September 26, 2026
Saturday, September 26, 2026
spot_img

ಮನೆಯಲ್ಲಿ ಹಸಿ ತೆಂಗಿನಕಾಯಿ ಇದೆಯಾ: ಹಾಗಾದ್ರೆ ಈ ಸ್ಪೆಷಲ್‌ ಸ್ವೀಟ್‌ ಟ್ರೈ ಮಾಡಿ

ಮನೆಯಲ್ಲಿ ತೆಂಗಿನಕಾಯಿ ಇದ್ದರೆ ಈ ತಿಂಡಿ ಮಾಡುವುದನ್ನು ಮಿಸ್‌ ಮಾಡ್ಬೇಡಿ. ಇದು ತುಂಬಾ ಹಲೆಯ ಕಾಲದ ತಿಂಡಿ. ಮನೆಯಲ್ಲಿ ಮಕ್ಕಳು ಏನಾದ್ರೂ ಬೇಕು ಎಂದು ಹಠ ಮಾಡಿದಾಗಲೆಲ್ಲ ಅಜ್ಜಿ ಮಾಡಿಕೊಡುತ್ತಿದ್ದ ಸಿಹಿ ಎಂದರೆ ಈ ತೆಂಗಿನಕಾಯಿ ಹಲ್ವಾ. ನೀವು ಒಮ್ಮೆ ಟ್ರೈ ಮಾಡಿ ನೋಡಿ.

ಬೇಕಾಗುವ ಸಾಮಗ್ರಿಗಳು

ಹಸಿ ತೆಂಗಿನಕಾಯಿ ತುರಿ

ಬೆಲ್ಲ ಅಥವಾ ಸಕ್ಕರೆ

ತುಪ್ಪ

ಹಾಲು

ಏಲಕ್ಕಿ ಪುಡಿ

ಗೋಡಂಬಿ ಮತ್ತು ದ್ರಾಕ್ಷಿ

ಮಾಡುವ ವಿಧಾನ

ಮೊದಲು ಹಸಿ ತೆಂಗಿನಕಾಯಿ ತುರಿಯನ್ನು ಮಿಕ್ಸಿ ಜಾರ್‌ಗೆ ಹಾಕಿ, ಸ್ವಲ್ಪ ನೀರು ಅಥವಾ ಹಾಲು ಸೇರಿಸಿ ರುಬ್ಬಿಕೊಳ್ಳಬೇಕು. ನಂತರ ಒಂದು ಬಾಣಲೆಯಲ್ಲಿ 1 ಚಮಚ ತುಪ್ಪ ಬಿಸಿ ಮಾಡಿ ಗೋಡಂಬಿ ಮತ್ತು ದ್ರಾಕ್ಷಿಯನ್ನು ಗೋಲ್ಡನ್ ಬ್ರೌನ್ ಬಣ್ಣ ಬರುವವರೆಗೆ ಹುರಿದುಕೊಳ್ಳಬೇಕು. ನಂತರ ಅದೇ ಬಾಣಲೆಗೆ ಉಳಿದ ತುಪ್ಪ ಮತ್ತು ರುಬ್ಬಿದ ತೆಂಗಿನಕಾಯಿ ಮಿಶ್ರಣವನ್ನು ಹಾಕಿ ಹಸಿ ವಾಸನೆ ಹೋಗುವವರೆಗೆ 3-4 ನಿಮಿಷ ಹುರಿದು, ನಂತರ ಇದಕ್ಕೆ ಹಾಲು ಮತ್ತು ಬೆಲ್ಲ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಬೇಕು.

ಬಳಿಕಮಿಶ್ರಣವು ಬಾಣಲೆಯ ತಳ ಬಿಟ್ಟು, ತುಪ್ಪವು ತೇಲುವವರೆಗೂ ಕೈಯಾಡಿಸುತ್ತಿರಬೇಕು. ನಂತರ ಕೊನೆಯದಾಗಿ ಏಲಕ್ಕಿ ಪುಡಿ ಮತ್ತು ಹುರಿದಿಟ್ಟುಕೊಂಡ ಗೋಡಂಬಿ-ದ್ರಾಕ್ಷಿ ಸೇರಿಸಿ ಮಿಕ್ಸ್ ಮಾಡಿದರೆ, ತೆಂಗಿನಕಾಯಿ ಹಲ್ವಾ ಸಿದ್ಧ.

Must Read