ್ದೆ ತಡೆಯೋಕಾಗದೇ ತೂಕಡಿಸ್ತೀರಾ? ಯಾಕೆ ಹೀಗಾಗತ್ತೆ ಗೊತ್ತಾ?

ಮನೆಯಲ್ಲಿ ಮಧ್ಯಾಹ್ನ ಮಲಗುವ ಅಥವಾ ನ್ಯಾಪ್‌ ಅಭ್ಯಾಸ ಎಷ್ಟೋ ಜನರಿಗಿದೆ. ಆದರೆ ಆಫೀಸ್‌ನಲ್ಲಿ ಕೆಲಸ ಮಾಡುವ ವೇಳೆಯೂ ಹೀಗೇ ಮಾಡಿದರೆ ಬಾಸ್‌ನಿಂದ ಬೈಸ್ಕೊಳೋದು ಗ್ಯಾರೆಂಟಿ. ಮಧ್ಯಾಹ್ನದ ನಿದ್ದೆಗೆ ಇದೇ ಕಾರಣ, ಈ ಅಭ್ಯಾಸಗಳ ಬಗ್ಗೆ ಗಮನ ಇಡಿ..

ಹೆವಿ ಮೀಲ್ಸ್‌ ಬೇಡ: ಮಧ್ಯಾಹ್ನ ಕುತ್ತಿಗೆಗೆ ಬರುವಷ್ಟು ಊಟ, ಎಣ್ಣೆಯುಕ್ತ ಆಹಾರ ಸೇವನೆ ಮಾಡಿ ಡೆಸ್ಕ್‌ನಲ್ಲಿ ಕೂತರೆ ನಿದ್ದೆ ಬರದೇ ಇನ್ನೇನು ಆದೀತು? ಮಧ್ಯಾಹ್ನದ ಊಟ ಕಡಿಮೆ ಮಾಡಿ

ಊಟ ತಡವಾಗಿ ಮಾಡುವುದು: ರಾತ್ರಿ ವೇಳೆಯಲ್ಲಿ ತಡವಾಗಿ ಊಟ ಮಾಡುವುದು ಕೂಡ ಹಗಲಿನಲ್ಲಿ ನಿದ್ದೆ ಬರಲು ಕಾರಣವಾಗುತ್ತದೆ. ತಡವಾಗಿ ಊಟ ಮಾಡಿದರೆ ಜೀರ್ಣಾಂಗ ವ್ಯವಸ್ಥೆಗೆ ತೊಂದರೆ ಉಂಟಾಗುತ್ತದೆ. ವಿಶೇಷವಾಗಿ ಊಟದ ಬಳಿಕ 3 ರಿಂದ 4 ಗಂಟೆಗಳ ನಂತರ ನಿದ್ರೆ ಮಾಡಬೇಕಾಗುತ್ತದೆ. ಸಾಧ್ಯವಾದಷ್ಟು ರಾತ್ರಿಯ ಊಟವನ್ನು ಬೇಗ ಮಾಡಬೇಕು. ಮಧ್ಯರಾತ್ರಿಯಲ್ಲಿ ಯಾವುದೇ ಆಹಾರ ಸೇವಿಸಬಾರದು.

ಎಲೆಕ್ಟ್ರಾನಿಕ್ ವಸ್ತುಗಳ ಬಳಕೆ: ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಫೋನ್ ಹಾಗೂ ಕಂಪ್ಯೂಟರ್‌ನಂತಹ ಎಲೆಕ್ಟ್ರಾನಿಕ್ ವಸ್ತುಗಳೊಂದಿಗೆ ಹೆಚ್ಚು ಕಾಲ ಕಳೆಯುತ್ತಾರೆ. ರಾತ್ರಿ ವೇಳೆ ಕಡಿಮೆ ಬೆಳಕಿನಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸುವುದರಿಂದ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ಊಟದ ಸಮಯದ ಮೊದಲು ಎಲೆಕ್ಟ್ರಾನಿಕ್ ಸಾಧನಗಳ ಬಳಕೆ ಸಾಧ್ಯವಾದಷ್ಟು ಮಿತಿಗೊಳಿಸೋದು ಉತ್ತಮ.

ಉತ್ತಮ ನಿದ್ರೆ ಅಗತ್ಯ: ಹಗಲು ನಿದ್ದೆ ತಪ್ಪಿಸಲು ರಾತ್ರಿ ಚೆನ್ನಾಗಿ ನಿದ್ರೆ ಮಾಡಬೇಕು. ನೆಮ್ಮದಿಯಿಂದ ನಿದ್ರೆ ಮಾಡಲು ನಮ್ಮ ಸುತ್ತಲಿನ ವಾತಾವರಣ ಚೆನ್ನಾಗಿರಬೇಕಾಗುತ್ತದೆ. ಮಲಗುವ ಕೊಠಡಿಯಲ್ಲಿ ಬೆಳಕು ಇಲ್ಲದಂತೆ ನೋಡಿಕೊಳ್ಳಬೇಕು. ನಿತ್ಯ ಒಂದೇ ಸಮಯದಲ್ಲಿ ಮಲಗಬೇಕು.

ಮದ್ಯ ಸೇವನೆ: ತಜ್ಞರು ಹೇಳುವಂತೆ ಮದ್ಯ ಕುಡಿಯುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ನಿದ್ರಾಹೀನತೆ ಸಮಸ್ಯೆಯು ದೇಹದ ಆರೋಗ್ಯ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದರಿಂದ ಮದ್ಯಪಾನದಿಂದ ದೂರವಿರಲು ತಜ್ಞರು ಸಲಹೆ ನೀಡುತ್ತಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!