September 14, 2026
Monday, September 14, 2026
spot_img

ಮನೆಯಲ್ಲಿ ಎಲ್ಲಾ ಇದೆ ಆದರೆ ಏನೋ ಮಿಸ್ಸಿಂಗ್‌ ಅನಿಸ್ತಿದೆಯಾ? ಈ ಐದು ಆಂಟಿಕ್‌ ವಸ್ತುಗಳನ್ನು ಇಂದೇ ತನ್ನಿ

ನಾವು ಈಗಿರುವ ಮಾಡ್ರನ್‌ ಇಂಟೀರಿಯರ್ಸ್‌ ಬಳಕೆ ಮಾಡಿ ಅಂದವಾಗಿ ಮನೆಯನ್ನು ಡಿಸೈನ್‌ ಮಾಡಿಕೊಳ್ತೀನಿ ಎಂದು ಎಲ್ಲವನ್ನೂ ರೆಡಿ ಮಾಡ್ಕೊಳ್ತೀರಿ. ಮನೆಯ ಇಂಟೀರಿಯರ್‌ ಅದ್ಭುತವಾಗಿದೆ ಎಂದು ಜನ ನಿಮ್ಮನ್ನು ಹೊಗಳಬಹುದು. ಆದರೆ ಇನ್ನು ಐದು ಅಥವಾ ಹತ್ತು ವರ್ಷಗಳ ನಂತರ ಇಂಟೀರಿಯರ್‌ ಡಿಸೈನ್‌ಗಳು ಬದಲಾಗುತ್ತವೆ. ಆಗ ನಿಮ್ಮ ಮನೆಯ ಡಿಸೈನ್‌ ಹಳತು ಎನಿಸುತ್ತದೆ. ಹೀಗಾಗಿ ಮನೆಯನ್ನು ನಮ್ಮ ರೂಟ್‌ಗಳಿಗೆ ಹೊಂದಿಸಿ ಟ್ರಡಿಷನಲ್‌ ಟಚ್‌ ನೀಡುವುದು ಉತ್ತಮವಾದ ನಿರ್ಧಾರವಾಗಿದೆ. ಉದಾಹರಣೆ ಅಂದ್ರೆ ಇದೀಗ ಟಿಶ್ಯೂ ಸೀರೆಗಳು ಟ್ರೆಂಡ್‌ ಇರಬಹುದು ಇನ್ನು ಐದು ವರ್ಷದಲ್ಲಿ ಈ ಟ್ರೆಂಡ್‌ ಹೋಗಿ ಇನ್ಯಾವುದೋ ಫ್ಯಾಬ್ರಿಕ್‌ ಟ್ರೆಂಡ್‌ಗೆ ಬರಬಹುದು. ಆದರೆ ಮೈಸೂರು ಸಿಲ್ಕ್‌ ಸೀರೆ ಯಾವಾಗಲೂ ಟ್ರೆಂಡಿಂಗ್‌ನಲ್ಲಿಯೇ ಇರುತ್ತದೆ. ಈ ರೀತಿ ನಿಮ್ಮ ಆಲೋಚನೆ ಇರಲಿ. ಮನೆಯ ಅಂದ ಹೆಚ್ಚಿಸೋಕೆ ಈ ಆಂಟಿಕ್‌ ಡಿಸೈನ್‌ ಹಾಗೂ ವಸ್ತುಗಳನ್ನು ಬಳಸಬಹುದು..

ಹಿಂದಿನ ಕಾಲದಲ್ಲಿ ಶೋ ಕೇಸ್‌ ಎನ್ನುವ ಕಾನ್ಸೆಪ್ಟ್‌ ಇರಲಿಲ್ಲ. ಆಗೆಲ್ಲ ದೇವರ ಮನೆಯೂ ಗೂಡಿನಲ್ಲೇ ಇರುತ್ತಿತ್ತು ಹಾಗೇ ಮಾತ್ರೆ ಡಬ್ಬಿ, ಸೀಮೆ ಎಣ್ಣೆ ಬುಡ್ಡಿ ಇನ್ನಿತರ ವಸ್ತುಗಳನ್ನು ಗೂಡು ಮಾಡಿ ಇಡುತ್ತಿದ್ದರು. ಈ ಡಿಸೈಸ್‌ಗೆ ಮರುಜೀವ ನೀಡಿ. ಮನೆಯಲ್ಲಿ ಗೂಡುಗಳನ್ನು ಮಾಡಿಸಿ, ಅದಕ್ಕೊಂದು ಲೈಟ್‌ ಬಿಡಿಸಿ ಶೋಕೇಸ್‌, ಬುಕ್‌ರ್ಯಾಕ್‌ನಂತೆ ಪರಿವರ್ತನೆ ಮಾಡಿ.

ಕಂಬವಿಲ್ಲದೆ ಮನೆ ಟ್ರಡಿಷನಲ್‌ ಆಗಿ ಕಾಣಿಸೋಕೆ ಸಾಧ್ಯವೇ ಇಲ್ಲ. ಇಡೀ ಕಂಬವನ್ನು ಹಾಕುವಷ್ಟು ದೊಡ್ಡ ಮನೆ ಇಲ್ಲ ಅಂದ್ರೂ ಅರ್ಧ ಕಂಬವನ್ನೂ ಇಡಿಸಬಹುದು. ಒಂದು ಕಂಬ ನಿಮ್ಮ ಇಡೀ ಮನೆಯ ಲುಕ್ಸ್‌ನ್ನು ಬೇರೆಯ ಲೆವೆಲ್‌ಗೆ ಕೊಂಡೊಯ್ಯುತ್ತದೆ.

ಎಲ್ಲರೂ ಮನೆಯ ಮುಂದೆ ಹಾಕುವ ರಂಗೋಲಿ ಇದೀಗ ಟ್ರೆಂಡಿಂಗ್‌ ಆಗಿದೆ. ಇದು ನಿಮ್ಮ ಮನೆಗೆ ಸಂಪ್ರದಾಯದ ಘಮ ಬೀರಲಿದೆ. ಹಿಂದೆ ಕೊಟ್ಟಿಗೆಯಲ್ಲಿ ಅಂಗಳದಲ್ಲಿ ಕಾಣುತ್ತಿದ್ದ ರಂಗೋಲಿ ಇದೀಗ ಗೋಡೆ ಮೇಲೆ ಡೆಕೋರ್‌ ಆಗಿ ಕಾಣಿಸುತ್ತದೆ.

ಮನೆಯನ್ನು ಸೆಕ್ಯೂರ್‌ ಮಾಡುವ ಬಾಗಿಲಿನ ಡಿಸೈನ್‌ ಬಗ್ಗೆಯೂ ಸ್ವಲ್ಪ ಗಮನಕೊಡಿ. ಮನೆಯ ಬಾಗಿಲು ನಿಮ್ಮ ವ್ಯಕ್ತಿತ್ವದ ಬಗ್ಗೆ ಹೇಳಬಲ್ಲದು. ದೇವಸ್ಥಾನಗಳ ಬಾಗಿಲಿನ ರೀತಿ ಟ್ರಡಿಷನಲ್‌ ಕೆತ್ತನೆ ಹೊಂದಿರುವ ಬಾಗಿಲುಗಳನ್ನು ಹಾಕಿಸಿ. ನಿಮ್ಮ ಮನೆಯ ಲುಕ್‌ ಬದಲಾಗುವುದನ್ನು ಗಮನಿಸಿ.

ಹಿಂದೆಲ್ಲಾ ಅಟ್ಟದ ಮನೆಗಳಿದ್ದ ಕಾರಣ ಅದಕ್ಕೆ ಮರದ ಪೀಸ್‌ಗಳನ್ನು ಸೇಫ್ಟಿಯಾಗಿ ನೀಡಲಾಗುತ್ತಿತ್ತು. ಇದೀಗ ಆ ಎಲಿಮೆಂಟ್‌ನ್ನು ಡೆಕೋರ್‌ ಆಗಿ ಬಳಸಲಾಗುತ್ತಿದೆ. ಹಳೆಯ ಕಾಲದ ಎಸೆನ್ಸ್‌ನ್ನು ತೆಗೆದುಕೊಂಡು ಬಾಳಿಕೆ ಬರುವಂತಹ ಅಟ್ಟದ ದಿಮ್ಮೆಗಳನ್ನು ನೀಡಬಹುದು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !