ಮೇಘನಾ ಶೆಟ್ಟಿ ಶಿವಮೊಗ್ಗ
ಈಗಿನ ಜೆನ್‌ಝೀ ಜನರೇಷನ್‌ನಲ್ಲಿ ಬುಕ್ ಓದೋರು ಲೇಮ್, ಔಟ್ ಆಫ್ ಫ್ಯಾಷನ್ ಆಗಿಬಿಡ್ತಾರೆ. ಎಷ್ಟೋ ಮಂದಿ ಸ್ನೇಹಿತರು ಆಡ್ಕೋತಾರೆ ಅಂತ ಯಾರಿಗೂ ಗೊತ್ಥಾಗದಂತೆ ಮನೆಯಲ್ಲಿ ಮಾತ್ರ ಪುಸ್ತಕ ಹುಳುಗಳಾಗಿರ್ತಾರೆ.
ಅದೇ ಮಿಲೇನಿಯಲ್ ಜನರೇಷನ್ ಅಂದ್ರೆ ನಾವು, ನೀವು.. ಇದರಲ್ಲಿ ಎಷ್ಟೋ ಮಂದಿ ಪುಸ್ತಕ ಪ್ರೇಮಿಗಳು, ಈಗಲೂ ಪಬ್ಲಿಕ್‌ನಲ್ಲಿ ಕೂತು ಬುಕ್ಸ್ ಓದೋಕೆ ಯಾವ ಬೇಸರವೂ ಇಲ್ಲ. ಇನ್ನೂ ಹಲವರು ಜೆನ್‌ಝೀಗೆ ಸೇರಿಕೊಳ್ಳೋದಕ್ಕೆ ಬುಕ್ಸ್ ಒಂಥರಾ ಬೋರಿಂಗ್ ವಿಷಯ ಅನ್ನೋ ರೀತಿ ನಡೆದುಕೊಳ್ತಾರೆ.
ನಮ್ಮ ಮಾತು ಕೇಳಿ, ಇಂದೇ ಇಂಟ್ರೆಸ್ಟಿಂಗ್ ಬುಕ್ ಒಂದನ್ನು ಖರೀದಿ ಮಾಡಿ ಓದಿ.. ಯಾಕೆ ಓದಬೇಕು ಗೊತ್ತಾ?
ರೀಸನ್ 1
ನೀವು ಜಾಣರಾಗ್ತೀರಿ ಸ್ವಾಮಿ.. ಹೌದು, ನೀವು ಬಳಸುವ ಪದಗಳು, ನಿಮ್ಮ ಮಾತುಗಳ ಆಳದಿಂದಲೇ ನೀವೆಂಥ ವ್ಯಕ್ತಿ ಅನ್ನೋದು ನಿರ್ಧಾರವಾಗತ್ತೆ. ಪುಸ್ತಕಗಳನ್ನು ಓದಿ, ಮಾತಾಡೋಕೆ ಸುಲಭ, ಅದ್ಭುತ ವಾಗ್ಮಿಯಾಗ್ತೀರಿ.
ರೀಸನ್ 2
ಇಷ್ಟು ವರ್ಷಗಳಿಂದ ನೀವು ನೋಡಿಕೊಂಡ ಬಂದ ಸಿನಿಮಾ, ಸೀರಿಸ್ ಎಲ್ಲವನ್ನೂ ನೀವು ನೆನಪಿಟ್ಟುಕೊಳ್ಳದೇ ಇರಬಹುದು. ಆದರೆ ಅದರ ಜ್ಞಾನ ನಿಮ್ಮ ತಲೆಗೆ ಹೋಗಿದ್ಯೋ ಇಲ್ವೋ? ಹಾಗೇ ಬುಕ್ಸ್ ಓದುವಾಗ ಮಾಮೂಲಿ ಎನಿಸಿದ್ರೂ ಜ್ಞಾನ ನಿಮ್ಮ ತಲೆಗೆ ಹೊಕ್ಕುತ್ತದೆ. ಇಮ್ಯಾಜಿನೇಷನ್ ಕೂಡ ಬೆಳೆಯುತ್ತದೆ.
ರೀಸನ್ 3
ಮಾತು ಕಡಿಮೆ ಮಾಡಿ, ಹೌದು, ಮಾತಾಡೋದು ಕಡಿಮೆ ಮಾಡಿ ಪುಸ್ತಕ ಓದೋದು ಹೆಚ್ಚು ಮಾಡಿ. ರಾಕೆಟ್ ಸೈನ್ಸ್ ಓದಿ ಅಂತ ಹೇಳೋದಿಲ್ಲ. ನಿಮ್ಮಿಷ್ಟದ ಕಾದಂಬರಿಯಿಂದಲೇ ಶುರು ಮಾಡಿ ಯಾರ್ ಬೇಡ ಅಂತಾರೆ. ತಿಳ್ಕೊಳಕೆ ಸಾವಿರ ವಿಷಯ ಇದೆ, ನೀವೇ ಮಹಾಜ್ಞಾನಿ ಅಲ್ಲ.
ರೀಸನ್ 4
ನಿಮ್ಮ ಮನಸ್ಸಿಗೆ ಕಲ್ಲು ಬಿದ್ದು ಅಲ್ಲೋಲ ಕಲ್ಲೋಲ ಆಗಿದೆ ಎಂದೇ ಇಟ್ಟುಕೊಳ್ಳಿ. ಯಾವುದೋ ಕಷ್ಟದ ಸಮಯ ಎಂದೇ ಅಂದುಕೊಳ್ಳಿ. ಪುಸ್ತಕ ಓದಿ ಅದು ಬದುಕಿನೆಡೆ ನಿಮಗೆ ಹೊಸ ಆಯಾಮ ನೀಡುತ್ತದೆ. ನೀವು ಲೈಫನ್ನು ನೋಡೋ ರೀತಿ ಚೇಂಜ್ ಮಾಡುತ್ತದೆ. ಬುಕ್ಸ್ ಬಂದೂಕುಗಳನ್ನೇ ನಿಲ್ಲಿಸಿದೆಯಂತೆ ನಿಮ್ಮ ಆಲೋಚನೆಗಳನ್ನು ನಿಲ್ಲಿಸೋದಿಲ್ವಾ?
ರೀಸನ್ 5
ಈ ನಿಮ್ಮ ಒತ್ತಡ, ಮೆಂಟಲ್ ಹೆಲ್ತ್ ಎಲ್ಲವನ್ನೂ ಓದುವುದರಿಂದ ಸುಧಾರಿಸಬಹುದು. ಒಂದು ಗಂಟೆ ಸೀರೀಸ್ ನೋಡೋ ಬದಲು ನಾಲ್ಕು ಪುಟ ಪುಸ್ತಕ ಓದಿ, ಜ್ಞಾನ ಸಿಗತ್ತೆ, ಕಣ್ಣುರಿ ಇಲ್ಲ, ನಿಮ್ಮ ಮನೆಯಲ್ಲಿ ಪುಟಾಣಿಗಳಿದ್ದರೆ ಅವರು ಬುಕ್ಸ್ ಇಷ್ಟಪಡುತ್ತಾರೆ. ಇನ್ನೊಂದೇನಂದ್ರೆ ಬುಕ್ಸ್‌ನ್ನು ಚಾರ್ಜ್ ಮಾಡ್ಬೇಕಿಲ್ಲ. ಯಾವಾಗ್ಲೂ ಓದ್ತಾನೆ ಇರಬಹುದು.
ಮತ್ಯಾಕೆ ತಡ? ಇಂದೇ ಓದುವ ಅಭ್ಯಾಸ ಆರಂಭಿಸಿ, ಮೊದಲೆರಡು ದಿನ ಬೋರಿಂಗ್ ಅನಿಸಲಿ ತೊಂದರೆ ಇಲ್ಲ, ಕ್ವಿಟ್ ಮಾಡಬೇಡಿ. 15 ದಿನ ತಪ್ಪದೇ ಓದಿ, ಬುಕ್ಸ್ ನಿಮ್ಮ ಬೆಸ್ಟ್ ಫ್ರೆಂಡ್ ಆಗೋದು ಗ್ಯಾರೆಂಟಿ.