ಪ್ರತಿದಿನ ಸ್ನಾನಕ್ಕೆ ಬಿಸಿನೀರು ಸಿಗದೇ ಹೋದ್ರೆ ಎಷ್ಟೋ ಮಂದಿ ಸ್ನಾನವೇ ಬೇಡ ಅಂತ ನಿರ್ಧಾರ ಮಾಡಿಬಿಡ್ತಾರೆ. ಹೊರಗೆ ಹೋಗಿ ಬಂದಮೇಲೆ ಸಂಜೆ ಬಿಸಿ ಬಿಸಿ ನೀರು ಹಾಕಿ ಸ್ನಾನ ಮಾಡಬಹುದು ಅಂತ ಅಂದುಕೊಳ್ತಾರೆ. ಆದರೆ ಬಿಸಿ ನೀರಿನ ಸ್ನಾನ ನೀವಂದುಕೊಂಡಷ್ಟು ಒಳ್ಳೆಯದಲ್ಲ. ಬಿಸಿ ನೀರು ಸ್ನಾನದಿಂದ ಏನೆಲ್ಲಾ ತೊಂದರೆ ಗೊತ್ತಾ?
- ಬಿಸಿ ನೀರಿನ ಸ್ನಾನದಿಂದ ಚರ್ಮ ಒಣಗಿ ಇರಿಟೇಟ್ ಆಗುತ್ತದೆ. ಅದರಲ್ಲಿಯೂ ಚಳಿಗಾಲದಲ್ಲಿ ಬಿಸಿ ನೀರಿನ ಸ್ನಾನ ಮೈ ಒಣಗಿ ಬಿರುಕು ಬಿಡುವಂತೆ ಮಾಡುತ್ತದೆ.
- ಈಗಾಗಲೇ ಚರ್ಮ ಸಂಬಂಧಿ ಸಮಸ್ಯೆಗಳಿದ್ದರೆ, ಅವು ಹೆಚ್ಚಾಗುತ್ತದೆ. ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಈಗಾಗಲೇ ಎದುರಿಸುತ್ತಿದ್ದರೆ ಆದಷ್ಟು ಬೆಚ್ಚಗಿನ ನೀರಿನ ಸ್ನಾನ ಮಾಡಿ.
- ಬಿಸಿನೀರಿನ ಸ್ನಾನದಿಂದ ಮೈ ಕಡಿತ ಬರುತ್ತದೆ. ಸ್ನಾನದ ತಕ್ಷಣ ಬಾಡಿ ಲೋಷನ್ ಹಚ್ಚಲೇಬೇಕು, ಇಲ್ಲವಾದರೆ ಚರ್ಮ ಒಣಗಿ, ಬಿಳಿ ಬಿಳಿಯಾದಂತೆ ಕಾಣುತ್ತದೆ.
- ನಿಮ್ಮ ಬ್ಲಡ್ ಪ್ರೆಶರ್ ಹೆಚ್ಚಾಗುತ್ತದೆ.
- ಸನ್‌ಬರ್ನ್ ರೀತಿಯ ಕಲೆಗಳು ಹಾಗೇ ದೇಹದಲ್ಲಿ ಉಳಿದುಬಿಡುತ್ತವೆ.