ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿರುವ ಪ್ರಿಯಾಂಕ್‌ ಖರ್ಗೆ ರಾಜಕೀಯ ಜರ್ನಿ ಬಗ್ಗೆ ಗೊತ್ತಾ?

ಹೊಸದಿಗಂತ ವರದಿ ಕಲಬುರಗಿ: 

ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ ಸೇರಿದಂತೆ ಎಂಟು ಜನ ಶಾಸಕರು ಇಂದು ಪ್ರಮಾಣ ವಚನ ಸ್ವೀಕರಾ ಮಾಡಲಿದ್ದು, ಅದರಲ್ಲಿ ಕಲಬುರಗಿ ಜಿಲ್ಲೆಯ ಚಿತ್ತಾಪುರ ಕ್ಷೇತ್ರದಿಂದ ಮೂರನೇ ಬಾರಿಗೆ ಚುನಾಯಿತರಾದ ಪ್ರಿಯಾಂಕ್ ಖಗೆ೯ ಸಹ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ಇವರ ರಾಜಕೀಯ ಜರ್ನಿ ಹೇಗಿತ್ತು ಎಂಬುದರ ಮಾಹಿತಿ ಇಲ್ಲಿದೆ.

ಪೂರ್ಣ ಹೆಸರು: ಪ್ರಿಯಾಂಕ್ ಎಂ. ಖರ್ಗೆ.
ಜನನ : ನವೆಂಬರ್ 22, 1978.
ಸ್ಥಳ: ಬೆಂಗಳೂರು.
ವಿದ್ಯಾಭ್ಯಾಸ : ಡಿಪ್ಲೋಮಾ ಇನ್ ಗ್ರಾಫಿಕ್ಸ್ ಮತ್ತು ‌ಎನಿಮೇಷನ್.
ವೃತ್ತಿ : ದೇಶ ಹಾಗೂ ವಿದೇಶ ಕಾರ್ಪೋರೇಟ್ ಕಂಪನಿಗಳಲ್ಲಿ ಕೆಲಸ.
ಹಾಲಿ ವಾಸ: ಕಲಬುರಗಿ
ಪಕ್ಷ: ಕಾಂಗ್ರೆಸ್
ಪತ್ನಿ: ಶೃತಿ ಖರ್ಗೆ
ಮಕ್ಕಳು: ಅಮಿತವ್ ಹಾಗೂ ಆಕಾಂಕ್ಷ್

ರಾಜಕೀಯ ಪ್ರವೇಶ: 1998 ರಲ್ಲಿ ಎನ್ ಎಸ್ ಯು ಐ ನ ಸದಸ್ಯರಾಗಿ ರಾಜಕೀಯ ಪ್ರವೇಶ.

ಶಾಸಕರಾಗಿ ಆಯ್ಕೆ: 2013, 2018 ಹಾಗೂ 2023.
ಮತಗಳ ಅಂತರ : 13640 ಮತಗಳು.

ಮೊದಲ ಬಾರಿ ಸಚಿವ: 38ನೇ ವರ್ಷ ವಯಸ್ಸಿನಲ್ಲಿ 2016 ರಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ ಸಂಪುಟದಲ್ಲಿ ಐಟಿ, ಬಿಟಿ ಹಾಗೂ ಪ್ರವಾಸೋದ್ಯಮ ಸಚಿವರಾಗಿ ಸೇವೆ.

ಎರಡನೆಯ ಬಾರಿ ಸಚಿವ: ಅಂದಿನ ಸಿಎಂ ಎಚ್ ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ 2018 ರಲ್ಲಿ ಸಮಾಜ ಕಲ್ಯಾಣ ಸಚಿವರಾಗಿ ಸೇವೆ.

2001-2005 ಎನ್ಎಸ್ಯುಐ ಕಾಲೇಜ್ ಪ್ರಧಾನ ಕಾರ್ಯದರ್ಶಿ.

2005-2007 ರಾಜ್ಯ ಎನ್ ಎಸ್ ಯು ಐ ಪ್ರಧಾನ ಕಾರ್ಯದರ್ಶಿ.
2007-2011 ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ.

2011-2014 ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಂತರ ರಾಜ್ಯ ಯುವಕಾಂಗ್ರೆಸ್ ಉಪಾಧ್ಯಕ್ಷ ರಾಗಿ ನೇಮಕ.

ಮೊದಲ ಬಾರಿ ಅಸೆಂಬ್ಲಿಗೆ ಸ್ಪರ್ಧೆ: 2009 ರ ಉಪಚುನಾವಣೆಯಲ್ಲಿ ಚಿತ್ತಾಪುರ ಎಸ್ ಸಿ ಮೀಸಲು ಕ್ಷೇತ್ರದಿಂದ ಸ್ಪರ್ಧೆ, ಸೋಲು.

ಮೊದಲ ಬಾರಿ ಗೆಲುವು : 2013 ರಲ್ಲಿ ಚಿತ್ತಾಪುರ ಕ್ಷೇತ್ರದಿಂದ ಆಯ್ಕೆ.

ಎರಡನೆಯ ಬಾರಿ ಗೆಲುವು: 2018 ರಲ್ಲಿ ಚಿತ್ತಾಪುರ ದಿಂದ ಆಯ್ಕೆ.

ಮೂರನೆಯ ಬಾರಿ ಗೆಲುವು: 2023 ರಲ್ಲಿ ಚಿತ್ತಾಪುರದಿಂದ ಆಯ್ಕೆ.

ಸಮಾಜ ಕಲ್ಯಾಣ ಸಚಿವರಾಗಿದ್ದಾಗ ಜಾರಿಗೆ ತಂದ ಪ್ರಮಖ ಯೋಜನೆಗಳು : ಐರಾವತ, ಪ್ರಬುದ್ಧ, ಪ್ರಗತಿ, ಸಮೃದ್ದಿ ಹಾಗೂ ಉನ್ನತಿ.

ಶೈಕ್ಷಣಿಕ ಸಾಧನೆ : ವಾಡಿ ಹಾಗೂ ಚಿತ್ತಾಪುರದಲ್ಲಿ ಎಜುಕೇಷನ್ ಹಬ್ ನಿರ್ಮಾಣ.

ಬೆಂಗಳೂರಿನಲ್ಲಿ ಬೆಂಗಳೂರು ಡಾ. ಬಿ.ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕಾನಾಮಿಕ್ಸ್ ಯೂನಿವರ್ಸಿಟಿ ( ಬಿಎಎಸ್ಇ).

ಬಿಎಎಸ್ಇ ನಲ್ಲಿ ಎರಡು ವರ್ಷ ಕೋ‌ ಚೇರ್ಮನ್ ಆಗಿ ಸೇವೆ.

ಬಿಜೆಪಿಯ ಘಟಾನುಘಟಿ ‌ನಾಯಕರ ಪ್ರಚಾರದ ನಡುವೆಯೂ ಪ್ರಿಯಾಂಕ್ ಅವರ ಜನಪರ, ಜೀವಪರ ಹಾಗೂ ಜಾತ್ಯಾತೀತ ನಿಲುವುಗಳಿಗೆ ಮತದಾರರು ಜೈ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!