ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಸಿದ್ಧ ಮೆಸೆಂಜರ್ ಅಪ್ಲಿಕೇಷನ್ ಆಗಿರುವ ವಾಟ್ಸಾಪ್ ಹೊಸ ಅಪ್ಡೇಟ್ ಒಂದನ್ನು ಬಿಡುಗಡೆ ಮಾಡಿದ್ದು ಇದರಿಂದ ಬಳಕೆದಾರರಿಗೆ ಹೆಚ್ಚಿನ ಅನುಕೂಲವಾಗಲಿದೆ. ಗ್ರುಪ್ ಕಾಲ್ ಗಳಲ್ಲಿ ಹೋಸ್ಟ್ ಆಗಿರುವವರು ಇತರರನ್ನು ಮ್ಯೂಟ್ ಮಾಡಬಹುದಾದ ಹೊಸ ವೈಶಿಷ್ಟ್ಯವನ್ನು ಸೇರಿಸಲಾಗಿದೆ. ಇತ್ತೀಚೆಗಷ್ಟೇ ಗ್ರುಪ್ ಕಾಲ್ ನಲ್ಲಿ ಭಾಗವಹಿಸುವವರ ಸಂಖ್ಯೆಯನ್ನು ವಾಟ್ಸಾಪ್ ಏರಿಕೆ ಮಾಡಿತ್ತು. ಆದರೆ ಕೆಲವು ಫೀಚರ್‌ಗಳು ಇದರಲ್ಲಿ ಮಿಸ್ ಆಗಿದ್ದವು.
ಈಗ ಹೊಸ ಅಪ್ಡೇಟ್ ನಲ್ಲಿ ಹೋಸ್ಟ್ ಆದವರಿಗೆ ಇತರ ಪಾರ್ಟಿಸಿಪಂಟ್ಸ್ ಗಳನ್ನು ಮ್ಯೂಟ್ ಮಾಡುವ ಅವಕಾಶ ಕಲ್ಪಿಸಲಾಗಿದ್ದು ಇದು ಗುಂಪುಕರೆಗಳಲ್ಲಿ ನಾಯ್ಸ್ ಕ್ರಿಯೇಟ್ ಮಾಡುವವರನ್ನು ತಡೆಯಲು ಸಹಾಯಕವಾಗುತ್ತದೆ. ಅಲ್ಲದೇ ತಮ್ಮನ್ನು ಮ್ಯೂಟ್ ಮಾಡಿಕೊಳ್ಳಲು ಮರೆತಿರುವವರನ್ನು ಮ್ಯೂಟ್ ಮಾಡಲು ಸಹಾಯಕವಾಗಲಿದೆ. ಅಲ್ಲದೇ ನಿರ್ದಿಷ್ಟ ವ್ಯಕ್ತಿಗೆ ಅದೇ ಕರೆಯಲ್ಲಿ ಸಂದೇಶವನ್ನೂ ಸಹ ಕಳುಹಿಸಬಹುದಾದ ವ್ಯವಸ್ಥೆಯನ್ನು ಒಳಗೊಂಡಿದೆ. ಅಲ್ಲದೇ ಗ್ರುಪ್ ಕರೆ ಮಿಸ್ಡ್ ಕಾಲ್ ಆದಲ್ಲಿ ಇನ್ನೂ ಮುಗಿದೆಲ್ಲವೆಂದಾದರೆ ನೀವು ತಕ್ಷಣವೇ ಆ ಗುಂಪನ್ನು ಸೇರಿಕೊಳ್ಳಲೂ ಬಹುದಾಗಿದೆ.