ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಲವರ ಮನೆಯಲ್ಲಿ ಗಂಡ ಹೆಂಡತಿ ಜಗಳ 24 ಗಂಟೆ ಇರುತ್ತೆ. ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಅನುಮಾನ, ಕೋಪ. ಮಾಡಿದ ಎಲ್ಲಾ ಕೆಲಸವೂ ತಪ್ಪು ಅನ್ನೋ ಮನಸ್ಥಿತಿ. ನಿಮ್ಮ ಪತಿಯಲ್ಲಿಯೂ ಈ ಗುಣಗಳಿದ್ದರೆ ಅವರನ್ನು ಈ ರೀತಿ ಹ್ಯಾಂಡಲ್ ಮಾಡಿ..
- ನಿಮ್ಮ ಪತಿ ಹೇಳುವ ಮಾತನ್ನು ಒಮ್ಮೆ ಸರಿಯಾಗಿ ಕೇಳಿಸಿಕೊಳ್ಳಿ.
- ಆಕ್ಷೇಪಣೆ ಬಗ್ಗೆ ಹೆಚ್ಚು ಪ್ರಶ್ನೆ ಕೇಳಿ.
- ಅವರ ಆಕ್ಷೇಪಣೆ ಸರಿ ಇದೆಯಾ ಯೋಚಿಸಿ.
- ಎಲ್ಲವನ್ನೂ ಸಮ್ಮತಿಸಿಕೊಂಡು ತಪ್ಪು ನಿಮ್ಮದೆಂದು ಭಾವಿಸಬೇಡಿ.
- ಸತ್ಯ ಏನಿದೆ ಅಂತ ವಿವರಿಸಿ.
- ಅವರ ಆಕ್ಷೇಪಣೆಯಿಂದ ನಿಮಗೆ ಎಷ್ಟು ನೋವಾಗಿದೆ ತಿಳಿಸಿ.
- ಎಲ್ಲದಕ್ಕೂ ಒಂದು ಇತಿಮಿತಿ ಇರಲಿ ಅನ್ನೋದನ್ನ ತಿಳಿಸಿ.
- ತಪ್ಪಾಗಿದ್ದರೆ ಕ್ಷಮೆ ಕೇಳಿ. ಮುಂದಿನ ಬಾರಿ ಸರಿ ಮಾಡಿಕೊಳ್ಳಿ.
- ಮಾತು- ಊಟ ಎಂದಿಗೂ ತ್ಯಜಿಸದಿರಿ: ಇದರಿಂದ ಕೋಪ, ಜಗಳ ಹೆಚ್ಚಾಗುತ್ತದೆ.
- ಅವರು ಮಾಡುವ ತಪ್ಪಿನ ಬಗ್ಗೆಯೂ ಅವರಿಗೆ ಅರಿವು ಮೂಡಿಸಿ.